Site icon Vistara News

IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

IPL 2024

IPL 2024: What Is Written in Sanskrit On the IPL Trophy Which Sunrisers Hyderabad Or Kolkata Knight Riders Will Lift

ಚೆನ್ನೈ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಆವೃತ್ತಿ(IPL 2024) ಕೊನೆಯ ಹಂತಕ್ಕೆ ಬಂದು ನಿಂತಿದೆ. ನಾಳೆ(ಭಾನುವಾರ) ನಡೆಯುವ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ಮತ್ತು ಹೈದರಾಬಾದ್​ ತಂಡಗಳು ಕದಾಟ ನಡೆಸಲಿದೆ. ಟೂರ್ನಿಗೆ ವಿಧ್ಯುಕ್ತ ಚಾಲನೆ ಸಿಕ್ಕ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿಯೇ ಕೂಟಕ್ಕೆ ತೆರೆ ಬೀಳಲಿದೆ. ಈ ಬಾರಿ ಚಾಂಪಿಯನ್​ ಯಾರಾಗಬಹುದು ಎನ್ನುವ ಕುತೂಹಲದ ಮಧ್ಯೆ ಟ್ರೋಫಿಯಲ್ಲಿ(IPL Trophy) ಬರೆದಿರುವ ಸಂಸ್ಕೃತ ಶ್ಲೋಕದ(IPL Trophy Shlok) ಅರ್ಥವೇನು? 1983ರ ವಿಶ್ವಕಪ್(1983 Cricket World Cup) ಟ್ರೋಫಿಗೂ ಇರುವ ನಂಟೇನು?​ ಎಂಬ ಮತ್ತೊಂದು ಕುತೂಹಲ ಅಭಿಮಾನಿಗಳದ್ದು.

ಭಾರತದ ಮೊದಲ ವಿಶ್ವಕಪ್​ ನಂಟು


ಐಪಿಎಲ್​ ಟ್ರೋಫಿಯಲ್ಲಿ ಬರೆದಿರುವ ಸಂಸ್ಕೃತ ಶ್ಲೋಕಕ್ಕೂ 1983ರ ವಿಶ್ವಕಪ್ ಟ್ರೋಫಿಗೂ ನಂಟಿದೆ. ಹೌದು, ಭಾರತ ತಂಡ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ”(Yatra Pratibha Avsara Prapnotihi) ಎಂಬ ಸಂಸ್ಕೃತ ಶ್ಲೋಕವೊಂದನ್ನು ಬರೆಯಲಾಗಿತ್ತು. ಇದೇ ಶ್ಲೋಕವನ್ನು ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆಗಳು ಇರುತ್ತಾರೋ ಅಲ್ಲಿ ಅವಕಾಶವೂ ಇರುತ್ತದೆ ಎಂದು. ಇದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಐಪಿಎಲ್​ ಟ್ರೋಫಿಯ ಮೇಲೂ ಈ ಶ್ಲೋಕವನ್ನು ಕೆತ್ತಲಾಗಿದೆ.


1983ರಲ್ಲಿ ಕಪಿಲ್​ ದೇವ್​ ಸಾರಥ್ಯದ ಭಾರತ ತಂಡ ಲಂಡನ್​ಗೆ ವಿಶ್ವಕಪ್​ ಆಡಲು ತೆರಳಿದ್ದಾಗ ಭಾರತ ತಂಡವನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನ ಮಾಡಲಾಗಿತ್ತು. ಅದರಲ್ಲೂ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮಾಧ್ಯಮಗಳು ಕೆಲ ಸವಾಲನ್ನು ಹಾಕಿದ್ದವು. ಸ್ವತಃ ಭಾರತೀಯರೀಗೂ ಕಪ್​ ಗೆಲ್ಲುವ ವಿಶ್ವಾಸವಿರಲಿಲ್ಲ. ಆದರೆ ಅಂದು ಕಪೀಲ್​ ದೇವ್​ ಪಡೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ಕಪಿಲ್​ ಸಾರಥ್ಯದಲ್ಲಿ ಗೆದ್ದ ವಿಶ್ವ ಕಪ್​ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಐಪಿಎಲ್​ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಈ ಕಾರಣದಿಂದ ಟ್ರೋಫಿ ಮೇಲೆ ಬರೆದಿರುವ ಶ್ಲೋಕ ಅರ್ಥಪೂರ್ಣವಾಗಿದೆ.

ಇದನ್ನೂ ಓದಿ IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

ಒಟ್ಟು 46.5 ಕೋಟಿ ರೂ. ಬಹುಮಾನ ಮೊತ್ತ


ಫೈನಲ್​ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್‌ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್​ ಮತ್ತು ಆರ್​ಸಿಬಿ ಪ್ಲೇ ಆಫ್​ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್​ಗೆ(7 ಕೋಟಿ) ಮತ್ತು ಆರ್​ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

Exit mobile version