Site icon Vistara News

IPL 2024: ಐಪಿಎಲ್​ನಲ್ಲಿ​ ಅತಿ ವೇಗದ ಎಸೆತ ಎಸೆದ ಟಾಪ್​ 5 ಬೌಲರ್​ಗಳು ಯಾರು?

IPL 2024

ಬೆಂಗಳೂರು: ಶನಿವಾರ ನಡೆದ ಐಪಿಎಲ್​ನ(IPL 2024) ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡದ ಯುವ ಆಟಗಾರ ಮಾಯಾಂಕ್​ ಯಾದವ್ ಅತಿ ವೇಗದ ಎಸೆತ ಎಸೆದು ಐಪಿಎಲ್​ನಲ್ಲಿ ದಾಖಲೆ ಬರೆದಿದ್ದರು. ನಾಲ್ಕು ಓವರ್​ ಬೌಲಿಂಗ್​ ನಡೆಸಿದ ಅವರು ಒಂದು ಎಸೆತವು 155.8kmph ವೇಗದಲ್ಲಿ ಎಸೆದಿದ್ದರು. ಈ ಸಾಧನೆಯೊಂದಿಗೆ ಈ ಐಪಿಎಲ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇದುವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)ನಲ್ಲಿ ಕೇವಲ ಐವರು ಬೌಲರ್​ಗಳು ಮಾತ್ರ ಗಂಟೆಗೆ 155 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ. ಈ ಐವರು ಬೌಲರ್​ಗಳು ಯಾರೆಂಬ ಮಾಹಿತಿ ಇಂತಿದೆ.

ಶಾನ್‌ ಟೈಟ್‌


ಆಸ್ಟ್ರೇಲಿಯಾದ ಮಾಜಿ ವೇಗಿ ಶಾನ್‌ ಟೈಟ್‌(Shaun Tait) ಅವರು ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಎಸೆತ ಎಸೆದ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರು 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ವೇಳೆ 157.71 Kmph ವೇಗದಲ್ಲಿ ಚೆಂಡೆಸೆದಿದ್ದರು. ಒಟ್ಟು 21 ಐಪಿಎಲ್​ ಪಂದ್ಯ ಆಡಿರುವ ಇವರು 23 ವಿಕೆಟ್​ ಪಡೆದಿದ್ದಾರೆ.​


ಲಾಕಿ ಫ‌ರ್ಗ್ಯುಸನ್‌


ನ್ಯೂಜಿಲ್ಯಾಂಡ್​ ತಂಡದ ಬೌಲಿಂಗ್​ ಆಲ್​ರೌಂಡರ್​, ಪ್ರಸ್ತುತ ಆರ್​ಸಿಬಿ ತಂಡದಲ್ಲಿರುವ ಲಾಕಿ ಫ‌ರ್ಗ್ಯುಸನ್‌(Lockie Ferguson) ಅವರಿಗೆ ಈ ಸಾಧಕರ ಯಾರಿಯಲ್ಲಿ 2ನೇ ಸ್ಥಾನ. ಫ‌ರ್ಗ್ಯುಸನ್‌ 2022ರಲ್ಲಿ ರಾಜಸ್ಥಾನ್​ ರಾಯಲ್ಸ್​ ಎದುರಿನ ಫೈನಲ್​ ಪಂದ್ಯದಲ್ಲಿ ಗುಜರಾತ್​ ಪರ ಕಣಕ್ಕಿಳಿದು ಗಂಟೆಗೆ 157.3 kmph ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದಿದ್ದರು. ಫೈನಲ್​ನಲ್ಲಿ ಗುಜರಾತ್​ ತಂಡ ಗೆಲುವು ಸಾಧಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಇದನ್ನೂ ಓದಿ IPL 2024: ಆರ್​ಸಿಬಿ ಸೋಲಿಗೆ ವಿರಾಟ್​ ಕೊಹ್ಲಿಯೇ ಕಾರಣ ಎಂದ ಮಾಜಿ ಆಟಗಾರ


ಉಮ್ರಾನ್​ ಮಲಿಕ್​


ಜಮ್ಮು ಕಾಶ್ಮೀರದ ವೇಗಿ ಉಮ್ರಾನ್‌ ಮಲಿಕ್‌(Umran Malik) ಅವರು 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದು 157 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಸದ್ಯ ಅವರಿಗೆ ಐಪಿಎಲ್​ನಲ್ಲಿ ವೇಗದ ಎಸೆತ ಎಸೆದ ಬೌಲರ್​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ. 26 ಐಪಿಎಲ್​ ಪಂದ್ಯಗಳನ್ನಾಡಿ 29 ವಿಕೆಟ್​ ಪಡೆದಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಅವರು ಈ ಬಾರಿ ಒಂದೂ ಪಂದ್ಯವನ್ನಾಡಿಲ್ಲ.


ಅನ್ರಿಚ್​ ನೋರ್ಜೆ


ದಕ್ಷಿಣ ಆಫ್ರಿಕಾ ತಂಡದ ವೇಗಿ ಅನ್ರಿಜ್​ ನೋರ್ಜೆ ಅವರು ಡೆಲ್ಲಿ ಕ್ಯಾಪಿಟಲ್ಸ್​ ಪರ 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 156.2 kmph ವೇಗದಲ್ಲಿ ಚೆಂಡೆಸೆದಿದ್ದರು. ಇವರ ದಾಖಲೆಯನ್ನು 2022 ರಲ್ಲಿ ಉಮ್ರಾನ್‌ ಮಲಿಕ್‌ ಹಿಂದಿಕ್ಕಿದ್ದರು. ಸದ್ಯ ನೋರ್ಜೆ 4ನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಡೆಲ್ಲಿ ತಂಡದಲ್ಲಿರುವ ನೋರ್ಜೆ 41 ಐಪಿಎಲ್​ ಪಂದ್ಯಗಳಿಂದ 54 ವಿಕೆಟ್​ ಕಡೆವಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ ಪ್ರಿಯರಿಗೆ ಇಂದು ಡಬಲ್​ ಧಮಾಕಾ


ಮಾಯಾಂಕ್​ ಯಾದವ್


ಐಪಿಎಲ್ ಪದಾರ್ಪಣ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದು ಸುದ್ದಿಯಾಗಿರುವ ಲಕ್ನೋ ತಂಡದ 21 ವರ್ಷದ ವೇಗಿ ಮಾಯಾಂಕ್​ ಯಾದವ್(Mayank Yadav)​ ಅವರು ನಿನ್ನೆ(ಶನಿವಾರ) ನಡೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಶಿಖರ್​ ಧವನ್​ಗೆ ಎಸೆತ ಒಂದು ಎಸೆತ ಗಂಟೆಗೆ 155.8 kmph ಎಸೆದಿದ್ದರು. ಈ ಮೂಲಕ ಐಪಿಎಲ್​ನಲ್ಲಿ ಅತಿ ವೇಗದ ಎಸೆತ ಎಸೆದ 5ನೇ ಆಟಗಾರನಾಗಿ ಎನಿಸಿಕೊಂಡರು.

Exit mobile version