ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತು ಮಾರ್ಚ್ 22 ರಿಂದ ಮೇ ಅಂತ್ಯದೊಳಗೆ ನಡೆಯಲಿದೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಪಿಎಲ್ ಆಡಳಿತ ಮಂಡಳಿ ಸೋಮವಾರ ಐಪಿಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ವೇಳಾಪಟ್ಟಿ ಮತ್ತು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದೆ.
#breaking IPL-2024 window confirmed between March 22-May end #iplauction2024
— Gaurav Gupta (@toi_gauravG) December 18, 2023
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಶ್ರೀಲಂಕಾದ ಆಟಗಾರರು ಐಪಿಎಲ್ 2024 ರ ಸಂಪೂರ್ಣ ಅವಧಿಗೆ ಲಭ್ಯವಿರುತ್ತಾರೆ ಎಂದು ಮಂಡಳಿಯು ಇದೇ ವೇಳೆ ದೃಢಪಡಿಸಿದೆ. ಮಾರ್ಚ್ನಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಮೇ ತಿಂಗಳಲ್ಲಿ ಪಂದ್ಯಾವಳಿಯಲ್ಲಿ ಆಡಲು ಲಭ್ಯವಿರುತ್ತಾರೆ ಎಂದು ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ದೃಢಪಡಿಸಿದೆ.
ಐಪಿಎಲ್ 2023 ರಲ್ಲಿ ಉತ್ತಮ ಋತುವಿನ ಹೊರತಾಗಿಯೂ, ಹೇಜಲ್ವುಡ್ ಅವರನ್ನು ಐಪಿಎಲ್ 2024 ಕ್ಕೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದೆ. ಹೀಗಾಗಿ ಹೊಸ ತಂಡಕ್ಕೆ ಹರಾಜಿನ ಮೂಲಕ ಸೇರಿಕೊಳ್ಳಬೇಕಾಗಿದೆ.
ಇಂಗ್ಲೆಂಡ್ ಆಟಗಾರರ ಲಭ್ಯತೆ ಹೇಗೆ?
ಇಂಗ್ಲೆಂಡ್ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಮುಂದಿನ ಆವೃತ್ತಿಗೆ ಲಭ್ಯವಿರುವುದಿಲ್ಲ ಮತ್ತು ಉಳಿದ ಇಂಗ್ಲೆಂಡ್ ಆಟಗಾರರ ಲಭ್ಯತೆಯನ್ನು ಅವರ ಅಂತಾರಾಷ್ಟ್ರೀಯ ಬದ್ಧತೆಗಳಿಗೆ ಒಳಪಡಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ಮಂಡಳಿ ದೃಢಪಡಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಕ್ರಿಕೆಟ್ ಐರ್ಲೆಂಡ್ (ಸಿಐ) ಮುಸ್ತಾಫಿಜುರ್ ರೆಹಮಾನ್ ಮತ್ತು ಜೋಶುವಾ ಲಿಟಲ್ ಅವರಿಗೆ ಐಪಿಎಲ್ 2024 ರಲ್ಲಿ ಭಾಗವಹಿಸಲು ವಿಶೇಷ ಅನುಮತಿ ನೀಡಿವೆ. ಐರ್ಲೆಂಡ್ ವೇಗಿ ಪಂದ್ಯಾವಳಿಯ ಸಂಪೂರ್ಣ ಅವಧಿಗೆ ಲಭ್ಯವಿದ್ದರೆ, ರೆಹಮಾನ್ಗೆ ಮೇ 11 ರವರೆಗೆ ಎನ್ಒಸಿ ನೀಡಲಾಗಿದೆ.
ಟಸ್ಕಿನ್ ಅಹ್ಮದ್ ಮತ್ತು ಮೊಹಮ್ಮದ್ ಶೊರಿಫುಲ್ ಇಸ್ಲಾಂ ಐಪಿಎಲ್ 2024 ಆವೃತ್ತಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಬಿ ಬಿಸಿಸಿಐಗೆ ತಿಳಿಸಿದೆ.
ಐಪಿಎಲ್ ಆಟಗಾರರ ವೇತನ ಹಲವು ಪಟ್ಟು ಏರಿಕೆ ಮಾಡಿದ ಬಿಸಿಸಿಐ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಗೆ ಸಂಬಂಧಿಸಿದ ಬೆಳವಣಿಗೆಗಳು ಜೋರಾಗಿ ನಡೆಯುತ್ತಿವೆ. ಅಂತೆಯೇ ಆಶ್ಚರ್ಯಕರ ಬೆಳವಣಿಯೊಂದರ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ) ಮುಂಬರುವ ಐಪಿಎಲ್ ಹರಾಜಿನಲ್ಲಿ ಅನ್ಕ್ಯಾಪ್ಡ್ (ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದವರಿ) ಆಟಗಾರರಿಗೆ ವೇತನವನ್ನು ಹಲವು ಪಟ್ಟು ಏರಿಕೆ ಮಾಡುವ ಯೋಜನೆಯೊಂದನ್ನು ರೂಪಿಸಿದೆ. ಈ ಉಪಕ್ರಮವು ಐಪಿಎಲ್ ಋತುಗಳ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಅತಿ ಹೆಚ್ಚು ಲಾಭ ತಂದುಕೊಡಲಿದೆ. ಮೂರು ವರ್ಷ ಕಾಲ ಒಂದೇ ರೀತಿಯ ಸಂಭಾವನೆ ಪಡೆಯುವ ನಷ್ಟದಿಂದ ಬಚಾವ್ ಮಾಡುತ್ತದೆ.
ಇದನ್ನೂ ಓದಿ : Naveen-ul-Haq : ಕೊಹ್ಲಿ ಜತೆ ಜಗಳವಾಡಿದ್ದ ನವಿನ್ ಉಲ್ ಹಕ್ಗೆ 20 ತಿಂಗಳು ನಿಷೇಧ
ಸಾಮಾನ್ಯವಾಗಿ ಒಬ್ಬ ಆಟಗಾರ ಮೂರು ವರ್ಷಗಳವರೆಗೆ ಅಥವಾ ಐಪಿಎಲ್ ಹರಾಜಿನಲ್ಲಿ ಅವರನ್ನು ಸ್ವಾಧೀನಪಡಿಸಿಕೊಂಡ ಫ್ರಾಂಚೈಸಿಯಿಂದ ಬಿಡುಗಡೆಯಾಗುವವರೆಗೆ ಮೊದಲು ನಿಗದಿಯಾಗಿರುವ ಶುಲ್ಕಕ್ಕೆ ಬದ್ಧನಾಗಿರಬೇಕಾಗುತ್ತದೆ. ಆದಾಗ್ಯೂ ಕೆಲವು ಸನ್ನಿವೇಶಗಳಲ್ಲಿ, ಅನ್ಕ್ಯಾಪ್ಡ್ ಆಟಗಾರನ ಲೀಗ್ ಶುಲ್ಕವು ಗಮನಾರ್ಹ ಉತ್ತೇಜನವನ್ನು ಪಡೆಯಲು ಸಾಧ್ಯವಿದೆ. ಅನ್ಕ್ಯಾಪ್ಡ್ ಆಟಗಾರ ಎರಡು ಐಪಿಎಲ್ ಋತುಗಳ ನಡುವೆ ಹತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದರೆ ಅವರ ಶುಲ್ಕವು ಎರಡು ಪಟ್ಟು ಹೆಚ್ಚಾಗುತ್ತದೆ.
ಹೊಸ ನಿಯಮ
ಬಿಸಿಸಿಐ ಇತ್ತೀಚಿನ ಸಂವಹನದಲ್ಲಿ, ಅನ್ಕ್ಯಾಪ್ ಆಟಗಾರರಿಗೆ ಶುಲ್ಕ ನಿಯಂತ್ರಣವನ್ನು ರೂಪಿಸಿದೆ, ಕನಿಷ್ಠ ಲೀಗ್ ಶುಲ್ಕ ನಿಯಮಗಳ ಬದಲಾವಣೆಯನ್ನು ಮಾಡಿದೆ. ನಿಯಮದ ಪ್ರಮುಖ ಅಂಶಗಳ ಪ್ರಕಾರ, ಲೀಗ್ ಶುಲ್ಕ 50 ಲಕ್ಷ ರೂ.ಗಿಂತ ಕಡಿಮೆ ಇರುವ ಅನ್ಕ್ಯಾಪ್ಡ್ ಆಟಗಾರನು ಒಂದು ಋತುವಿನ ಅಂತ್ಯದಿಂದ ಮುಂದಿನ ಋತುವಿನ ಆರಂಭದವರೆಗಿನ ಅವಧಿಯಲ್ಲಿ ಐದು ಅಥವಾ ಪಂದ್ಯಗಳನ್ನು ಆಡಿದರೆ ಮುಂದಿನ ಋತು ಮತ್ತು ನಂತರದ ಋತುಗಳಿಗೆ ಅವರ ಲೀಗ್ ಶುಲ್ಕವು ಗಣನೀಯ ಹೆಚ್ಚಳವನ್ನು ಮಾಡಬೇಕು.