Site icon Vistara News

IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಕೋಲ್ಕತ್ತಾ: ಟೀಮ್​ ಇಂಡಿಯಾದ ಆಟಗಾರ ಯಜುವೇಂದ್ರ ಚಹಲ್(Yuzvendra Chahal)​ ಅವರು ಮೈದಾನದಲ್ಲಿ ಆಗಾಗ ಚೇಷ್ಟೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತದೆ. ಅಂಪೈರ್​, ಎದುರಾಳಿ ಆಟಗಾರನ್ನು ತಮ್ಮ ಕುಚೇಷ್ಟೆ(yuzvendra chahal funny videos) ಮೂಲಕ ನಗಿಸುತ್ತಿರುತ್ತಾರೆ. ಇದೀಗ(IPL 2024) ವಿಮಾನದಲ್ಲಿ ಪೈಲೆಟ್​ಗಳ ಜತೆ ಮಾಡಿದ ಚೇಷ್ಟೆಯೊಂದರ ವಿಡಿಯೊ ವೈರಲ್(viral video)​ ಆಗಿದೆ.

ಐಪಿಎಲ್​ನಲ್ಲಿ ಇಂದು ರಾಜಸ್ಥಾನ್(Rajasthan Royals) ತಂಡ ಕೆಕೆಆರ್​ ವಿರುದ್ಧ ಆಡಲಿಳಿದೆ. ಈ ಪಂದ್ಯ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನಾಡಲು ಆಟಗಾರರೊಂದಿಗೆ ಕೋಲ್ಕತ್ತಾಕ್ಕೆ ತೆರಳುವ ವೇಳೆ ಚಹಲ್​ ಅವರು ಪೈಲೆಟ್​ಗಳ ಕೊಠಡಿಗೆ ತೆರಳಿ ಅವರಿಗೆ ಚಮಕ್​ ನೀಡಿದ್ದಾರೆ. ಇಂದು ನನ್ನ ಇಬ್ಬರು ಸಹೋದರ ಪೈಲೆಟ್​ಗಳು ವಿಮಾನ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಪೈಲೆಟ್​ಗಳು ಕೂಡ ಯೋ ಯೋ ಕೈ ಬೆರಳಿನ ಮೂಲಕ ಚಿಯರ್​ ಅಪ್​ ಮಾಡಿದ್ದಾರೆ. ಈ ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡು ‘ಇದು ನಿಮ್ಮ ಕ್ಯಾಪ್ಟನ್ ಹಾಡುಗಾರಿಕೆ’ ಎಂದು ಬರೆದುಕೊಂಡು ಹಿಂದಿ ಸಿನೆಮಾದ ಹಾಡೊಂದನ್ನು ಹಾಕಿದೆ. ಜತೆಗೆ ಚಹಲ್​ ಅವರ ಮುಖದ ಚಿತ್ರವನ್ನು ಎಡಿಟ್​ ಮಾಡಿ ವಿಮಾನ ಚಲಾಯಿಸಿದಂತೆ ತೋರಿಸಿದೆ. ಈ ವಿಡಿಯೊ ವೈರಲ್​ ಆಗಿದೆ.

ಕಳೆದ ಆವೃತ್ತಿಯಲ್ಲಿ ಜೋ ರೂಟ್​ ಅವರ ಟ್ರಾಲಿ ಬ್ಯಾಗ್​ನಲ್ಲಿ ಕುಳಿತು ಜಾಲಿ ರೈಡ್​ ಮಾಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಕಳೆದ ಗುಜರಾತ್(Gujarat Titans)​ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್​ ಅವರು ಐಪಿಎಲ್​ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಇದುವರೆಗೆ 151 ಐಪಿಎಲ್​ ಪಂದ್ಯಗಳನ್ನಾಡಿರುವ ಚಹಲ್​ 198 ವಿಕೆಟ್​ ಕಿತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎಂದ ದಾಖಲೆ ಬರೆದಿದ್ದಾರೆ. ಇನ್ನೆರಡು ವಿಕೆಟ್​ ಕಿತ್ತರೆ 200 ವಿಕೆಟ್​ ಪೂರ್ತಿಗೊಳಿಸಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಮೈಲಿಗಲ್ಲು ನಿರ್ಮಿಸಲು ಅವಕಾಶವಿದೆ.

ಇದನ್ನೂ ಓದಿ IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರುತ್ತಿರುವ ಚಹಲ್​ಗೆ ಇದೇ ಜೂನ್​ನಲ್ಲಿ ನಡೆಎಯುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಐಪಿಎಲ್​ನಲ್ಲಿ 195* ವಿಕೆಟ್​ ಪಡೆದಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ.

ರಾಜಸ್ಥಾನ್​ ರಾಯಲ್ಸ್(RR vs KKR)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರು ಅಗ್ರಸ್ಥಾನ ಪಡೆಯಲಿದ್ದಾರೆ. ಉಭಯ ತಂಡಗಳು ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷೆ ಮಾಡಲಾಗಿದೆ. ರಾಜಸ್ಥಾನ(Rajasthan Royals) ಸದ್ಯ 6 ಪಂದ್ಯಗಳಲ್ಲಿ 5 ಗೆದ್ದಿದ್ದು ಅಗ್ರಸ್ಥಾನದಲ್ಲಿದೆ. ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಿಸಿ ದ್ವಿತೀಯ ಸ್ಥಾನದಲ್ಲಿದೆ.

Exit mobile version