Site icon Vistara News

IPL Auction 2024 Live: 24.75 ಕೋಟಿ ಮೊತಕ್ಕೆ ಸ್ಟಾರ್ಕ್​ಗೆ ಬಲೆ ಬೀಸಿದ ಕೆಕೆಆರ್

Mallika Sagar

ದುಬೈ: ಬಹುನಿರೀಕ್ಷಿತ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್​ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್​ ಮಾಹಿತಿಗಳು ಇಲ್ಲಿ ಲಭ್ಯ. 

Abhilash B C

ಹೊಸ ನಿಯಮ

ಬಿಸಿಸಿಐ ಇತ್ತೀಚಿನ ಸಂವಹನದಲ್ಲಿ, ಅನ್​ಕ್ಯಾಪ್​​​ ಆಟಗಾರರಿಗೆ ಶುಲ್ಕ ನಿಯಂತ್ರಣವನ್ನು ರೂಪಿಸಿದೆ, ಕನಿಷ್ಠ ಲೀಗ್ ಶುಲ್ಕ ನಿಯಮಗಳ ಬದಲಾವಣೆಯನ್ನು ಮಾಡಿದೆ. ನಿಯಮದ ಪ್ರಮುಖ ಅಂಶಗಳ ಪ್ರಕಾರ, ಲೀಗ್ ಶುಲ್ಕ 50 ಲಕ್ಷ ರೂ.ಗಿಂತ ಕಡಿಮೆ ಇರುವ ಅನ್​ಕ್ಯಾಪ್ಡ್​​ ಆಟಗಾರನು ಒಂದು ಋತುವಿನ ಅಂತ್ಯದಿಂದ ಮುಂದಿನ ಋತುವಿನ ಆರಂಭದವರೆಗಿನ ಅವಧಿಯಲ್ಲಿ ಐದು ಅಥವಾ ಪಂದ್ಯಗಳನ್ನು ಆಡಿದರೆ ಮುಂದಿನ ಋತು ಮತ್ತು ನಂತರದ ಋತುಗಳಿಗೆ ಅವರ ಲೀಗ್ ಶುಲ್ಕವು ಗಣನೀಯ ಹೆಚ್ಚಳವನ್ನು ಮಾಡಬೇಕು.

Abhilash B C

ಕರ್ನಾಟಕದ ಆಟಗಾರರು

ಮನೀಷ್ ಪಾಂಡೆ, ಜಗದೀಶ್ ಸುಚಿತ್​, ಶುಭಾಂಗ್​ ಹೆಗ್ಡೆ, ನಿಹಾಲ್​ ಉಲ್ಲಾಳ್​, ಬಿ.ಆರ್​ ಶರತ್​, ಮನ್ವಂತ್​ ಕುಮಾರ್​, ಎಲ್​.ಆರ್​ ಚೇತನ್​, ಕೆ.ಎಲ್​ ಶ್ರೀಜಿತ್​, ಎಂ. ವೆಂಕಟೇಶ್​, ಮೋನಿಶ್​ ರೆಡ್ಡಿ, ಅಭಿಲಾಷ್​ ಶೆಟ್ಟಿ ಹರಾಜಿನಲ್ಲಿ ಕಾಣಿಸಿಕೊಂಡ ಕರ್ನಾಟಕದ ಆಟಗಾರರು.

Abhilash B C

ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್​ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್​ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್​ನ ಸ್ಟೀವನ್​ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

Abhilash B C

ಒಟ್ಟು ಆಟಗಾರರೆಷ್ಟು?

ಎಲ್ಲ ಪ್ರಾಂಚೈಸಿಗಳು ಬಿಡ್ಡಿಂಗ್​ನಲ್ಲಿ ಆಟಗಾರರನ್ನು ಖರೀದಿಸಲು ಸಕಲ ಸಿದ್ಧತೆ ನಡೆಸಿವೆ. ಇದೀಗ ಐಪಿಎಲ್ ಮಂಡಳಿಯು ಹರಾಜಿಗೆ ಒಳಗಾಗಲಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ.

Abhilash B C

ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(royal challengers bangalore) ಫ್ರಾಂಚೈಸಿ ಬೌಲರ್​ಗಳ ಖರೀದಿಗೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದೆ.

Exit mobile version