ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪ್ರಸಾರ
ಐಪಿಎಲ್ನ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹರಾಜು ಪ್ರಕ್ರಿಯೆ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ವೀಕ್ಷಕರು ಹರಾಜನ್ನು ಲೈವ್ ಆಗಿ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ತೆಲುಗು, ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ. ಇವುಗಳಲ್ಲಿ ನೇರ ಪ್ರಸಾರ ಇರಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನೆಮಾ(JioCinema) ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಹರಾಜಿಗೂ ಮುನ್ನ ತಂಡದ ಕೋಚ್ಗಳೊಂದಿಗೆ ಚಿಟ್ಚಾಟ್
Hello and Welcome to the #iplauction 2024 👋
— IndianPremierLeague (@IPL) December 19, 2023
We are all ready to rock and roll at the Coca Cola Arena in Dubai 👌
Watch till the end for a glimpse of the magnificent auction arena 😍 pic.twitter.com/QDheLqjxoi
ಹರಾಜು ಪ್ರಕ್ರಿಯೆಯ ಹೈಲೆಟ್ಸ್
ಹರಾಜಿನಲ್ಲಿರುವ ಒಟ್ಟು ಆಟಗಾರರು: 333
ಹರಾಜಿನಲ್ಲಿರುವ ಭಾರತದ ಆಟಗಾರರು: 214
ಹರಾಜಿನಲ್ಲಿರುವ ವಿದೇಶಿ ಆಟಗಾರರು: 119
ವಿದೇಶಿ ಆಟಗಾರರ ಮೀಸಲು ಕೋಟಾ: 30
10 ತಂಡಗಳಿಗೆ ಬೇಕಿರುವ ಆಟಗಾರರು: 77
ಅಂತಾರಾಷ್ಟ್ರೀಯ ಪಂದ್ಯ ಆಡಿದವರು: 116
ಅನ್ಕ್ಯಾಪ್ಡ್ ಆಟಗಾರರು: 215
ಅಸೋಸಿಯೇಟ್ ರಾಷ್ಟ್ರದ ಆಟಗಾರರು: 02
ಇತ್ತೀಚೆಗೆ ನಡೆದಿದ್ದ ವನಿತಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿಯೂ ಮಲ್ಲಿಕಾ ಸಾಗರ್ ಪ್ರಮುಖ ಹೈಲೆಟ್ಸ್ ಆಗಿದ್ದರು. ಮುಂಬೈ ಮೂಲದವರಾದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಈಗ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಅಲ್ಲದೆ ಬ್ರಿಟೀಷ್ ಆಕ್ಷನ್ ಹೌಸ್ ಕ್ರಿಸ್ಟೀಸ್ನಲ್ಲಿ ಹರಾಜು ನಡೆಸಿದ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ. ಮಲ್ಲಿಕಾ ಕಳೆದ ವರ್ಷ ಮತ್ತು ಈ ವರ್ಷದ ಡಬ್ಲ್ಯೂಪಿಎಲ್ ಹರಾಜನ್ನು ಸಹ ನಡೆಸಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಲಿರುವುದು ಹರಾಜುಗಾರ್ತಿ ಮಲ್ಲಿಕಾ ಸಾಗರ್(Mallika Sagar).