Site icon Vistara News

IPL Auction 2024 Live: 24.75 ಕೋಟಿ ಮೊತಕ್ಕೆ ಸ್ಟಾರ್ಕ್​ಗೆ ಬಲೆ ಬೀಸಿದ ಕೆಕೆಆರ್

Mallika Sagar

ದುಬೈ: ಬಹುನಿರೀಕ್ಷಿತ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್​ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್​ ಮಾಹಿತಿಗಳು ಇಲ್ಲಿ ಲಭ್ಯ. 

Abhilash B C

ಭಾರತ ತಂಡದ ವೇಗಿ, ಕೇವಲ ಟೆಸ್ಟ್​ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಉಮೇಶ್​ ಯಾದವ್​ ಅವರು ಈ ಬಾರಿಯ ಹರಾಜಿನಲ್ಲಿ ಬರೋಬ್ಬರಿ 5.80 ಕೋಟಿ ಮೊತ್ತಕ್ಕೆ ಸೇಲ್​ ಆಗಿದ್ದಾರೆ. ಅವರನ್ನು ಮಾಜಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ತಂಡ ಖರೀದಿ ಮಾಡಿದೆ.

Abhilash B C

ಆರ್​ಸಿಬಿ ಸೇರಿದ ಅಲ್ಜಾರಿ ಜೋಸೆಫ್

ವೆಸ್ಟ್​ ಇಂಡೀಸ್​ ತಂಡದ ಬೌಲರ್​ ಅಲ್ಜಾರಿ ಜೋಸೆಫ್ ಅವರು ಈ ಬಾರಿಯ ಹರಾಜಿನಲ್ಲಿ ಒಂದು ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರು ನಿರೀಕ್ಷೆಗೂ ಮೀರಿ 11.50 ಕೋಟಿ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದ್ದಾರೆ.

Abhilash B C

25 ವರ್ಷದ ಟೀಮ್​ ಇಂಡಿಯಾದ ವೇಗಿ ಚೇತನ್​ ಸಕಾರಿಯ ಅವರು ಮೂಲ ಬೆಲೆ 50 ಲಕ್ಷಕ್ಕೆ ಕೆಕೆಆರ್​ ಪಾಲಾಗಿದ್ದಾರೆ. 19 ಐಪಿಎಲ್​ ಪಂದ್ಯ ಆಡಿರುವ ಅವರು 20 ವಿಕೆಟ್​ ಪಡದಿದ್ದಾರೆ. ಭಾರತ ಪರ ಒಂದು ಏಕದಿನ ಮತ್ತು 2 ಟಿ20 ಪಂದ್ಯ ಆಡಿದ್ದಾರೆ.

Abhilash B C

ಶ್ರೀಲಂಕಾದ ಕುಸಲ್​ ಮೆಂಡೀಸ್​ ಮತ್ತು ಜೋಶ್​ ಇಂಗ್ಲಿಸ್​ ಅನ್​ ಸೋಲ್ಡ್​ ಆಗಿದ್ದಾರೆ.

Abhilash B C

ಟೀಮ್​ ಇಂಡಿಯಾದ ಟೆಸ್ಟ್​ ಆಟಗಾರ ಶ್ರೀಕರ್​ ಭರತ್​ ಅವರನ್ನು ಮೂಲಬೆಲೆ 50 ಲಕ್ಷ ರೂ. ನೀಡಿ ಕೆಕೆಆರ್​ ತಂಡ ಖರೀದಿಸಿದೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿಯೂ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version