ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ದಕ್ಷಿಣ ಆಫ್ರಿಕಾದ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಮೂಲ ಬೆಲೆ 50 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿದೆ.
ಇಂಗ್ಲೆಂಡ್ ತಂಡದ ಅನುಭವಿ ವಗಿ ಕ್ರಿಸ್ ವೋಕ್ಸ್ ಅವರು 4.20 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಅವರು 2 ಕೋಟಿ ಮೂಲಬೆಲೆ ಹೊಂದಿದ್ದರು.
ನಿರೀಕ್ಷೆಯಂತೆ ದೊಡ್ಡ ಮೊತ್ತ ಪಡೆದ ಡ್ಯಾರಿಲ್ ಮಿಚೆಲ್
ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಆಲ್ರೌಂಡರ್ ಆಗಿರುವ ಡ್ಯಾರಿಲ್ ಮಿಚೆಲ್ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಅವರು ದೊಡ್ಡ ಮೊತ್ತ ಜೇಬಿಗಿಳಿಸಿದ್ದಾರೆ.14 ಕೋಟಿ ರೂ. ಮೊತ್ತಕ್ಕೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಲ್ ಆಗಿದ್ದಾರೆ. ಕಳೆದ ಬಾರಿ ಇವರು ಅನ್ಸೋಲ್ಡ್ ಆಗಿದ್ದರು.
ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್ ಬಾರಿಸಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.
ಆರ್ಸಿಬಿಯ ಮಾಜಿ ಆಟಗಾರ, 2 ಕೋಟಿ ಮೂಲಬೆಲೆಯಲ್ಲಿ ಕಣಕ್ಕಿಳಿದ್ದ ಹರ್ಷಲ್ ಪಟೇಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 11.75 ಕೋಟಿ. ರೂ ನೀಡಿ ಖರೀದಿ ಮಾಡಿದೆ.
ದಾಖಲೆ ಬರೆದ ಕಮಿನ್ಸ್
ಇಂಗ್ಲೆಂಡ್ ಅಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆದರೆ ಈಗ ಈ ದಾಖಲೆ ಪತನಗೊಂಡಿದೆ. ಕಮಿನ್ಸ್ ಅವರು 20.50 ಕೋಟಿಗೆ ಸೇಲ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.