Site icon Vistara News

IPL Auction 2024 Live: 24.75 ಕೋಟಿ ಮೊತಕ್ಕೆ ಸ್ಟಾರ್ಕ್​ಗೆ ಬಲೆ ಬೀಸಿದ ಕೆಕೆಆರ್

Mallika Sagar

ದುಬೈ: ಬಹುನಿರೀಕ್ಷಿತ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್​ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್​ ಮಾಹಿತಿಗಳು ಇಲ್ಲಿ ಲಭ್ಯ. 

Abhilash B C

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶಿಸಿದ್ದ ದಕ್ಷಿಣ ಆಫ್ರಿಕಾದ ಯುವ ಬೌಲರ್​ ಜೆರಾಲ್ಡ್ ಕೊಯೆಟ್ಜಿ ಅವರನ್ನು 5 ಕೋಟಿ ಮೊತ್ತ ನೀಡಿ ಮುಂಬೈ ಇಂಡಿಯನ್ಸ್​ ಖರೀದಿ ಮಾಡಿದೆ.

Abhilash B C

ಆಸ್ಟ್ರೇಲಿಯಾದ ಏಕದಿನ ವಿಶ್ವಕಪ್​ ವಿಜೇತ ತಂಡದ ನಾಯಕ ಪಾಟ್​ ಕಮಿನ್ಸ್​ ಅವರು ಇದುವರೆಗಿನ ಐಪಿಎಲ್​ ಇತಿಹಾಸದಲ್ಲೇ ದಾಖಲೆಯ 20.50 ಕೋಟಿ ರೂ. ಮೊತ್ತಕ್ಕೆ ಸೇಲ್​ ಆಗಿದ್ದಾರೆ. ಸನ್​ರೈಸರ್ಸ್​ ಹೈದರಾಬಾದ್​ ತಂಡ ಅವರನ್ನು ಖರೀದಿ ಮಾಡಿದೆ. ಆರ್​ಸಿಬಿ ಕೂಡ 20 ಕೋಟಿ ತನಕ ಬಿಡ್​ ಮಾಡಿತ್ತು. ಆದರೆ ಅಂತಿಮವಾಗಿ ಹೈದರಾಬಾದ್​ ಪಾಲಾದರು.

Abhilash B C

ರಚಿನ್​ ರವೀಂದ್ರ ಅವರನ್ನು 1.80 ಕೋಟಿ ರೂ,ಗೆ ಚೆನ್ನೈ ಸೂಪರ್​ ಕಿಂಗ್ಸ್​ ಸೇರಿದ್ದಾರೆ. ಅವರ ಮೂಲಬೆಲೆ 50 ಲಕ್ಷ ಆಗಿತ್ತು.

Abhilash B C

ಆಸ್ಟ್ರೇಲಿಯಾದ ಸ್ಟಾರ್​ ಅನುಭವಿ ಆಟಗಾರ ಸ್ಟೀವನ್​ ಸ್ಮಿತ್​ ಅವರು ಮೊದಲ ಸುತ್ತಿನ ಹರಾಜಿನಲ್ಲಿ ಅನ್​ ಸೋಲ್ಡ್​ ಆಗಿದ್ದಾರೆ. ಕಳೆದ ಬಾರಿಯೂ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಹೀಗಾಗಿ ಅವರು ಐಪಿಎಲ್​ ಕಾಮೆಂಟ್ರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Abhilash B C

ಕರ್ನಾಟಕದ ಆಟಗಾರರಾದ ಮನೀಷ್​ ಪಾಂಡೆ ಮತ್ತು ಕರುಣ್​ ನಾಯರ್​ ಅವರು ಅನ್​ ಸೋಲ್ಡ್​ ಆಗಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಸೋಲ್ಡ್​ ಆಗುವ ನಿರೀಕ್ಷೆ ಇದೆ.

Exit mobile version