ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ಪಂಜಾಬ್ ಕಿಂಗ್ಸ್(29.10 ಕೋಟಿ ರೂ.)
ಹೆಸರು ಬದಲಿಸಿದರು ಅದೃಷ್ಟ ಬದಲಾಗದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬಳಿ 29.10 ಕೋಟಿ. ರೂ.ಹಣವಿದೆ. ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಬ್ಬರು ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.
ಸನ್‌ರೈಸರ್ಸ್ ಹೈದರಾಬಾದ್(34 ಕೋಟಿ ರೂ.)
ಒಂದು ಬಾರಿಯ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಳಿ 34 ಕೋಟಿ ರೂ. ಹಣವಿದೆ. 6 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಬಿಡ್ ಮಾಡಬಹುದು.
ಚೆನ್ನೈ ಸೂಪರ್ ಕಿಂಗ್ಸ್(31.40 ಕೋಟಿ. ರೂ.)
ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚನ್ನೈ ಸೂಪರ್ ಕಿಂಗ್ಸ್ ತಂಡದ ಬಳಿ 31.40 ಕೋಟಿ. ರೂ ಹಣವಿದೆ. ಈ ಬಾರಿ 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.
ಗುಜರಾತ್ ಟೈಟಾನ್ಸ್(38.15 ಕೋಟಿ ರೂ.)
ಒಂದು ಬಾರಿ ಚಾಂಪಿಯನ್ ಮತ್ತು ಕಳೆದ ಬಾರಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಬಳಿ 38.15 ಕೋಟಿ ರೂ. ಉಳಿಕೆ ಹಣವಿದೆ. ತಂಡಕ್ಕೆ ಮಿನಿ ಹರಾಜಿನಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 6 ಭಾರತೀಯ ಹಾಗೂ ಎಡರು ವಿದೇಶಿ ಆಟಗಾರ ಆಯ್ಕೆ ಮಾತ್ರ ಸಾಧ್ಯವಾಗಲಿದೆ.
ಮುಂಬೈ ಇಂಡಿಯನ್ಸ್(15.25 ಕೋಟಿ ರೂ.)
ಐಪಿಲ್ನ ಅತ್ಯಂತ ಯಶಸ್ವಿ ತಂಡವೆನಿಸಿದ ಮುಂಬೈ ಇಂಡಿಯನ್ಸ್ ಬಳಿ ಫ್ರಾಂಚೈಸಿ ಬಳಿ 15.25 ಕೋಟಿ ರೂ. ಹಣವಿದೆ. ತಂಡವು ಈ ಬಾರಿಯ ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶ ಹೊಂದಿದೆ. ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.