Site icon Vistara News

IPL Auction 2024: ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಭ್​ ಪಂತ್​

rishabh pant ipl auction

ದುಬೈ: ಕಳೆದ ವರ್ಷದ ಡಿಸೆಂಬರ್​ನಲ್ಲಿ ಅಪಘಾತಕ್ಕೆ ಒಳಗಾಗಿ ಚೇತರಿಕೆ ಕಾಣುತ್ತಿರುವ ಟೀಮ್​ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್(Rishabh Pant) ಅವರು ಇಂದು ನಡೆಯುವ ಬಹುನಿರೀಕ್ಷಿತ 2024ರ ಸಾಲಿನ ಐಪಿಎಲ್​ ಹರಾಜು(IPL Auction 2024) ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ದುಬೈ ತಲುಪಿರುವ ಪಂತ್​ ಇಂದಿನ ಹರಾಜಿನ ವೇಳೆ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಜತೆ ಬಿಡ್ಡಿಂಗ್​ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಪಂತ್​ ಅವರು ದುಬೈ ತಲುಪಿದ ಮತ್ತು ಹರಾಜಿನಲ್ಲಿ ಪಾಲ್ಗೊಳ್ಳುವ ಕುರಿತಾದ ಮಾಹಿತಿಯನ್ನು ಐಪಿಎಲ್​ ತನ್ನ ಎಕ್ಸ್​ ಖಾತೆಯಲ್ಲಿ ವಿಡಿಯೊ ಸಮೇತ ಪ್ರಕಟಿಸಿದೆ. ಈ ವಿಡಿಯೊದಲ್ಲಿ ಪಂತ್​ ಅವರು ದುಬೈನ ಕೋಕಾ-ಕೋಲಾ ಅರೆನಾದ ಬೀಚ್​ ಬಳಿ ನಡೆದಾಟುತ್ತಿರುವ ಮತ್ತು ಅಪಘಾತದ ಬಗ್ಗೆ ಮಾತನಾಡುವುದನ್ನು ಕಾಣಬಹುದಾಗಿದೆ. ಅಲ್ಲದೆ ಪಂತ್​ ಅವರ ಸಂದರ್ಶನವನ್ನು ಮಾಡಲಾಗಿದೆ.

ಇದನ್ನೂ ಓದಿ Mallika Sagar: ಐಪಿಎಲ್‌ನ ಮೊದಲ ಮಹಿಳಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಯಾರು?

‘ಎಲ್ಲವನ್ನೂ ನಿಲ್ಲಿಸಿ ಮತ್ತು ಈ ಸಂದರ್ಶನವನ್ನು ನೋಡಿ’ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್​ ಹರಾಜು ಮೇಜಿನ ಮೇಲೆ ಇರಲಿರುವ ರಿಷಭ್​ ಪಂತ್ ಅವರನ್ನು ಮತ್ತೆ ಐಪಿಎಲ್​ ಲೋಕಕ್ಕೆ ಪ್ರಸ್ತುತಪಡಿಸಲಾಗುತ್ತಿದೆ. ಅವರ ಕಮ್​ಬ್ಯಾಕ್​ ನೋಡಲು ಕಾತರವಾಗಿದ್ದೇವೆ ಎಂದು ಐಪಿಎಲ್​ ಮಂಡಳಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದೆ. ಹರಾಜು ವೇಳೆ ಪಂತ್​ ಯಾವ ಆಟಗಾರರನ್ನು ಖರೀದಿಸ ಬೇಕು ಎನ್ನುವ ಸಲಹೆಯನ್ನು ಡೆಲ್ಲಿ ಕ್ಯಾಪಿಟಲ್ಸ್​ ಮ್ಯಾನೇಜ್‌ಮೆಂಟ್​ಗೆ ನೀಡಲಿದ್ದಾರೆ.

ಪಂತ್​ ಅವರು ಐಪಿಎಲ್​ ಮಂಡಳಿ ನಡೆಸಿ ಸಂದರ್ಶನದಲ್ಲಿ ತಾವು ಅಪಘಾತದ ಬಳಿಕ ಚೇತರಿಸಿಕೊಂಡು ಬಂದ ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ.

ನಾಯಕನಾಗಿ ಕಣಕ್ಕೆ

ಪಂತ್​ ಅವರು 2024ರ ಐಪಿಎಲ್​ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಖಚಿತ ಎಂದು ಈಗಾಗಕೇ ಡೆಲ್ಲಿ ಕ್ಯಾಪಿಟಲ್ಸ್​ ದೃಢಪಡಿಸಿದೆ.

“ಸುಮಾರು ಒಂದು ವರ್ಷದಿಂದ ಕ್ರಿಕೆಟ್​ ಕ್ಷೇತ್ರದಿಂದ ಹೊರಗುಳಿದಿರುವ ಭಾರತೀಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 2024ರ ಐಪಿಎಲ್ ಋತುವಿನಲ್ಲಿ ಆಡುವ ಜತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಮ್ಯಾನೇಜ್‌ಮೆಂಟ್ ಖಚಿತಪಡಿಸಿತ್ತು. ಈ ಸುದ್ದಿ ಕೇಳಿ ಪಂತ್​ ಅವರ ಅಭಿಮಾನಿಗಳು ಸಂತಸಗೊಂಡಿದ್ದರು. ಇದೀಗ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಜತೆ ಕಾಣಿಸುವ ಮೂಲಕ ಅವರು ಆಡುವುದು ಇನ್ನಷ್ಟು ಖಚಿತ ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ IPL Auction 2024: ಬೌಲಿಂಗ್‌ ಆಯ್ಕೆಯೇ ಆರ್‌ಸಿಬಿ ಆದ್ಯತೆ; ಮಾಹಿತಿ ನೀಡಿದ ನಿರ್ದೇಶಕ

ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್​ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್​ನಲ್ಲಿ ಆಡಿ ತಮ್ಮ ಫಿಟ್​ಸೆನ್​ ಸಾಬೀತುಪಡಿಸಬೇಕಿದೆ.

ಡಿವೈಡರ್​ಗೆ ಡಿಕ್ಕಿಯಾಗಿದ್ದ ಕಾರು

ಕಳೆದ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

Exit mobile version