ಬೆಂಗಳೂರು : ಐಪಿಎಲ್ ೧೬ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ೨೦೨೨ರ ಡಿಸೆಂಬರ್ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂಬುದಾಗಿ ನಂಬಲರ್ಹ ಮೂಲಗಳು ತಿಳಿಸಿವೆ. ೨೦೨೩ರ ಐಪಿಎಲ್ ಟೂರ್ನಿ ಹೋಮ್ ಮತ್ತು ಅವೇ ಮಾದರಿಯಲ್ಲಿ ನಡೆಯುತ್ತಿದ್ದು, ಮಾರ್ಚ್ ಕೊನೇ ವಾರದಲ್ಲಿ ಆರಂಭವಾಗಲಿದೆ. ಟೂರ್ನಿಯ ನೇರ ಪ್ರಸಾರದ ಹಕ್ಕಿನ ಹರಾಜು ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಜಾಗತಿಕ ಕ್ರೀಡಾ ಕ್ಷೇತ್ರದಲ್ಲೇ ಗರಿಷ್ಠ ಮೊತ್ತವನ್ನು (48,390 ಕೋಟಿ ರೂಪಾಯಿ)ಪಡೆಯುವ ಮೂಲಕ ದಾಖಲೆ ಸೃಷ್ಟಿಸಿತ್ತು. ಇದೀಗ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೂ ದಿನಾಂಕ ನಿಗದಿಯಾಗಿದೆ.
ಫ್ರಾಂಚೈಸಿಯೊಂದರ ಆಟಗಾರರ ಖರೀದಿ ಮೊತ್ತ ಕಳೆದ ಆವೃತ್ತಿಯಲ್ಲಿ ೯೦ ಕೋಟಿ ರೂಪಾಯಿಗಳಾಗಿತ್ತು. ಅದರಲ್ಲಿ ಐದು ಕೋಟಿ ರೂಪಾಯಿ ಹೆಚ್ಚಿಸಲಾಗಿದ್ದು, ೯೫ ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಕಳೆದ ಬಾರಿಯದ್ದು ಮೆಗಾ ಹರಾಜು ಪ್ರಕ್ರಿಯೆಯಾಗಿದ್ದರೆ ಈ ಬಾರಿ ಮಿನಿ ಹರಾಜು ನಡೆಯಲಿದೆ.
“ಮುಂದಿನ ಐಪಿಎಲ್ ಹೋಮ್ ಮತ್ತು ಅವೇ ಮಾದರಿಯಲ್ಲಿ ನಡೆಯಲಿದೆ. ೧೦ ತಂಡಗಳನ್ನು ತಮ್ಮ ತಮ್ಮ ತವರಿನ ಮೈದಾನದಲ್ಲೂ ಆಡುವ ಅವಕಾಶ ಪಡೆದುಕೊಳ್ಳಲಿದೆ,” ಎಂಬುದಾಗಿ ಬಿಸಿಸಿಐ ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಪ್ರಕಟಣೆಯೊಂದರಲ್ಲಿ ತಿಳಿಸಿದ್ದರು.
ಇದನ್ನೂ ಓದಿ |Women’s IPL | ಮುಂದಿನ ವರ್ಷ ಮಾರ್ಚ್‌ನಲ್ಲಿ ಮಹಿಳೆಯರ ಐಪಿಎಲ್, ಐದು ತಂಡಗಳ ಟೂರ್ನಿಗೆ ಸಿದ್ಧತೆ