Site icon Vistara News

IPL 2024 : ಸ್ಟಾರ್ ಆಟಗಾರರ ಜೇಬಿಗೆ ಬೀಳಲಿದೆ ಇನ್ನಷ್ಟು ಹಣ; ದೊಡ್ಡದಾಗಲಿದೆ ಐಪಿಎಲ್​ ತಂಡಗಳ ಪರ್ಸ್​​

IPL 20224

ಬೆಂಗಳೂರು: ಏಷ್ಯಾ ಕಪ್​, ಏಕ ದಿನ ವಿಶ್ವ ಕಪ್​​ನ ಚರ್ಚೆ ನಡೆಯುತ್ತಿರುವ ನಡುವೆಯವೇ ಐಪಿಎಲ್ 2024ರ ಹರಾಜು ಪ್ರಕ್ರಿಯೆಯ ಮಾತುಗಳು ಕೇಳಿ ಬರುತ್ತಿವೆ. ಇದೀಗ ಬಂದಿರುವ ಹೊಸ ಸುದ್ದಿಯೇನೆಂದರೆ ಮುಂದಿನ ಆವೃತ್ತಿಯಲ್ಲಿ ಐಪಿಎಲ್​ ಆಡಲಿರುವ ಸೂಪರ್​ ಸ್ಟಾರ್​​ಗಳು ತಮ್ಮ ಸಂಬಳವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿದ್ದಾರೆ. ಯಾಕೆಂದರೆ ಬಿಸಿಸಿಐ ತಂಡವೊಂದಕ್ಕೆ ಆಟಗಾರರಿಗೆ ಸಂಭಾವನೆ ನೀಡಲು 100 ಕೋಟಿ ರೂಪಾಯಿ ಖರ್ಚು ಮಾಡುವ ಅವಕಾಶ ನೀಡಲಿದೆ. ಸ್ಟಾರ್ ಆಟಗಾರರು ಇದರ ಪ್ರಯೋಜನ ಪಡೆದುಕೊಳ್ಳುವುದು ನಿಶ್ಚಿತ.

ಈ ಹಿಂದೆ ವರದಿಯಾದಂತೆ, ಬಿಸಿಸಿಐ ಡಿಸೆಂಬರ್ ಕೊನೆಯಲ್ಲಿ ಐಪಿಎಲ್ 2024ರ ಹರಾಜು ಪ್ರಕ್ರಿಯೆ ನಡೆಸಲಿದೆ. ಆದರೆ, ಪ್ರತಿ ವರ್ಷದಿಂದ ಕ್ರಿಸ್ ಮಸ್ ಮುನ್ನಾದಿನ ನಡೆಯದು. ಕ್ರಿಸ್ಮಸ್ ರಜಾದಿನಗಳನ್ನು ತಪ್ಪಿಸಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದೆ. ಇದೇ ವೇಳೆ ತಂಡಗಳ ಪರ್ಸ್​ನ ಗಾತ್ರವನ್ನು ಹಿಗ್ಗಿಸುವ ಪ್ರಯತ್ನವನ್ನೂ ಮಾಡಲಿದೆ. ಹೀಗಾದರೆ ಆಟಗಾರರಿಗೆ ಹೆಚ್ಚಿನ ಸಂಭಾವನೆ ದೊರೆಯಲಿದೆ.

ಈಗ ಗಮನವು ವಿಶ್ವಕಪ್ ಮೇಲೆ ಇದೆ ಮತ್ತು ಪ್ರತಿಯೊಂದು ವಿವರವನ್ನು ನೋಡಿಕೊಂಡ ನಂತರ, ನಾವು ಐಪಿಎಲ್ ಕಡೆಗೆ ಸಾಗುತ್ತೇವೆ. ವಿಶ್ವಕಪ್ ನಂತರ ನಾವು ಹರಾಜು ದಿನಾಂಕವನ್ನು ನಿರ್ಧರಿಸುತ್ತೇವೆ. ಇದು ಹೆಚ್ಚಾಗಿ ಡಿಸೆಂಬರ್​ನ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ ಹರಾಜು ಕ್ರಿಸ್ಮಸ್ ಮುನ್ನಾದಿನದಂದು ಇರುವುದಿಲ್ಲ. ಎಲ್ಲರಿಗೂ ಆರಾಮದಾಯಕ ದಿನಾಂಕವನ್ನು ನೋಡಲು ನಾವು ಪ್ರಯತ್ನಿಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್​ಸೈಡ್​ ಸ್ಪೋರ್ಟ್ಸ್​ಗೆ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್ ಹರಾಜು ಮಿನಿ ಹರಾಜಾಗಿದ್ದು, ಆಟಗಾರರನ್ನು ಆಯ್ಕೆ ಮಾಡುವ ಸಂಖ್ಯೆಗೆ ಯಾವುದೇ ಮಿತಿ ಇಲ್ಲ. ಆದರೆ ಋತುವಿನಲ್ಲಿ ಅವರ ಬಜೆಟ್ ಕ್ಯಾಪ್ ಅನ್ನು ಹಿಂದಿನ ಋತಉವಿನ 95 ಕೋಟಿ ರೂಪಾಯಿಗಳಿಂದ 100 ಕೋಟಿ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬಜೆಟ್ ಅನ್ನು 95 ಕೋಟಿ ರೂಪಾಯಿಗೆ ಹೆಚ್ಚಿಸುವುದರಿಂದ ಇನ್ನಷ್ಟು ಸ್ಟಾರ್​ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು ಸಾಧ್ಯವಿದೆ. ಸ್ಯಾಮ್ ಕರ್ರನ್, ಕ್ಯಾಮರೂನ್ ಗ್ರೀನ್, ಬೆನ್ ಸ್ಟೋಕ್ಸ್ ಮತ್ತು ನಿಕೋಲಸ್ ಪೂರನ್ ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಭರ್ಜರಿ ಲಾಭ ಪಡೆದುಕೊಂಡಿದ್ದರು.

ಐಪಿಎಲ್ 2024 ಹರಾಜಿನ ಕುರಿತು ಮಾಹಿತಿ

ಫ್ರಾಂಚೈಸಿಗಳು ಈಗಾಗಲೇ ಮುಂಬರುವ ಋತುವಿಗಾಗಿ ತಮ್ಮ ಯೋಜನೆಗಳನ್ನು ಜಾರಿಗೆ ತರಲು ಪ್ರಾರಂಭಿಸಿವೆ. ಕೊನೆಯ ಸ್ಥಾನದಿಂದ ಎರಡನೇ ಸ್ಥಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ತಮ್ಮ ಕೋಚಿಂಗ್ ಸಿಬ್ಬಂದಿಯನ್ನು ಕಡಿತಗೊಳಿಸಿದೆ. ಆ್ಯಂಡಿ ಫ್ಲವರ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಜಸ್ಟಿನ್ ಲ್ಯಾಂಗರ್ ಅವರಿಗೆ ಅವಕಾಶ ನೀಡಿದೆ. ಸಂಜಯ್ ಬಂಗಾರ್ ಮತ್ತು ಮೈಕ್ ಹೆಸ್ಸನ್ ಅವರನ್ನು ಆರ್​ಸಿಬಿ ತಂಡ ಕೈಬಿಟ್ಟಿದೆ ಎಂದು ವರದಿಯಾಗಿದೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಹೊಸ ತರಬೇತುದಾರನನ್ನು ಹುಡುಕುತ್ತಿವೆ.

ಇದನ್ನೂ ಓದಿ : IPL 2023 : ಸಿಎಸ್​ಕೆ ಐಪಿಎಲ್​ನ ಅತ್ಯಂತ ಮೌಲ್ಯಯುತ ತಂಡ, ಆರ್​ಸಿಬಿಗೆ ಎಷ್ಟನೇ ಸ್ಥಾನ?

ಹರಾಜು ಪ್ರಕ್ರಿಯೆ ಖಂಡಿತವಾಗಿಯೂ ಕ್ರಿಸ್ಮಸ್ ಮುನ್ನಾದಿನದಂದು ಇರುವುದಿಲ್ಲ. ಎಲ್ಲರಿಗೂ ಆರಾಮದಾಯಕ ದಿನಾಂಕವನ್ನು ನೋಡಲು ನಾವು ಪ್ರಯತ್ನಿಸುತ್ತೇವೆ ಎಂದು ಬಿಸಿಸಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಐಪಿಎಲ್ 2023 ರ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಿತು. ಕ್ರಿಸ್ಮಸ್ ಕಾರಣಕ್ಕೆ ರಿಕಿ ಪಾಂಟಿಂಗ್ ಮತ್ತು ಇತರರು ವರ್ಚುವಲ್ ಆಗಿ ಕಾಣಿಸಿಕೊಂಡರು. ಹೋಟೆಲ್ ಅನ್ನು ಅಂತಿಮಗೊಳಿಸಲು ಬಿಸಿಸಿಐಗೆ ನಿಜವಾಗಿಯೂ ತೊಂದರೆಯಾಯಿತು.

Exit mobile version