Site icon Vistara News

IPL 2023 : ಐಪಿಎಲ್​ ಫ್ರಾಂಚೈಸಿಗಳಿಗೆ ಗಾಯದ ಗೋಳು ​; ಇದುವರೆಗೆ 10 ಆಟಗಾರರು ಔಟ್​!

IPL is in news due to injury problem; 10 players out so far!

#image_title

ಮುಂಬಯಿ: ಐಪಿಎಲ್​ 16ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಇದೇ ವೇಳೆ ಬೇಸರದ ಸುದ್ದಿಯೂ ಪ್ರಕಟಗೊಳ್ಳುತ್ತಿದ್ದು ಹಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಕ್ಕೆ ಉಳಿದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕಳೆದ ಆವೃತ್ತಿಯಲ್ಲಿ ಆಡಿದ್ದ 10 ಆಟಗಾರರು ಮುಂದಿನ ಐಪಿಎಲ್​ಗೆ ಅಲಭ್ಯರಾಗಿದ್ದಾರೆ. ಇವುಗಳಲ್ಲಿ ಮುಂಬಯಿ ಇಂಡಿಯನ್ಸ್​ ತಂಡದ ಇಬ್ಬರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಲಾ ಇಬ್ಬರು ಆಟಗಾರರು ಅಲಭ್ಯರಾಗಿದ್ದಾರೆ. ಈ ರೀತಿಯಾಗಿ ಮುಂದಿನ ಐಪಿಎಲ್ ಆಡದಿರುವ ಆಟಗಾರರ ಪಟ್ಟಿ ಇಲ್ಲಿದೆ.

ಜಸ್​ಪ್ರಿತ್​ ಬುಮ್ರಾ

ಮುಂಬಯಿ ಇಂಡಿಯನ್ಸ್​ ತಂಡದ ಪ್ರಮುಖ ಬೌಲರ್​ ಜಸ್​​ಪ್ರಿತ್​ ಬುಮ್ರಾ ಕಳೆದ ಏಳೆಂಟು ತಿಂಗಳಿಂದ ಕ್ರಿಕೆಟ್ ಅಂಗಣಕ್ಕೆ ಇಳಿದಿಲ್ಲ. ಕಳೆದ ಏಷ್ಯಾ ಕಪ್​ಗೆ ಮೊದಲು ಬೆನ್ನು ನೋವಿನ ಸಮಸ್ಯೆಗೆ ಒಳಗಾದ ಅವರಿನ್ನೂ ಸುಧಾರಿಸಿಕೊಂಡಿಲ್ಲ. ಅವರೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ಜೇ ರಿಚರ್ಡ್ಸನ್​

ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​ ಜೇ ರಿಚರ್ಡ್ಸನ್​ ಕಳೆದ ಬಿಗ್​ ಬ್ಯಾಶ್​ ಲೀಗ್​ ಸಂದರ್ಭದಲ್ಲಿ ಗಾಯಕ್ಕೆ ಒಳಗಾಗಿದ್ದರು. ಅಲ್ಲಿಂದ ಅವರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು ಸುಧಾರಣೆಯ ಹಂತದಲ್ಲಿದ್ದಾರೆ. ಅವರು ಹರಾಜಿನಲ್ಲಿ ಮುಂಬಯಿ ಇಂಡಿಯನ್ಸ್​ ತಂಡ ಸೇರಿಕೊಂಡಿದ್ದರು.

ರಿಷಭ್​ ಪಂತ್​

ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್​ ಪಂತ್​ ಕಳೆದ ವರ್ಷಾಂತ್ಯದಲ್ಲಿ ಸಂಭವಿಸಿದ ಕಾರು ಅವಘಡದಲ್ಲಿ ಗಾಯಗೊಂಡಿದ್ದಾರೆ. ಅವರೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ. ಪಂತ್​ ಡೆಲ್ಲಿ ತಂಡದ ನಾಯಕರೂ ಆಗಿದ್ದರು. ಇದೀಗ ಡೇವಿಡ್​ ವಾರ್ನರ್​ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.

ಜಾನಿ ಬೇರ್​ಸ್ಟೋ

ಇಂಗ್ಲೆಂಡ್ ತಂಡದ ವಿಕೆಟ್​ಕೀಪರ್ ಬ್ಯಾಟರ್​ ಜಾನಿ ಬೇರ್​ಸ್ಟೋ ಕಳೆದ ಅಕ್ಟೋಬರ್​ನಲ್ಲಿ ಕಾಲು ಮೂಳೆ ಮುರಿತಕ್ಕೆ ಒಳಗಾಗಿದ್ದರು. ಅಲ್ಲಿಂದ ಅವರು ಸಾಕಷ್ಟು ದಿನಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಬೇಕಾಗಿತ್ತು. ಹೀಗಾಗಿ ಮುಂದಿನ ಐಪಿಎಲ್​ನಲ್ಲಿ ಆಡಲು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್ ಮಂಡಳಿಗೆ ನಿರಾಕ್ಷೇಪಣಾ ಪತ್ರ ನೀಡಿಲ್ಲ. ಅವರ ಅಲಭ್ಯತೆ ಪಂಜಾಬ್​ ಕಿಂಗ್ಸ್​ ತಂಡಕ್ಕೆ ಹಿನ್ನಡೆ ಉಂಟು ಮಾಡಲಿದೆ.

ವಿಲ್ ಜಾಕ್ಸ್​

ಇಂಗ್ಲೆಂಡ್​ ತಂಡದ ಬ್ಯಾಟರ್ ವಿಲ್​ ಜಾಕ್ಸ್ ಗಾಯದಿಂದಾಗಿ ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದಾರೆ. ಆರ್​ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದ ಅವರು ಇಂಗ್ಲೆಂಡ್​ ತಂಡದ ಬಾಂಗ್ಲಾದೇಶ ಪ್ರವಾಸದ ವೇಳೆ ನಿಯೋಗದಲ್ಲಿದ್ದರು. ಆದರೆ, ಅಲ್ಲಿ ಅವರು ಗಾಯಗೊಂಡಿದ್ದಾರೆ.

ಕೈಲ್​ ಜೇಮಿಸನ್​

ನ್ಯೂಜಿಲ್ಯಾಂಡ್​ ತಂಡದ ವೇಗದ ಬೌಲರ್​ ಕೈಲ್​ ಜೇಮಿಸನ್​ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಆರ್​ಸಿಬಿ ತಂಡದ ಪರವಾಗಿ ಆಡಿದ್ದರು. ಈ ಬಾರಿ ಅವರು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೇರಿಕೊಂಡಿದ್ದರು. ಇದರಿಂದಾಗಿ ಚೆನ್ನೈ ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಪ್ರಸಿದ್ಧ್​ ಕೃಷ್ಣ

ಕನ್ನಡಿಗ ಪ್ರಸಿದ್ಧ್​ ಕೃಷ್ಣ ರಾಜಸ್ಥಾನ್​ ರಾಯಲ್ಸ್​ ತಂಡದ ಸದಸ್ಯ. ಅವರು ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದಲ್ಲಿ ಆಡುವ ಅವಕಾಶವನ್ನೂ ಪಡೆದಿರಲಿಲ್ಲ. ಇದೀಗ ಐಪಿಎಲ್​ನಲ್ಲಿ ಪಾಲ್ಗೊಳ್ಳುವ ಚಾನ್ಸ್​ ಕೂಡ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : Most Maiden Overs In IPL: ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಮೇಡನ್​ ಓವರ್​ ದಾಖಲೆ ಹೊಂದಿದ ಆಟಗಾರರು

ಶ್ರೇಯಸ್​ ಅಯ್ಯರ್​

ಕೋಲ್ಕೊತಾ ತಂಡದ ನಾಯಕರಾಗುತ್ತಾರೆ ಎಂದು ಭಾವಿಸಲಾಗಿದ್ದ ಮುಂಬಯಿ ಮೂಲದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆ ಒಳಗಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಶ್ರೇಯಸ್ ಬೆನ್ನು ನೋವಿಗೆ ಒಳಗಾಗಿದ್ದರು. ಅವರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಕೊನೇ ಹಂತದಲ್ಲಿ ತಂಡಕ್ಕೆ ಸೇರ್ಪಡೆಗೊಳ್ಳಬಹುದು ಎಂದು ಹೇಳಲಾಗಿದೆ.

ಮೊಹ್ಸಿನ್ ಖಾನ್​

ಮೊಹ್ಸಿನ್​ ಖಾನ್​ ಲಖನೌ ಸೂಪರ್​ ಜಯಂಟ್ಸ್​ ತಂಡದ ವೇಗದ ಬೌಲರ್. ಅವರು ಗಾಯದ ಸಮಸ್ಯೆಯಿಂದಾಗಿ ಮುಂದಿನ ಐಪಿಎಲ್​ನಲ್ಲಿ ಆಡುವುದಿಲ್ಲ ತಂಡದ ಮೂಲಗಳು ತಿಳಿಸಿವೆ.

ಮುಕೇಶ್​ ಚೌಧರಿ

ಚೆನ್ನೆ ಸೂಪರ್​ ಕಿಂಗ್ಸ್​ ತಂಡದ ಪರ ಕಳೆದ ಆವೃತ್ತಿಯ 12 ಪಂದ್ಯಗಳಲ್ಲಿ 14 ವಿಕೆಟ್​ ಪಡೆದಿದ್ದ ಮುಕೇಶ್ ಚೌಧರಿ ಕೂಡ ಈ ಬಾರಿಯ ಐಪಿಎಲ್​ನಲ್ಲಿ ಗಾಯದ ಸಮಸ್ಯೆ ಕಾರಣಕ್ಕೆ ಆಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

Exit mobile version