Site icon Vistara News

ಮತ್ತೆ ಐಪಿಎಲ್ ಟ್ರೇಡಿಂಗ್‌ ವಿಂಡೋ ಓಪನ್​; ಆರ್​ಸಿಬಿ ಸೇರಲಿದ್ದಾರೆ ರೋಹಿತ್​ ಶರ್ಮ!

IPL 2025: Rohit Sharma To Captain RCB In IPL 2025?

IPL 2025: Rohit Sharma To Captain RCB In IPL 2025?

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಾಳೆ(ಡಿ.19) ದುಬೈನಲ್ಲಿ ನಡೆಯಲಿದೆ. ಇದರ ಬೆನ್ನಲೇ ಐಪಿಎಲ್ ಮಂಡಳಿ ಮತ್ತು ಬಿಸಿಸಿಐ ಡಿಸೆಂಬರ್​ 20ರಿಂದ ಮತ್ತೆ ​ಟ್ರೇಡಿಂಗ್‌ ವಿಂಡೋವನ್ನು ಚಾಲ್ತಿಗೆ ತರಲಿದೆ ಎಂದು ವರದಿಯಾಗಿದೆ. ಹೀಗಾಗಿ ರೋಹಿತ್​ ಶರ್ಮ ಅವರು ಕನ್ನಡಿಗರ ನೆಚ್ಚಿನ ತಂಡ ಆರ್​ಸಿಬಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಶುಕ್ರವಾರ ಅಚ್ಚರಿ ಎಂಬಂತೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನಾಯಕನನ್ನಾಗಿ ನೇಮಿಸಿ, 5 ಬಾರಿ ಕಪ್​ ಗೆಲ್ಲಿಸಿದ ರೋಹಿತ್​ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದು ರೋಹಿತ್‌ ಅಭಿಮಾನಿಗಳು ಸೇರಿ ತಂಡದ ಸಹ ಆಟಗಾರರಿಗೂ ತೀವ್ರ ನೋವುಂಟು ಮಾಡಿತ್ತು. ಇದೇ ವಿಚಾರವಾಗಿ ಮುಂಬೈ ಫ್ರಾಂಚೈಸಿ ವಿರುದ್ಧ ತಮ್ಮದೇ ಅಭಿಮಾನಿಗಳು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು.

ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಕಾರಣ ಅವರು ಮುಂಬೈ ತಂಡ ತೊರೆದು ಬೇರೆ ತಂಡದ ಪರ ಆಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. 2013 ರಿಂದ 2023ರ ವರೆಗೆ ಉತ್ಸಾಹಭರಿತ ಸವಾಲು! ನಿಮ್ಮ ಮೇಲಿನ ಗೌರವ ಹೆಚ್ಚಿದೆ ಎಂದು ಚೆನ್ನೈ ತಂಡ, ರೋಹಿತ್​ ಅವರ ನಾಯಕತ್ವದ ಜರ್ನಿಯ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡು ಗೌರವ ಸೂಚಿಸಿತ್ತು. ಈ ಪೋಸ್ಟ್​ಗೆ ರೋಹಿತ್​ ಪತ್ನಿ ರಿತಿಕಾ ಅವರು ಕಾಮೆಂಟ್​ ಬಾಕ್ಸ್​ನಲ್ಲಿ ಹಳದಿ ಬಣ್ಣದ ಹೃದಯದ ಎಮೋಜಿ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಇದನ್ನು ಕಂಡ ಕೆಲವರು ರೋಹಿತ್​ ಅವರು ಚೆನ್ನೈ ತಂಡವನ್ನು ಸೇರಲಿದ್ದು, ಧೋನಿ ಬಳಿಕ ಅವರು ಚೆನ್ನೈ ತಂಡದ ನಾಯಕನಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಅಲ್ಲದೆ ಡೆಲ್ಲಿ ತಂಡ ಸೇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಇದೀಗ ಆರ್​ಸಿಬಿಗೆ ಸೇರಲಿದ್ದಾರೆ ಎಂಬ ಕೂಗು ಜೋರಾಗಿ ಕೇಳಿ ಬಂದಿದೆ.

ಇದನ್ನೂ ಓದಿ Virat Kohli : ಕೊಹ್ಲಿಗೆ ಆಡಲಾಗದ ಲೆಗ್ ಸ್ಪಿನ್ನರ್​ ಆರ್​ಸಿಬಿಗೆ ಸೇರ್ಪಡೆ?

ಹೌದು, ರೋಹಿತ್​ ಶರ್ಮ ಅವರು ರಾಯಲ್​ ಚಾಲೆಂಜರ್ಸ್ ತಂಡಕ್ಕೆ ಟ್ರೇಡಿಂಗ್​ ವಿಂಡೋ ಆಯ್ಕೆಯ ಮೂಲಕ ಖರೀದಿ ಮಾಡಲಿದೆ ಎಂದು ಆರ್​ಸಿಬಿ ಅಭಿಮಾನಿಗಳು ಹೇಳಲಾರಂಭಿಸಿದ್ದಾರೆ. ಅಲ್ಲದೆ ಆರ್​ಸಿಬಿ ಜೆರ್ಸಿಯಲ್ಲಿ ರೋಹಿತ್​ ಅವರ ಫೋಟೊವನ್ನು ಎಡಿಟ್​ ಮಾಡಿ ಎಲ್ಲಡೆ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಅಭಿಮಾನಿಗಳ ಈ ಮಾತು ನಿಜವಾದರೂ ಅಚ್ಚರಿಯಿಲ್ಲ. ಆದರೆ ರೋಹಿತ್​ ಹಾಗೂ ಆರ್​ಸಿಬಿ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

16 ಆವೃತ್ತಿಗಳಿಂದ ಈ ಸಲ ಕಪ್​ ನಮ್ದೇ ಎಂದು ಹೇಳಿಕೊಂಡು ಬಂದರೂ ಒಮ್ಮೆಯೂ ಕಪ್​ ಗೆಲ್ಲುವಲ್ಲಿ ಯಶಸ್ವಿಯಾಗದ ಆರ್​ಸಿಬಿಗೆ ರೋಹಿತ್​ ಬಂದು ಕಪ್​ ಗೆಲ್ಲಿಸಬೇಕು ಎನ್ನುವುದು ಆರ್​ಸಿಬಿ ಅಭಿಮಾನಿಗಳ ಬಯಕೆಯಾಗಿದೆ. ರೋಹಿತ್​ ಗರಿಷ್ಠ 5 ಐಪಿಎಲ್ ಕಪ್​ ಗೆದ್ದ ನಾಯಕನಾಗಿದ್ದಾರೆ.

ಫಾಲೋವರ್ಸ್​ ನಷ್ಟ

ರೋಹಿತ್‌ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣದಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿದೆ. ಒಂದೊಮ್ಮೆ ರೋಹಿತ್​ ಮುಂಬೈ ತಂಡ ತೊರೆದರೆ ಮತ್ತಷ್ಟು ಫಾಲೋವರ್ಗಳ ಸಂಖ್ಯೆ ಕುಸಿತ ಕಾಣಬಹುದು.

Exit mobile version