ಚೆನ್ನೈ: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2024)ಗೆ ಕ್ಷಣಗಣನೆ ಶುರುವಾಗಿದೆ. 2024ರ ಟೂರ್ನಿಗೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಮತ್ತು ಆರ್ಸಿಬಿ ಸೆಣಸಾಡಲಿದೆ. ಇನ್ನೆರಡು ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಸಿಗಲಿದೆ. ಈ ಬಾರಿ ಚಾಂಪಿಯನ್ ಯಾರಾಗಬಹುದು ಎನ್ನುವ ಕುತೂಹಲದ ಮಧ್ಯೆ ಟ್ರೋಫಿಯಲ್ಲಿ(IPL Trophy) ಬರೆದಿರುವ ಸಂಸ್ಕೃತ ಶ್ಲೋಕದ(IPL Trophy Shlok) ಅರ್ಥವೇನು? 1983ರ ವಿಶ್ವಕಪ್(1983 Cricket World Cup) ಟ್ರೋಫಿಗೂ ಇರುವ ನಂಟೇನು? ಎಂಬ ಮತ್ತೊಂದು ಕುತೂಹಲ ಅಭಿಮಾನಿಗಳದ್ದು. ಇದಕ್ಕೆ ಉತ್ತರ ಇಲ್ಲಿದೆ.
ಹೌದು, ಭಾರತ ತಂಡ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ”(Yatra Pratibha Avsara Prapnotihi) ಎಂದು ಸಂಸ್ಕೃತ ಶ್ಲೋಕವೊಂದನ್ನು ಬರೆಯಲಾಗಿದೆ. ಇದೇ ಶ್ಲೋಕವನ್ನು ಐಪಿಎಲ್ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆಗಳು ಇರುತ್ತಾರೋ ಅಲ್ಲಿ ಅವಕಾಶವೂ ಇರುತ್ತದೆ ಎಂದು. ಇದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಐಪಿಎಲ್ ಟ್ರೋಫಿಯ ಮೇಲೂ ಈ ಶ್ಲೋಕವನ್ನು ಕೆತ್ತಲಾಗಿದೆ.
1983ರಲ್ಲಿ ಕಪಿಲ್ ದೇವ್ ಸಾರಥ್ಯದ ಭಾರತ ತಂಡ ಲಂಡನ್ಗೆ ವಿಶ್ವಕಪ್ ಆಡಲು ತೆರಳಿದ್ದಾಗ ಭಾರತ ತಂಡವನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನ ಮಾಡಲಾಗಿತ್ತು. ಅದರಲ್ಲೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಾಧ್ಯಮಗಳು ಕೆಲ ಸವಾಲನ್ನು ಹಾಕಿದ್ದವು. ಸ್ವತಃ ಭಾರತೀಯರೀಗೂ ಕಪ್ ಗೆಲ್ಲುವ ವಿಶ್ವಾಸವಿರಲಿಲ್ಲ. ಆದರೆ ಅಂದು ಕಪೀಲ್ ದೇವ್ ಪಡೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
ಇದನ್ನೂ ಓದಿ IPL 2024: ಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಎಬಿಡಿ; ಈ ಹಿಂದಿನ 2 ಭವಿಷ್ಯ ಕೂಡ ನಿಜವಾಗಿತ್ತು!
ಕಪಿಲ್ ಸಾರಥ್ಯದಲ್ಲಿ ಗೆದ್ದ ವಿಶ್ವ ಕಪ್ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಐಪಿಎಲ್ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಸದ್ಯ ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಈ ಕಾರಣದಿಂದ ಟ್ರೋಫಿ ಮೇಲೆ ಬರೆದಿರುವ ಶ್ಲೋಕ ಅರ್ಥಪೂರ್ಣವಾಗಿದೆ.
Congrats @rashidkhan_19 Bhai
— Faridantrᵀʰᵒᵏᵏᵘᵏᵘⁿᵗᵘᵖᵒᵛᵃᵃˡᵉ (@faridantr) May 30, 2022
For Won The IPL Tropy 2022🏆 pic.twitter.com/VsLai24Uff
ಅದ್ಧೂರಿ ಉದ್ಘಾಟನ ಸಮಾರಂಭ
ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ. ಈ ವಿಚಾರವನ್ನು ಐಪಿಎಲ್ ಆಡಳಿತ ಮಂಡಳಿ ಬುಧವಾರ ಟ್ವೀಟರ್ ಎಕ್ಸ್ ಖಾತೆಯಲ್ಲಿ ಅಧಿಕೃತ ಪ್ರಕಟನೆಯ ಮೂಲಕ ತಿಳಿಸಿದೆ. ಈ ಕಾರ್ಯಕ್ರಮ ಚೆನ್ನೈಯಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಅಂದರೆ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಗೊಂಡಿದೆ. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.