IPL2022: ಐಪಿಎಲ್ 2022ರ ಆವೃತ್ತಿಯ 67ನೇ ಪಂದ್ಯದಲ್ಲಿ RCB ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಪ್ರಸ್ತುತ ಅಂಕಪಟ್ಟಿ ಪ್ರಕಾರ ಈ ಗೆಲುವು ಆರ್‌ಸಿಬಿ ಪ್ಲೇ ಆಫ್ ತಲುಪು ಸಾಧ್ಯತೆಯನ್ನು ಜೀವಂತವಾಗಿರಿಸಿದೆ. ಆದರೆ, ಆರ್‌ಸಿಬಿ ಪ್ಲೇ ಆಫ್ ತಲುಪಲು ದಿಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ತಂಡದ ನಡುವಿನ ಪಂದ್ಯವೇ ನಿರ್ಣಾಯಕವಾಗಿದೆ.
ಆರ್‌ಸಿಬಿ vs ಗುಜರಾತ್ ಟೈಟಾನ್ಸ್
ಗುಜರಾತ್ ತಂಡವು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಗುಜರಾತ್ ತಂಡ 168 ರನ್ ಗಳಿಸಿತ್ತು. GT ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅಜೇಯ 62 ರನ್ ಬಾರಿಸಿ ಮಿಂಚಿದರು. ಹಾಗೂ ಡೇವಿಡ್ ಮಿಲ್ಲರ್ ಅವರ 34, ಹಾಗೂ ರಶೀದ್ ಖಾನ್ ಅವರ ಅಜೇಯ 19ರನ್ ಆರ್‌ಸಿಬಿ ತಂಡಕ್ಕೆ ಉತ್ತಮ ಟಾರ್ಗೆಟ್ ನೀಡಲು ಸಹಾಯವಾಯಿತು. 169 ರನ್ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭದಿಂದಲೇ ಸ್ಫೋಟಕ ಆಟವನ್ನಾಡಿದರು. 169ರನ್ ಚೇಸ್ ಮಾಡಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಈಗ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತಲುಪಿದೆ.
ಮರಳಿದ ವಿರಾಟ್ ಪರ್ವ:
ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ವಿರಾಟ್ ಕೋಹ್ಲಿ ಅಭಿಮಾನಿಗಳಿಗೆ ಈ ಪಂದ್ಯ ಅತ್ಯಂತ ಖುಷಿ ಕೊಟ್ಟಿದೆ. ಪ್ಲೇ ಆಫ್ ತಲುಪಲು ಆರ್‌ಸಿಬಿ ಗೆಲ್ಲಲೇಬೇಕಾಗಿದ್ದ ಪಂದ್ಯ ಇದಾಗಿತ್ತು. ಈ ಪಂದ್ಯವನ್ನು ಗೆದ್ದಿರುವ ಖುಷಿ ಒಂದು ಕಡೆ.
ಮತ್ತೊಂದಡೆ ವಿರಾಟ್ ಕೋಹ್ಲಿ ಅವರ ಸ್ಫೋಟಕ ಆಟ. ಈ ಬಾರಿ ಐಪಿಎಲ್‌ನಲ್ಲಿ ವಿರಾಟ್ ಅವರು ಫಾರ್ಮ್ ಕಳೆದುಕೊಂಡು ಆಟವಾಡುತ್ತಿದ್ದಂತೆ ಕಾಣುತ್ತಿತ್ತು. ಕೆಲವೊಮ್ಮೆ ಗೋಲ್ಡನ್ ಡಕ್‌ಗೆ ಕೂಡ ಔಟಾಗಿದ್ದರು. ಫೀಲ್ಡ್‌ನಲ್ಲಿ ಅವರ ಮುಂಚಿನ ಅಗ್ರೆಷನ್, ಸಿಗ್ನೇಚರ್ ಕವರ್ ಡ್ರೈವ್, ಬ್ಯಾಟಿಂಗ್‌ನಲ್ಲಿ ಮತ್ತೆ ಅವರ ಮಿಂಚಿನ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಇವೆಲ್ಲವೂ ಕಾಣಲು ಸಿಕ್ಕಿದ್ದು ಈ ಪಂದ್ಯದಲ್ಲಿ. ವಿರಾಟ್ ಈ ಪಂದ್ಯದಲ್ಲಿ 54 ಬಾಲ್‌ಗೆ 73 ರನ್ ಬಾರಿಸಿ ಅಬ್ಬರಿಸಿದರು. 8 ಫೋರ್ ಹಾಗೂ 2 ಸಿಕ್ಸ್ ಬಾರಿಸಿ ಎಲ್ಲರ ಗಮನ ಸೆಳಿದರು.
ಓಪನಿಂಗ್ ಬ್ಯಾಟಿಂಗ್ ಮಾಡಿದ ವಿರಾಟ್ ಹಾಗೂ ಡು ಪ್ಲೆಸಿಸ್ 115 ರನ್ ಜತೆಯಾಟ ನಡೆಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಆರ್‌ಸಿಬಿ ಹೇಗೆ ಪ್ಲೇ ಆಫ್ ತಲುಪಬಹುದು?
ಆರ್‌ಸಿಬಿ ಈಗ 16 ಅಂಕವನ್ನು ಪಡೆದು 4ನೇ ಸ್ಥಾನದಲ್ಲಿದೆ. ಆರ್‌ಸಿಬಿ -0.253 ನೆಟ್ ರನ್‌ರೇಟ್ ಹೊಂದಿದೆ. ಆದರೆ, ದಿಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ತಂಡವೂ ಪ್ಲೇ ಆಫ್ ತಲುಪುವ ಕಾಂಪಿಟೇಶನ್‌ನಲ್ಲಿದೆ.
ರಾಜಸ್ಥಾನ್ ತಂಡ ಈಗಾಗಲೇ 16 ಅಂಕವನ್ನು ಪಡೆದಿದೆ. ಇನ್ನು ಚೆನ್ನೈ ತಂಡದ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದರೆ 18 ಅಂಕ ಪಡೆದು 2ನೇ ಸ್ಥಾನಕ್ಕೆ ತಲುಪುತ್ತದೆ. ಲಖನೌ ತಂಡಕ್ಕಿಂತ ಉತ್ತಮ ನೆಟ್ ರನ್‌ರೇಟ್ ಹೊಂದಿರುವ ಆಧಾರದ ಮೇಲೆ ಸುಲಭವಾಗಿ ಪ್ಲೇ ಆಫ್ ತಲುಪುತ್ತದೆ.
ದಿಲ್ಲಿ ಹಾಗೂ ಮುಂಬೈ ತಂಡದ ನಡುವಿನ ಪಂದ್ಯ ಆರ್‌ಸಿಬಿಗೆ ತಂಡಕ್ಕೆ ನಿರ್ಣಾಯಕ ಪಂದ್ಯವಗಿದೆ. ದಿಲ್ಲಿ ಕ್ಯಾಪಿಟಲ್ಸ್‌ನ ಗೆದ್ದರೆ, 16 ಅಂಕವನ್ನು ಪಡೆದು 4ನೇ ಸ್ಥಾನಕ್ಕೆ ತಲುಪುತ್ತದೆ. ದಿಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ರನ್‌ರೇಟ್ ಆರ್‌ಸಿಬಿ ತಂಡಕ್ಕಿಂತ ಹೆಚ್ಚಿರುವುದರಿಂದ ದಿಲ್ಲಿ ಪ್ಲೇ ಆಫ್ ತಲುಪುತ್ತದೆ ಹಾಗೂ ಅರ್‌ಸಿಬಿ ಐಪಿಎಲ್‌ನಿಂದ ಹೊರ ಉಳಿಯುತ್ತದೆ.
ಆರ್‌ಸಿಬಿ ಪ್ಲೇ ಆಫ್ ತಲುಪಬೇಕೆಂದರೆ ಮುಂಬೈ ತಂಡ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಲೇಬೆಕು.
ಸಾಧ್ಯತೆಗಳು:
- ರಾಜಸ್ಥಾನ್ ತಂಡ ಚೆನ್ನೈ ವಿರುದ್ಧ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವಿರುದ್ಧ ಗೆದ್ದರೆ ಆರ್‌ಸಿಬಿ ಔಟ್ ಆಗುತ್ತದೆ.
- ರಾಜಸ್ಥಾನ್ ತಂಡ ಗೆದ್ದು, ದಿಲ್ಲಿ ಕ್ಯಾಪಿಟಲ್ಸ್ ಸೋತರೆ, ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳು ಪ್ಲೇ ಆಫ್ ತಲುಪುತ್ತದೆ.
- ಇನ್ನು ರಾಜಸ್ಥಾನ್ ಹಾಗೂ ದಿಲ್ಲಿ ಎರಡೂ ತಂಡ ಸೋತರೆ, ರಾಜಸ್ಥಾನ್ ಹಾಗೂ ಆರ್‌ಸಿಬಿ ಪ್ಲೇ ಆಫ್ ತಲುಪುತ್ತದೆ.
ಈ ಸಾಧ್ಯತೆಗಳನ್ನು ಗಮನಿಸಿದಾಗ ಅಂಕ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಮುಂಬೈ ತಂಡದ ಕೈಯ್ಯಲ್ಲಿ ಆರ್‌ಸಿಬಿ ಭವಿಷ್ವಿದೆ ಎಂದು ತಿಳಿದುಬರುತ್ತದೆ.
ಇದನ್ನೂ ಓದಿ: IPL2022 | ಯಾವ ತಂಡ ಪ್ಲೇ-ಆಫ್ ತಲುಪಬಹುದು?