Site icon Vistara News

FIFA World Cup | ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ತಂಡ, ವಿಶ್ವ ಕಪ್‌ ವೇಳೆ ಮತ್ತೊಂದು ವಿವಾದ

fifa worldcup

ದೋಹಾ : ವಿವಾದಗಳ ಮೂಲಕವೇ ಆರಂಭಗೊಂಡ ಫಿಫಾ ವಿಶ್ವ ಕಪ್‌- ೨೦೨೨ (FIFA World Cup) ಅದರಿಂದ ಮುಕ್ತಿ ಪಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಂತೆಯೇ ಸೋಮವಾರ ಇಂಗ್ಲೆಂಡ್‌ ಹಾಗೂ ಇರಾನ್‌ ತಂಡಗಳ ನಡುವಿನ ಪಂದ್ಯದ ವೇಳೆಯೂ ಅನಿರೀಕ್ಷಿತ ವಿವಾದವೊಂದು ಸೃಷ್ಟಿಯಾಗಿದೆ. ಈ ಬಾರಿ ಇರಾನ್‌ ತಂಡದ ಆಟಗಾರರು ವಿವಾದ ಸೃಷ್ಟಿ ಮಾಡಿದ್ದು, ತಮ್ಮ ದೇಶದಲ್ಲಿ ನಡೆಯುತ್ತಿರುವ ಅಭಿಯಾನವೊಂದಕ್ಕೆ ಬೆಂಬಲಿಸಿ ಅವರು ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಾರೆ.

ಮಹಿಳೆಯರಿಗೆ ಬುರ್ಖಾ ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್‌ನಲ್ಲಿ ದೊಡ್ಡ ಅಭಿಯಾನ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಂಡಿದ್ದ ಮಾಶಾ ಅಮಿನಿ ಎಂಬ ೨೨ ವರ್ಷದ ಯುವತಿ ಪೊಲೀಸರ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಆ ಬಳಿಕ ಅಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಆ ಅಭಿಯಾನಕ್ಕೆ ಬೆಂಬಲ ಸೂಚಿಸಿ ಇರಾನ್‌ ಫುಟ್ಬಾಲ್ ತಂಡದ ಆಟಗಾರರು ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿದ್ದಾರೆ.

ಪಂದ್ಯಕ್ಕೆ ಮೊದಲು ಇರಾನ್‌ ತಂಡದ ನಾಯಕ ಅಲಿರೆಜಾ ಜಹಾನ್‌ಭಕಶ್‌ಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆ ವೇಳೆ ಅವರು ಅದಕ್ಕೆ ಉತ್ತರ ಕೊಟ್ಟಿರಲಿಲ್ಲ. ಮೈದಾನಕ್ಕೆ ಇಳಿದ ಆಟಗಾರರು ರಾಷ್ಟ್ರಗೀತೆ ಹಾಡದೇ ಸುಮ್ಮನಿದ್ದರು.

ಈ ಹಿಂದೆ ಫುಟ್ಬಾಲ್ ಆಟಗಾರರು ರಾಷ್ಟ್ರ ಲಾಂಛನವನ್ನು ಹೊಂದಿರುವ ಜರ್ಸಿಯನ್ನು ಕಪ್ಪು ಬಣ್ಣದ ಬಟ್ಟೆಯಿಂದ ಮುಚ್ಚುವ ಮೂಲಕವೂ ತಮ್ಮ ಪ್ರತಿರೋಧ ತೋರಿದ್ದರು.

ಇದನ್ನೂ ಓದಿ | FIFA WORLD CUP | ವಿಶ್ವ ಕಪ್‌ಗೆ ಜಾಕಿರ್‌ ನಾಯ್ಕ್‌ ಕರೆಸಿ ಇಸ್ಲಾಂ ಮತ ಪ್ರವಚನಕ್ಕೆ ಮುಂದಾದ ಕತಾರ್‌

Exit mobile version