ಗ್ವಾಲಿಯರ್: ಇರಾನ್ ಕಪ್(Irani Cup) ಟೂರ್ನಿಯಲ್ಲಿ ಶೇಷ ಭಾರತ ತಂಡ ಮಧ್ಯಪ್ರದೇಶ ವಿರುದ್ಧ 238 ರನ್‌ಗಳ ಭಾರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದ್ವಿಶತಕ ಮತ್ತು ಶತಕ ಬಾರಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗ್ವಾಲಿಯರ್ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶೇಷ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 484 ರನ್‌ಗಳನ್ನು ಕಲೆ ಹಾಕಿತು. ಗುರಿ ಬೆನ್ನಟ್ಟಿದ ಮಧ್ಯಪ್ರದೇಶ 294 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ನಲ್ಲಿ ಶೇಷ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ 213 ರನ್ ಗಳಿಸಿದರೆ, ಅಭಿಮನ್ಯು ಈಶ್ವರನ್ 154 ರನ್ ಗಳಿಸಿದರು.
ಇದನ್ನೂ ಓದಿ Irani Cup: ಒಂದೇ ಪಂದ್ಯದಲ್ಲಿ ದ್ವಿಶತಕ ಮತ್ತು ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಮೊದಲ ಇನಿಂಗ್ಸ್ನಲ್ಲಿ 188 ರನ್‌ಗಳ ಮುನ್ನಡೆ ಪಡೆದ ಶೇಷ ಭಾರತ ಎರಡನೇ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್(144) ಅವರ ಶತಕದ ನೆರವಿನಿಂದ 246 ರನ್‌ಗಳಿಗೆ ಆಲೌಟ್ ಆಗಿ 434 ರನ್‌ಗಳ ಭಾರಿ ಮುನ್ನಡೆ ಪಡೆಯಿತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಮಧ್ಯಪ್ರದೇಶ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಅರ್ಹಂ ಆಕಿಲ್ ಶೂನ್ಯಕ್ಕೆ ಔಟಾದರು. ನಾಯಕ ಹಿಮಾಂಶು ಮಂತ್ರಿ ಅರ್ಧಶತಕ ಗಳಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ಗಳು ಕೂಡ ಹೆಚ್ಚಿನ ರನ್ ಗಳಿಸುವಲ್ಲಿ ವಿಫಲವಾದರು. ಅಂತಿಮವಾಗಿ 58.4 ಓವರ್ 198 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.