ಲಾಹೋರ್: ಪಾಕಿಸ್ತಾನ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಐರ್ಲೆಂಡ್ ಮಹಿಳಾ(IREW VS PAKW) ತಂಡ 34 ರನ್ಗಳಿಂದ ಗೆಲುವು ಸಾಧಿಸುವ ಜತೆಗೆ ಟಿ20 ಸರಣಿಯನ್ನು ಗೆದ್ದು ಬೀಗಿದೆ. ಪಾಕ್ ಈ ಸೋಲಿನೊಂದಿಗೆ ತವರಿನಲ್ಲಿಯೇ ಮುಖಭಂಗಕ್ಕೆ ಒಳಗಾಯಿತು.
ಲಾಹೋರ್‌ನ ಗಡಾಫಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ವನಿತೆಯರು 4 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿದರು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟುವಲ್ಲಿ ವಿಫಲಗೊಂಡ ಪಾಕಿಸ್ತಾನ ವನಿತಾ ತಂಡ 18.5 ಓವರ್‌ಗಳಲ್ಲಿ 133 ರನ್‌ಗಳಿಗೆ ಸರ್ವಪತನ ಕಂಡಿತು.
ಪಾಕಿಸ್ತಾನ ವನಿತೆಯರ ವಿರುದ್ಧ ಟಿ20 ಸರಣಿ ಮುಡಿಗೇರಿಸಿಕೊಂಡ ಬಳಿಕ ಐರ್ಲೆಂಡ್ ವನಿತೆಯರು ಬಸ್‌ನಲ್ಲಿ ಹಾಡು ಹೇಳುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ.ಈ ವಿಡಿಯೊವನ್ನು ಐರ್ಲೆಂಡ್ ಕ್ರಿಕೆಟ್ ಸಮಿತಿ ಟ್ವೀಟ್ ಮಾಡುವ ಮೂಲಕ ತಂಡದ ಗೆಲುವಿಗೆ ಶುಭಹಾರೈಸಿದೆ.
ಸಂಕ್ಷಿಪ್ತ ಸ್ಕೋರ್
ಐರ್ಲೆಂಡ್: 4 ವಿಕೆಟ್ಗೆ 167( ಗೇಬಿ ಲೆವಿಸ್ 71, ಆ್ಯಮಿ ಹಂಟರ್ 40, ನಶ್ರಾ ಸಂಧು 37ಕ್ಕೆ 1)
ಪಾಕಿಸ್ತಾನ: 18.5 ಓವರ್‌ಗಳಲ್ಲಿ 133 ಆಲೌಟ್(ಜವೇರಿಯಾ ಖಾನ್ 50, ಲಾರಾ ಡೆಲಾನಿ 20ಕ್ಕೆ 3, ಅರ್ಲೀನ್ ಕೆಲ್ಲಿ 19ಕ್ಕೆ 3).
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಅಗ್ರ 5 ಆಟಗಾರರು