ಪುಣೆ: ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಶ್ರೀಲಂಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿತು. ಈ ಮೂಲಕ ಆಫ್ಘನ್ ಹಾಲಿ ಆವೃತ್ತಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಅಫಘಾನಿಸ್ತಾನ ತಂಡ ಗೆದ್ದ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್(Irfan Pathan) ಮತ್ತು ಹರ್ಭಜನ್ ಸಿಂಗ್(Harbhajan Singh) ಅವರು ಸ್ಟಾರ್ ಸ್ಪೋರ್ಟ್ಸ್ ಸುಡಿಯೋದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೊ ಮತ್ತು ಫೋಟೊ ವೈರಲ್(Viral Video) ಆಗಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಅಫಘಾನಿಸ್ತಾನ ತಂಡ ಲಂಕಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ಸು ಸಾಧಿಸಿತು. ಬ್ಯಾಟಿಂಗ್ ಆಹ್ವಾನ ಪಡೆದ ಲಂಕಾ ಪಡೆ 49.3 ಓವರ್ಗಳಲ್ಲಿ 241 ರನ್ ಗಳಿಗೆ ಆಲ್ಔಟ್ ಆಯಿತು. ಜವಾಬಿತ್ತ ಆಪ್ಘನ್ 26 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 242 ರನ್ ಬಾರಿಸಿ ಜಯಶಾಲಿಯಾಯಿತು. ಈ ಗೆಲುವಿನೊಂದಿಗೆ ಆಫ್ಘನ್ ತಂಡದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ.
Irfan Pathan and Harbhajan Singh celebrating Afghanistan's win. pic.twitter.com/XyAeqNNFeV
— Mufaddal Vohra (@mufaddal_vohra) October 30, 2023
ಆಫ್ಘನ್ ತಂಡ ಗೆದ್ದ ಖುಷಿಯಲ್ಲಿ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ತಮ್ಮ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ಅವರೊಂದಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದು ಮಾತ್ರವಲ್ಲದೆ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಅಫ್ಘಾನಿಸ್ತಾನ ತಂಡದಿಂದ ಎಂತಹ ಅದ್ಭುತ ಗೆಲುವು. ವಿಶ್ವಕಪ್‌ನಲ್ಲಿ ನಿಮ್ಮ 3ನೇ ಗೆಲುವಿಗೆ ಅಭಿನಂದನೆಗಳು. ನೀವು ಸೋಲಿಸಿದ್ದು 3 ಮಾಜಿ ವಿಶ್ವ ಚಾಂಪಿಯನ್‌ಗಳನ್ನು. ನಿಮ್ಮ ಸಾಹಸಕ್ಕೆ ಮೆಚ್ಚಲೇ ಬೇಕು” ಎಂದು ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ ICC World Cup 2023 : ಲಂಕಾ ಮಣಿಸಿದ ಅಫಘಾನಿಸ್ತಾನ; ವಿಶ್ವ ಕಪ್ನಲ್ಲಿ 3ನೇ ಜಯ
The chase from Afghanistan was so controlled that at every point of time they were in total control. Professional stuff. In the Indian conditionsif you know how to play spin well and bowl spin well then you will be in the game. Afghans certainly have those qualities now. #AFGvsL
— Irfan Pathan (@IrfanPathan) October 30, 2023
ಪಾಕಿಸ್ತಾನ ವಿರುದ್ಧ ಗೆದ್ದಾಗಲು ನೃತ್ಯ ಮಾಡಿದ್ದ ಪಠಾಣ್
ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಅಮೋಘ ಗೆಲುವು ಸಾಧಿಸಿದಾಗಲೂ ಆಫ್ಘನ್ ಆಟಗಾರರೊಂದಿಗೆ ಇರ್ಫಾನ್ ಪಠಾಣ್ ಅವರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು.
ಅಫ್ಘಾನಿಸ್ತಾನ ತಂಡದ ಆಟಗಾರರು ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಮಾಡಲು ಮೈದಾನಕ್ಕೆ ಬರುತ್ತಿದ್ದ ವೇಳೆ ನೇರವಾಗಿ ಆಟಗಾರರ ಬಳಿ ಬಂದ ಇರ್ಫಾನ್ ಪಠಾಣ್ ಅವರು ಕುಣಿಯಲು ಆರಂಭಿಸಿದರು. ಅಲ್ಲದೆ ಆಫ್ಘನ್ ಆಟಗಾರರು ಕುಣಿಯುವಂತೆ ಪ್ರೋತ್ಸಾಹಿಸಿದರು. ಈ ವೇಳೆ ರಶೀದ್ ಖಾನ್ ಅವರು ಇರ್ಫಾನ್ ಜತೆ ಹೆಜ್ಜೆ ಹಾಕಿದರು. ಬಳಿಕ ಇಬ್ಬರು ತಬ್ಬಿಕೊಂಡು ಧನ್ಯವಾದ ತಿಳಿಸಿದ್ದರು.