Site icon Vistara News

ಭಾರತ -ಪಾಕ್ ಸೆಮಿಫೈನಲ್​ ಪಂದ್ಯ ಸಾಧ್ಯವೇ? ಅದಕ್ಕಾಗಿ ಬಾಬರ್ ಅಜಂ ಪಡೆ ಏನು ಮಾಡಬೇಕು?

Pakistan Cricket team

ಬೆಂಗಳೂರು: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನವು ವಿಶ್ವಕಪ್ (ICC World Cup 2023) ಸೆಮಿಫೈನಲ್​​ ರೇಸ್​ನಿಂದ ಬಹುತೇಕ ಹೊರಕ್ಕೆ ಬಿದ್ದಿದೆ. ಗುರುವಾರ ಬೆಂಗಳೂರಿನಲ್ಲಿ ಶ್ರೀಲಂಕಾವನ್ನು ಸೋಲಿಸಿದ ಕಿವೀಸ್ ತಂಡ ರನ್​​ರೇಟ್​ ಹೆಚ್ಚಿಸಿಕೊಂಡಿದೆ. ಹೀಗಾಗಿ ಬಾಬರ್​ ಅಜಂ ಪಡೆ ಸೆಮಿಫೈನಲ್ ತಲುಪುವ ಭರವಸೆಯನ್ನು ಜೀವಂತವಾಗಿಡಲು ಇಂಗ್ಲೆಂಡ್ ವಿರುದ್ಧ 275 ರನ್​ಗಳ ಬೃಹತ್​ ಅಂತರದ ಗೆಲುವು ಸಾಧಿಸಬೇಕಾಗಿದೆ. ಇಂಗ್ಲೆಂಡ್ ತಂಡ ಚೇತರಿಕೆಯ ಪ್ರದರ್ಶನ ನೀಡುತ್ತಿರುವ ಕಾರಣ ಇದು ಅಸಾಧ್ಯ ಎನ್ನಲಾಗಿದೆ.

ಲಂಕಾ ವಿರುದ್ದ ಗೆದ್ದ ಬಳಿಕ ಕೇನ್ ವಿಲಿಯಮ್ಸನ್ ಪಡೆ 10 ಅಂಕಗಳನ್ನು ಗಳಿಸಿ ಸೆಮಿಫೈನಲ್ ಹಂತದಲ್ಲಿ 4ನೇ ಸ್ಥಾನವನ್ನು ಬಹುಗೇಕ ಖಚಿತಪಡಿಸಿಕೊಂಡಿದೆ. ಈ ಗೆಲವು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಸೆಮಿ ಫೈನಲ್ ಪಂದ್ಯ ನಡೆಯಲಿ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗುವ ನಿರೀಕ್ಷೆ ಹೆಚ್ಚಿದೆ.

ಗುರುವಾರದ ಪಂದ್ಯಕ್ಕೆ ಮೊದಲು ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ನಂತೆಯೇ 8 ಅಂಕ ಹೊಂದಿತ್ತು. ಆದಾಗ್ಯೂ, ಕಿವೀಸ್​ನ ಗೆಲುವು ದೊಡ್ಡ ಅಂತರದಾಗಿರುವ ಕಾರಣ ಬಾಬರ್ ಅಜಮ್​ ಪಡೆಯ ಹಾದಿ ಕಠಿಣವಾಗಿದೆ.

ಕೋಲ್ಕೊತಾದಲ್ಲಿ ಪಾಕ್​- ಇಂಗ್ಲೆಂಡ್ ಪಂದ್ಯ

ನವೆಂಬರ್ 11 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಅಂದಿನ ಪಂದ್ಯವು ಪಾಕ್ ತಂಡದ ಭವಿಷ್ಯ ಹೇಳಲಿದೆ. ಅಂದು ಪಾಕ್​ ತಂಡ ಹಾಲಿ ಚಾಂಪಿಯನ್ಸ್ ವಿರುದ್ಧ 287 ರನ್​ಗಳ ಬೃಹತ್ ಅಂತರದ ಗೆಲುವು ಸಾಧಿಸಲೇಬೇಕಾಗಿದೆ. ಅಷ್ಟೇ ಅಲ್ಲ, ಪಾಕಿಸ್ತಾನವು ತನ್ನ ನಾಯಕ ಬಾಬರ್ ಅಜಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲೇಬೇಕು. ಇಂಗ್ಲೆಂಡ್​ ತಂಡಕ್ಕೆ ಪಾಕಿಸ್ತಾನಕ್ಕಿಂತ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕರೆ ಸವಾಲು ಇನ್ನಷ್ಟು ಕಠಿಣವಾಗಲಿದೆ.

ಬೃಹತ್​ ಮೊತ್ತ ಅಗತ್ಯ

2019 ರ ವಿಶ್ವಕಪ್​​ನಲ್ಲಿ ನ್ಯೂಜಿಲೆಂಡ್ ಮೆನ್ ಇನ್ ಬ್ಲೂ ತಂಡವನ್ನು ಸೋಲಿಸಿದ್ದನ್ನು ಪರಿಗಣಿಸಿದರೆ ಭಾರತೀಯ ಅಭಿಮಾನಿಗಳು ಅವರೇ ಸೆಮೀಸ್​ಗೆ ಬರಲಿ ಹಾಗೂ ಅವರ ವಿರುದ್ದ ಸೇಡು ತೀರಿಸಿಕೊಳ್ಳೋಣ ಎಂದು ಅಂದುಕೊಳ್ಳುತ್ತಿದ್ದಾರೆ. ಆದರೆ, ಪಾಕ್ ಬರಲಿ, ಅವರನ್ನು ಸೋಲಿಸಿದರೆ ಇನ್ನಷ್ಟು ಖುಷಿ ಎಂದು ಅಂದುಕೊಳ್ಳುವವರು ಬಾಬರ್ ಅಜಮ್ ಮತ್ತು ತಂಡವು ಮೊದಲು ಬ್ಯಾಟಿಂಗ್ ಮಾಡಿ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಬೇಕಾಗುತ್ತದೆ.

ಈ ಸುದ್ದಿಯನ್ನೂ ಓದಿ: ICC World Cup 2023 : ಲಂಕಾ ವಿರುದ್ದ ನ್ಯೂಜಿಲ್ಯಾಂಡ್​ ಗೆದ್ದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದರೆ 287 ರನ್​ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ, ಪಾಕಿಸ್ತಾನವು ಚೇಸ್ ಮಾಡಲು ಮುಂದಾದರೆ ಇಂಗ್ಲೆಂಡ್ ಅನ್ನು ಮೊದಲು 50 ರನ್​ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಬೇಕಾಗುತ್ತದೆ ಮತ್ತು ಕೇವಲ 2 ಓವರ್​ಗಳಲ್ಲಿ 51 ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಇಂಗ್ಲೆಂಡ್ 100 ರನ್ ಗಳಿಸಿದರೆ, ಪಾಕಿಸ್ತಾನವು 3 ಓವರ್​ಗಳಲ್ಲಿ ಚೇಸಿಂಗ್ ಮಾಡಬೇಕಾಗುತ್ತದೆ

ನ್ಯೂಜಿಲೆಂಡ್​ನ ನೆಟ್ ರನ್ ರೇಟ್ +0.743 ಅನ್ನು ಮೀರಿಸಲು ಅಫ್ಘಾನಿಸ್ತಾನವು 438 ರನ್​ಗಳಿಂದ ಗೆಲ್ಲಬೇಕಾಗಿದೆ. 2019 ರ ವಿಶ್ವ ಕಪ್​ನ ​ ಪುನರಾವರ್ತನೆಯಾದ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್​​ ಸಾಧ್ಯತೆಗಳು ಸುಮಾರು 99.9% ರಷ್ಟಿದೆ. ಆಸ್ಟ್ರೇಲಿಯಾವು ಮತ್ತೊಂದು ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Exit mobile version