Site icon Vistara News

IPL 2023: ಫಿಕ್ಸ್​ ಆಗಿದೆಯಾ ಐಪಿಎಲ್ ಫೈನಲ್​ ಪಂದ್ಯ; ಸಿಎಸ್​ಕೆ ರನ್ನರ್​ ಅಪ್​?

IPL match FIxed

#image_title

ಅಹದಮಾಬಾದ್​ : ಐಪಿಎಲ್ 2023ರ ಆವೃತ್ತಿಯ ಫೈನಲ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಎರಡು ತಿಂಗಳ ಹಿಂದೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಫೈನಲ್​​ನ ಲ್ಲಿ 10ನೇ ಬಾರಿಗೆ ಕಣಕ್ಕಿಳಿದಿರುವ ಚೆನ್ನೈ ದಾಖಲೆಯ 5ನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದರೆ, ಗುಜರಾತ್ ತಂಡ ಸಿಎಸ್ ಕೆ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ.

ಫೈನಲ್ ಪಂದ್ಯ ಆರಂಭಕ್ಕೂ ಮುನ್ನ, ಐಪಿಎಲ್ 2023 ರ ಫೈನಲ್ ಫಿಕ್ಸಿಂಗ್ ನಡೆಯಲಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪಂದ್ಯ ನಡೆಯುವ ನರೇಂದ್ರ ಮೋದಿ ಸ್ಟೇಡಿಯಮ್​ನ ಚಿತ್ರವನ್ನು ಹಾಕಿ ಗುಜರಾತ್​ ತಂಡ ಚಾಂಪಿಯನ್ ಹಾಗೂ ಸಿಎಸ್​ಕೆ ರನ್ನರ್​ ಅಪ್​ ಎಂಬ ಸಂದೇಶವನ್ನು ಹರಡಲಾಗಿದೆ. ಈ ಮೂಲಕ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ.

ಸ್ಟೇಡಿಯಮ್​ನ ದೊಡ್ಡ ಪರದೆಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ರನ್ನರ್ ಅಪ್​ ಎಂದು ಬರೆದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಸಿಎಸ್​​ಕೆ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಆದರೆ, ಗುಜರಾತ್​ ಅಭಿಮಾನಿಗಳು ಸಂತಸದಲ್ಲಿದ್ದಾರೆ.

ಸರಿ, ಇದು ಬಹುಶಃ ದೊಡ್ಡ ಫೈನಲ್​ಗೆ ಮೊದಲು ಸ್ಕ್ರೀನ್ ಟೆಸ್ಟಿಂಗ್ ನಡೆಸಿರಬಹುದು ಎನ್ನಲಾಗಿದೆ. ಆದ್ದರಿಂದ ಬಹುಶಃ ಗುಜರಾತ್ ಟೈಟನ್ಸ್ ತಂಡಕ್ಕೂ ಇದೇ ರೀತಿಯ ಪರೀಕ್ಷೆಯನ್ನು ನಡೆಸಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : IPL 2023 : ಫೈನಲ್​ ಪಂದ್ಯಕ್ಕೆ ಮೊದಲೇ ನಿವೃತ್ತಿ ಘೋಷಿಸಿದ ಸಿಎಸ್​ಕೆ ಬ್ಯಾಟರ್​!

ಚೆನ್ನೈ ತಂಡ ಹಾಲಿ ಐಪಿಎಲ್​ನಲ್ಲಿ ಗುಜರಾತ್ ವಿರುದ್ಧ ಸೆಣಸುತ್ತಿರುವುದು ಇದು ಮೂರನೇ ಬಾರಿ. ಅಹ್ಮದಾಬಾದ್​​ನ ಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ, ಗುಜರಾತ್​ ತಂಡ ಗೆಲುವು ಕಂಡಿತ್ತು. ಆದರೆ, ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಗುಜರಾತ್ ಸೋತಿತ್ತು. ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಮುಂಬಯಿ ಇಂಡಿಯನ್ಸ್​ ವಿರುದ್ದ 62 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು.

ಕಳೆದ ವರ್ಷ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಚೆನ್ನೈ ತಂಡ 2023ರಲ್ಲಿ ಅದ್ಭುತ ಚೇತರಿಕೆ ಕಂಡಿದೆ. ಮೊದಲ ತಂಡವಾಗಿ ಫೈನಲ್​ಗೇರುವ ಮೂಲಕ ಸಾಧನೆ ಮಾಡಿತ್ತು.

Exit mobile version