Site icon Vistara News

Ishan Kishan: ಮತ್ತೆ ದೇಶೀಯ ಕ್ರಿಕೆಟ್​ ಆಡಲು ಮುಂದಾದ ಇಶಾನ್​ ಕಿಶನ್​

Ishan Kishan

Ishan Kishan: Ishan Kishan set to make domestic comeback for Jharkhand in upcoming season

ಮುಂಬಯಿ: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ನಾಣ್ಣುಡಿಯಂತೆ ರಣಜಿ ಆಡಲು ಅಸಡ್ಡೆ ತೋರಿ ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿರುವ ಇಶಾನ್​ ಕಿಶನ್​(Ishan Kishan) ತಮ್ಮ ತಪ್ಪನ್ನು ಅರಿತು ಇದೀಗ ಮತ್ತೆ ದೇಶೀಯ ಕ್ರಿಕೆಟ್​ ಆಡಲು ಮುಂದಾಗಿದ್ದಾರೆ.

ಕ್ರಿಕ್​ಬಝ್​ ವರದಿ ಮಾಡಿದ ಪ್ರಕಾರ 26 ವರ್ಷದ ಇಶಾನ್​ ಕಿಶನ್​ ಮತ್ತೆ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ನಿಟ್ಟಿನಲ್ಲಿ ಮುಂದಿನ ಆವೃತ್ತಿಯ ರಣಜಿ ಮತ್ತು ಇತರ ಕ್ರಿಕೆಟ್​ ಟೂರ್ನಿಯಲ್ಲಿ ತಮ್ಮ ತವರಾದ ಜಾರ್ಖಂಡ್​ ಪರ ರಣಜಿ ಆಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಇಶಾನ್​ ಅವರಂತೆಯೇ ದೇಶೀಯ ಕ್ರಿಕೆಟ್​ ಆಡದೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್​ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಯ್ನನಾಡುತ್ತಿದ್ದಾರೆ. ಆದರೆ ಇಶಾನ್​ಗೆ ಅವಕಾಶ ಲಭಿಸಲಿಲ್ಲ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್​ಗೆ ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

ಮಾನಸಿಕ ಒತ್ತಡದದಿಂದ ಬಳಲುತ್ತಿರುವುದಾಗಿ ಸುಳ್ಳು ಕಾರಣ ನೀಡಿ  ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ದುಬೈನಲ್ಲಿಯೂ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ Ishan Kishan: ಟೀಮ್​ ಇಂಡಿಯಾದಲ್ಲಿ ಇಶಾನ್ ಕಿಶನ್​ಗೆ ಬಾಗಿಲು ಬಂದ್​?

ತಂಡಕ್ಕೆ ಆಯ್ಕೆ ಮಾಡದಿರುವುದರ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಇಶಾನ್​, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್​ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್​ ಬಿಟ್ಟು ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಇಂಡಿಯನ್ ಎಕ್ಸ್ ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಪ್ರತಿಭಾನ್ವಿತ ಆಟಗಾರನಾಗಿರುವ ಇಶಾನ್​ ಭಾರತ ಪರ ದ್ವಿಶತಕ ಬಾರಿಸಿದ ಸಾಧನೆಯನ್ನೂ ಕೂಡ ಮಾಡಿದ್ದಾರೆ. ಸೊಕ್ಕಿನಿಂದಲೇ ಅವರು ತಮ್ಮ ಕ್ರಿಕೆಟ್​ ಕೆರಿಯರ್​ ಹಾಳುಮಾಡುತ್ತಿದ್ದಾರೆ. ಇನ್ನಾದರೂ ಮಾಡಿದ ತಪ್ಪಿನಿಂದ ಬುದ್ಧಿ ಕಲಿತು ಶಿಸ್ತಿನಿಂದ ಬಿಸಿಸಿಐ ಮತ್ತು ಕೋಚ್​ ಮಾತುಗಳನ್ನು ಕೇಳುವ ಮೂಲಕ ಆಡಿದರೆ ಭಾರತ ತಂಡದಲ್ಲಿ ಮುಂದುವರಿಯಬಹುದು. ಮತ್ತೆ ಇದೇ ತಪ್ಪು ಮರುಕಳಿಸಿದರೆ, ತಂಡಕ್ಕೆ ಸೇರ್ಪಡೆಗೊಳ್ಳುವುದು ಕಷ್ಟ ಸಾಧ್ಯ. ಏಕೆಂದರೆ ಈಗಾಗಲೇ ಹಲವು ಯುವ ಆಟಗಾರರು ತಂಡದ ಪರ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.

Exit mobile version