ಬೆಂಗಳೂರು: ಇಶಾನ್ ಕಿಶನ್ ಅವರ ಆಯ್ಕೆ ಮತ್ತು ಕ್ರಿಕೆಟ್ ಜೀವನ ಕುತೂಹಲಕಾರಿಯಾಗಿದೆ. ಯುವ ಆಟಗಾರ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಒಂದು ಕಡೆ ಹೇಳುತ್ತಿರುವ ನಡುವೆಯೇ ಅವರು ಅಶಿಸ್ತು ತೋರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಭಾರತ ಹಾಗೂ ಅಫಘಾನಿಸ್ತಾನ ಟಿ20 ಸರಣಿಯಿಂದ ಕಿಶನ್ ಅವರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ವದಂತಿಯನ್ನು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ. ಆದಾಗ್ಯೂ ಯುವ ಆಟಗಾರ ಕೋಚ್ ಮಾತನ್ನು ಧಿಕ್ಕರಿಸುತ್ತಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಇಶಾನ್ಗೆ ರಣಜಿ ಟ್ರೋಫಿಯಲ್ಲಿ ಆಡುವಂತೆ ದ್ರಾವಿಡ್ ಹೇಳಿರುವ ಹೊರತಾಗಿಯೂ ಅವರು ಜಾರ್ಖಂಡ್ ತಂಡದಲ್ಲಿ ಆಡುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಯಾಕೆಂದರೆ ಅವರು ರಣಜಿಯಲ್ಲಿ ತಂಡದಲ್ಲಿ ಕಾಣುತ್ತಿಲ್ಲ.
ಮುಂಬರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್. ರಾಹುಲ್ ಅವರಿಗಿಂತ ಮುಂಚಿತವಾಗಿ ಇಶಾನ್ಗೆ ಅವಕಾಶ ಕೊಡುವ ಉದ್ದೇಶದಿಂದ ದ್ರಾವಿಡ್ ಈ ಮಾತನ್ನು ಹೇಳಿದ್ದರು. ಆದರೆ, ಕೋಚ್ ಮಾತನ್ನೇ ಧಿಕ್ಕರಿಸಿದ್ದಾರೆ ಯುವ ಆಟಗಾರ. ಇಶಾನ್ ಕಿಶನ್ ಮಹಾರಾಷ್ಟ್ರ ವಿರುದ್ಧದ ಜಾರ್ಖಂಡ್ ರಣಜಿ ತಂಡಕ್ಕೆ ಗೈರುಹಾಜರಾಗಿದ್ದಾರೆ. ಪ್ರಸ್ತುತ ಭಾರತ ಮತ್ತು ಅಫಘಾನಿಸ್ತಾನ ಸರಣಿಯಲ್ಲಿ ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಸ್ಟಂಪ್ಗಳ ಹಿಂದಿನ ಜವಾಬ್ದಾರಿ ನೀಡಲಾಗಿದೆ. ಇಶಾನ್ ಅವರನ್ನು ಕೈ ಬಿಡುವುದಕ್ಕೆ ಅವರು ಅಶಿಸ್ತೇ ಕಾರಣ ಎಂದು ಹೇಳಲಾಗಿದೆ.
ಇದನ್ನೂ ಓದಿ : David Warner : ವಿಶ್ವದ ಭಯಂಕರ ಬೌಲರ್ ಯಾರೆಂದು ವಿವರಿಸಿದ ಡೇವಿಡ್ ವಾರ್ನರ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಇಶಾನ್ ಕಿಶನ್ ಕರೆ ಬರುತ್ತದೆಯೇ ಎಂದು ನೋಡಬೇಕಾಗಿದೆ. ರೆಡ್ ಬಾಲ್ ಕ್ರಿಕೆಟ್ಗೆ ಸಂಬಂಧಿಸಿದಂತೆ ಕೆಎಲ್ ರಾಹುಲ್ ನಿಯೋಜಿತ ಕೀಪರ್ ಆಗಿದ್ದರೆ. ಕೆ.ಎಸ್ ಭರತ್ ಬ್ಯಾಕಪ್ ಆಯ್ಕೆಯಾಗಿ ಉಳಿದಿದ್ದಾರೆ. ಆದರೆ ಟಿ20 ವಿಶ್ವಕಪ್ ಹತ್ತಿರದಲ್ಲೇ ಇರುವುದರಿಂದ ಕಿಶನ್ ಆಯ್ಕಗಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಲೇಬೇಕು. ಅದಕ್ಕಾಗಿ ದ್ರಾವಿಡ್ ಮಾತನ್ನು ಕೇಳಬೇಕು. ಆದರೆ, ಇಶಾನ್ ವರ್ತನೆಗಳ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ.
ಕಿಶನ್ ಅವರನ್ನು ರಣಜಿ ಟ್ರೋಫಿ ಆಡಲು ಕೇಳಲಾಗಿದ್ದರೂ, ಅವರು ತಂಡದಲ್ಲಿ ಕಾಣುತ್ತಿಲ್ಲ. ಇಲ್ಲ, ಇಶಾನ್ ತನ್ನ ಲಭ್ಯತೆಯ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ”ಎಂದು ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಜೆಎಸ್ಸಿಎ) ಕಾರ್ಯದರ್ಶಿ ದೇಬಶಿಶ್ ಚಕ್ರವರ್ತಿ ಪಿಟಿಐಗೆ ತಿಳಿಸಿದ್ದಾರೆ.
ಜೈಲಿನಲ್ಲಿ ಒಂದು ರಾತ್ರಿ ಕಳೆದಿದ್ದ ಇಶಾನ್ ಕಿಶನ್!
ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ವಿಕೆಟ್ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಆಯ್ಕೆಯಾಗದಿರುವ ಬಗ್ಗೆ ಚರ್ಚೆಗಳು ಜೋರು ನಡೆದಿವೆ. ಕಿಶ ನ್ಅವರನ್ನು ಹೊರಗಿಟ್ಟಿರುವುದು ಯಾಕೆ ಎಂದು ಆಯ್ಕೆಗಾರರಿಗೆ ಹಲವರು ಪ್ರಶ್ನಿಸಿದ್ದಾರೆ. ಅನುಪಸ್ಥಿತಿಯ ಹಿಂದಿನ ನಿಜವಾದ ಕಾರಣಗಳ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಅನೇಕರು ಆರಂಭದಲ್ಲಿ ಇದು ಮಾನಸಿಕ ಆರೋಗ್ಯ ವಿರಾಮಕ್ಕೆ ಸಂಬಂಧಿಸಿದೆ ಎಂದು ನಂಬಿದ್ದರೂ, ಇತ್ತೀಚಿನ ವರದಿಗಳು ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಇರಬಹುದು ಎಂದು ಹೇಳಿದ್ದಾರೆ.
ಇಶಾನ್ ಕಿಶನ್ ಚರ್ಚೆಯ ವ್ಯಾಪ್ತಿಯೊಳಗೆ ಬಂದಿರುವುದು ಇದೇ ಮೊದಲಲ್ಲ. 2016 ರಲ್ಲಿ, ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕರಾಗಿದ್ದ ಯುವ ಕ್ರಿಕೆಟಿಗನನ್ನು ರಾಶ್ ಡ್ರೈವಿಂಗ್ ಕಾರಣಕ್ಕೆ ಪಾಟ್ನಾದಲ್ಲಿ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ನಡೆದ ಜೂನಿಯರ್ ವಿಶ್ವಕಪ್ಗೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿತ್ತು. ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಅಪಾಯಕ್ಕೆ ಸಿಲುಕಿಸಿತ್ತು. ಕೊನೆಗೂ ಅವರು ಬಚಾವಾಗಿದ್ದರು.
ಬಿಹಾರ ಮೂಲದ ಇಶಾನ್ ಜಾರ್ಖಂಡ್ ಪರ ಆಡುವ ವೇಳೆ ತನ್ನ ತಂದೆಯ ಕಾರನ್ನು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಅದರಲ್ಲಿದ್ದವರು ಗಾಯಗೊಂಡಿದ್ದರು. ಪ್ರಕರಣ ದಾಖಲಾಗದಿದ್ದರೂ, ಕೋಪಗೊಂಡ ಸ್ಥಳೀಯರು ಕಿಶನ್ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತ್ತು. ಕಿಶನ್ ಅವರ ತಂದೆ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಮತ್ತು ಆಟೋ ರಿಕ್ಷಾ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ಜಗಳ ಕೊನೆಗೊಂಡಿತ್ತು. ಆದರೆ ಪೊಲೀಸರು ಇಶಾನ್ ಕಿಶನ್ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಅವರು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಗಿತ್ತು.