Site icon Vistara News

Ishan Kishan: ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಯಿಂದ ದಿಢೀರ್​ ಹಿಂದೆ ಸರಿದ ಇಶಾನ್​ ಕಿಶನ್

Ishan Kishan

ಮುಂಬಯಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಕಮ್​ ಕೀಪರ್​ ಇಶಾನ್​ ಕಿಶನ್(Ishan Kishan)​ ಅವರು ಹಿಂದೆ ಸರಿದಿದ್ದಾರೆ. ಬದಲಿ ಆಟಗಾರನಾಗಿ ಶ್ರೀಕರ್​ ಭರತ್​(KS Bharat) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇಶಾನ್​ ಅವರು ಸರಣಿಯಿಂದ ಹಿಂದೆ ಸರಿದ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪ್ರಕಟಿಸಿದೆ.

“ಇಶಾನ್ ಕಿಶನ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿಯುವಂತೆ ಕೋರಿ ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆಎ ವಿಕೆಟ್​ ಕೀಪರ್​-ಬ್ಯಾಟರ್​ ಆಗಿರುವ ಶ್ರೀಕರ್​ ಭರತ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ” ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಶನಿವಾರವಷ್ಟೇ ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಅವರು ಫಿಟ್​ ಇಲ್ಲದ ಕಾರಣ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದರು. ಆದರೆ ಅವರ ಸ್ಥಾನಕ್ಕೆ ಬೌಲರ್​ ಆಯ್ಕೆ ಮಾಡುವ ಬದಲು ಶ್ರೇಯಸ್​ ಅಯ್ಯರ್​ ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಅಯ್ಯರ್​ ಅವರನ್ನು 2 ಏಕದಿನ ಪಂದ್ಯದಿಂದ ಕೈ ಬಿಡಲಾಯಿತು.

ಭಾರತ ಟೆಸ್ಟ್​ ಪರಿಷ್ಕೃತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಕೆ.ಎಲ್ ರಾಹುಲ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪ ನಾಯಕ), ಪ್ರಸಿದ್ಧ್ ಕೃಷ್ಣ, ಕೆ.ಎಸ್ ಭರತ್ (ವಿಕೆಟ್​ ಕೀಪರ್​).

ಇದನ್ನೂ ಓದಿ IND vs SA: ಅರ್ಶ್​ದೀಪ್ ‘ಆವೇಶ’ ಬೌಲಿಂಗ್ ದಾಳಿಗೆ ನಲುಗಿದ ​ದಕ್ಷಿಣ ಆಫ್ರಿಕಾ

ರಿಷಭ್​ ಪಂತ್​ ಅವರು ಕಾರು ಅಪಘಾತದಲ್ಲಿ ಗಾಯಗೊಂಡ ಕಾರಣ ಅವರ ಬದಲಿಗೆ ಭರತ್​ ಅವರಿಗೆ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾದಲ್ಲಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನೀಡಲಾಗಿತ್ತು. ಆಸೀಸ್​ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಅವರು ಟೀಮ್​ ಇಂಡಿಯಾಕ್ಕೆ ಪಪಾರ್ಪಣೆ ಮಾಡಿದ್ದರು. ಆದರೆ ಅವರು ಇದುವರೆಗೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಸದ್ಯ ಭಾರತ ಪರ 5 ಟೆಸ್ಟ್​ ಆಡಿರುವ ಅವರು 129 ರನ್​ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾದರೂ ಕೂಡ ಭರತ್​ ಆಡುವ ಬಳಗಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಪ್ರಧಾನ ಕೀಪರ್​ ಆಗಿದ್ದಾರೆ. ರಾಹುಲ್ ವಿಶ್ರಾಂತಿ ಬಯಿಸಿದರೆ ಮಾತ್ರ ಅವರಿಗೆ ಅವಕಾಶ ಸಿಗಬಹುದು.

Exit mobile version