ಚಿತ್ತಗಾಂಗ್ : ಇಶಾನ್ ಕಿಶನ್ (೨೧೦) ಅವರ ವಿಶ್ವ ದಾಖಲೆಯ ದ್ವಿಶತಕ ಹಾಗೂ ವಿರಾಟ್ ಕೊಹ್ಲಿಯ (೧೧೩) ಅವರ ಅಮೋಘ ಶತಕದ ನೆರವು ಪಡೆದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಭಾರತ 409 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಭಾರತ ತಂಡದ ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ಕಾರಣ ಈ ಪಂದ್ಯಕ್ಕೆ ಕಿಮ್ಮತ್ತಿಲ್ಲ. ಆದಾಗ್ಯೂ ದೊಡ್ಡ ಮೊತ್ತ ಪೇರಿಸಿ ಹಳೆ ನೋವು ಮರೆಯಲು ಟೀಮ್ ಇಂಡಿಯಾಗೆ ಅವಕಾಶವಿದೆ.
ಇಲ್ಲಿನ ಜಹಾರ್ ಅಹಮದ್ ಚೌಧರಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಭಾರತ ತಂಡ ಇಶಾನ್ ಹಾಗೂ ವಿರಾಟ್ ಕೊಹ್ಲಿಯ ೨೯೦ ರನ್‌ಗಳ ಜತೆಯಾಟದ ನೆರವು ಪಡೆದು ನಿಗದಿತ ೫೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೪೦೯ ರನ್ ಪೇರಿಸಿತು.
ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಶಿಖರ್ ಧವನ್ (೦೩) ಅವರ ವಿಕೆಟ್ ಬೇಗನೆ ಪತನಗೊಳ್ಳುವ ಮೂಲಕ ಹಿನ್ನಡೆ ಎದುರಾಯಿತು. ಆದರೆ, ವಿರಾಟ್ ಹಾಗೂ ಇಶಾನ್ ಮುನ್ನುಗ್ಗಿ ಆಡಿದರು. ಇಶಾನ್ ೧೨೬ ಎಸೆತಗಳಲ್ಲಿ ದ್ವಿಶತಕ ಪೂರೈಸುವ ಜತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಇದೇ ವೇಳೆ ವಿರಾಟ್ ಕೊಹ್ಲಿ ೭೨ನೇ ಶತಕ ಅಂತಾರಾಷ್ಟ್ರೀಯ ಶತಕ ಬಾರಿಸಿದರು. ನೀ ಮೂಲಕ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದರು. ವಿರಾಟ್ ಕೊಹ್ಲಿ ೨೦೧೯ರ ಬಳಿಕ ಬಾರಿಸಿದ ಮೊದಲ ಒಡಿಐ ಶತಕ ಇದಾಗಿದೆ.
ಸ್ಕೋರ್ ವಿವರ : ಭಾರತ ೫೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೪೦೯ (ಇಶಾನ್ ಕಿಶನ್ ೨೧೦, ವಿರಾಟ್ ಕೊಹ್ಲಿ ೧೧೩, ವಾಷಿಂಗ್ಟನ್ ಸುಂದರ್ ೩೭; ಶಕಿಬ್ ಅಲ್ ಹಸನ್ ೬೮ಕ್ಕೆ೨).