Site icon Vistara News

IPL 2023 : ಇಶಾನ್​ ಬದಲಿಗೆ ಆಡಿದ ಈ ಆಟಗಾರ ಐಪಿಎಲ್​ ಇತಿಹಾಸದ ಮೊದಲ ಕಂ​ಕಶನ್​ ಸಬ್​​ಸ್ಟಿಟ್ಯೂಟ್​

Vishnu Vinod

#image_title

ಅಹಮದಾಬಾದ್​: ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಗುಜರಾತ್​ ಟೈಟನ್ಸ್​ ತಂಡ ಫೈನಲ್​ಗೇರಿದ್ದು ಭಾನುವಾರ ಇದೇ ತಾಣದಲ್ಲಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎದುರಾಗಲಿದೆ. ಏತನ್ಮಧ್ಯೆ, ಆರನೇ ಬಾರಿ ಟ್ರೋಫಿ ಗೆಲ್ಲುವ ಆಸೆಯೊಂದಿಗೆ ಕಣಕ್ಕೆ ಇಳಿದಿದ್ದ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಭಾರೀ ನಿರಾಸೆ ಎದುರಾಯಿತು. ಪಂದ್ಯದ ನಡುವೆ ಇಬ್ಬರು ಆಟಗಾರರು ಗಾಯಗೊಂಡಿರುವುದೇ ತಂಡದ ಸೋಲಿಗೆ ಕಾರಣ ಎಂದೂ ಹೇಳಲಾಗುತ್ತಿದೆ. ಇಶಾನ್​ ಕಿಶನ್​ ಹಾಗೂ ಕ್ಯಾಮೆರಾನ್​ ಗ್ರೀನ್​ ಗಾಯಗೊಂಡವರು. ಗ್ರೀನ್​ ಆಟ ಮುಂದುವರಿಸಿದರೂ, ಇಶಾನ್​ಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರ ಬದಲಿಗೆ ವಿಷ್ಣು ವಿನೋದ್​ ಅವಕಾಶ ಪಡೆದುಕೊಂಡರು. ಈ ಮೂಲಕ ವಿಷ್ಣು ಐಪಿಎಲ್​ ಇತಿಹಾಸದ ಮೊದಲ ಇನ್​ಕಷನ್​ ಬದಲಿ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡರು.

ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ಗುಜರಾತ್ ಟೈಟನ್ಸ್​​ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸಹ ಆಟಗಾರ ಕ್ರಿಸ್ ಜೋರ್ಡಾನ್ ಅವರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಅವರ ಕಣ್ಣಿಗೆ ಗಾಯವಾಗಿತ್ತು. ಹೀಗಾಗಿ ಅವರಿಗೆ ಆಟ ಮುಂದುವರಿಯಲ ಸಾಧ್ಯವಾಗಲಿಲ್ಲ. ಈ ವೇಳೆ ಟೀಮ್ ಮ್ಯಾನೇಜ್ಮೆಂಟ್​ ಆಯ್ಕೆ ಮಾಡಿದ್ದ ವಿಕೆಟ್​ಕೀಪರ್​ ಆಗಿ ಆಯ್ಕೆ ಮಾಡಿದ್ದು ವಿಷ್ಣು ವಿನೋದ್ ಅವರನ್ನು. ಆದರೆ ತಮಗೆ ಸಿಕ್ಕ ಅವಕಾಶವನ್ನು ವಿನೋದ್ ಬಳಸಿಕೊಳ್ಳಲಿಲ್ಲ. 7 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ಔಟಾದರು.

ಇದನ್ನೂ ಓದಿ : IPL 2023 : ಟ್ರೋಫಿ ಗೆದ್ದವರ ಜೇಬಿಗಿಳಿಯಲಿದೆ ಕೋಟಿ ಕೋಟಿ ರೂಪಾಯಿ! ಇಲ್ಲಿದೆ ಬಹುಮಾನದ ವಿವರ

ಅದಕ್ಕಿಂತ ಮೊದಲು ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರಾನ್​ ಗ್ರೀನ್ ಕೂಡ ಗಾಯಗೊಂಡಿದ್ದರು. 16ನೇ ಓವರ್​ನ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಹಿಡಿಯಲು ಯತ್ನಿಸಿದಾಗ ರೋಹಿತ್ ಕೈಗೆ ಸಣ್ಣ ಗಾಯವಾಗಿತ್ತು. ಹೀಗಾಗಿ ಬ್ಯಾಟಿಂಗ್ ಮಧ್ಯ ಒಂದು ಬಾರಿ ಮೈದಾನದಿಂದ ಹೊರಕ್ಕೆ ನಡೆದರು. ಬಳಿಕ ವಾಪಸ್​ ಬಂದರೂ ಸರಿಯಾಗಿ ಆಡಲು ಅವರಿಗೆ ಸಾಧ್ಯವಾಗಲಿಲ್ಲ.

ಮೂರು ವರ್ಷದ ಹಿಂದೆ ಪರಿಚಿತವಾದ ನಿಯಮ

ಐಪಿಎಲ್​​ನ 2020ರ ಆವೃತ್ತಿಯಲ್ಲಿ ಕಂಕಷನ್​ ನಿಯಮವನ್ನು ಪರಿಚಯಿಸಲಾಗಿತ್ತು. ಆದರೆ, ಅದನ್ನು ಮೊದಲು ಬಳಿಸಿದ್ದು ಮುಂಬಯಿ ಇಂಡಿಯನ್ಸ್​ ತಂಡ ಎಂಬ ಇತಿಹಾಸ ಬರೆಯಿತು. ಇಶಾನ್​ ಕಿಶನ್​ ಆಡದೇ ಉಳಿದರೆ ವಿನೋದ್ ಕಂಕಷನ್​ ಆಯ್ಕೆ ಎಂಬ ಖ್ಯಾತಿ ಪಡೆದರು. ಅಚ್ಚರಿಯೆಂದೇ ಇದೇ ಪಂದ್ಯದಲ್ಲಿ ಗುಜರಾತ್​ ತಂಡದ ಬ್ಯಾಟರ್​ ಸಾಯಿ ಸುದರ್ಶನ್ ಅವರೂ ಗಾಯದಿಂದ ಹೊರನಡೆದರು. 31 ಎಸೆತಗಳಲ್ಲಿ 42 ರನ್ ಗಳಿಸಿದ ನಂತರ ಅವರು ಪೆವಿಲಿಯನ್​​ಗೆ ನಡೆದರು.

ಗುಜರಾತ್​ ತಂಡ ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮಾ ಅವರ ಅದ್ಭುತ ಐದು ವಿಕೆಟ್​​ಗಳನ್ನು ಪಡೆಯುವ ಮೂಲಕ ಮುಂಬೈ ತಂಡದ ವಿರುದ್ಧ 62 ರನ್​ಗಳ ಗೆಲುವಿಗೆ ಕಾರಣರಾದರು.

Exit mobile version