ಮುಂಬಯಿ: ಭಾರತವು ಕಳೆದ ಬುಧವಾರ(ಆಗಸ್ಟ್ 23) ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶವಾಗಿ (Chandrayaan-3) ಮತ್ತು ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲನೇ ದೇಶ ಎಂಬ ಕೀರ್ತಿ ಪಡೆದುಕೊಂಡಿತ್ತು(India made history). ಈ ಮೂಲಕ ಭಾರತದ ಶಕ್ತಿ ಏನೆಂಬುವುದನ್ನು ಇಸ್ರೋ(ISRO) ಜಗತ್ತಿಗೆ ತಿಳಿಸಿತ್ತು. ಇದೀಗ ಇಸ್ರೋದ ಈ ಸಾಧನೆಗೆ ಮತ್ತೊಂದು ಹಿರಿಮೆ ಕೂಡ ಲಭಿಸಿದೆ. ಅಚ್ಚರಿ ಎಂದರೆ ಇಸ್ರೋ ಈ ಬಾರಿ ದಾಖಲೆ ಬರೆದದ್ದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು.(Virat Kohli and Chandrayaan-3)
ಇಸ್ರೋಗೂ ವಿರಾಟ್ ಕೊಹ್ಲಿಗೂ ಹೇಗೆ ಸಂಬಂಧ
ಈ ಸುದ್ದಿಯನ್ನು ಓದುವಾಗ ಇಸ್ರೋಗೂ ಹಾಗು ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಗೆ ಏನು ಸಂಬಂಧ? ಅಷ್ಟಕ್ಕೂ ಕೊಹ್ಲಿಯ ದಾಖಲೆ ಇಸ್ರೋ ಹೇಗೆ ಮುರಿಯಲು ಸಾಧ್ಯ? ಎಂಬ ಪ್ರಶ್ನೆ ಮೊದಲು ಹುಟ್ಟಿಕೊಳ್ಳುವುದು ಸಹಜ. ಹೌದು ವಿರಾಟ್ ಅವರ ದಾಖಲೆ ಮುರಿದದ್ದು ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಮೂಲಕ(social media post).
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟುವ ಮೂಲಕ ಹಲವು ದಾಖಲೆ ಬರೆದಿತ್ತು. ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ ಇಸ್ರೋ ತನ್ನ ಅಧಿಕೃತ ಖಾತೆಯಿಂದ ಒಂದು ಟ್ವೀಟ್ ಮಾಡಿತ್ತು. “ಚಂದ್ರಯಾನ-3 ಮಿಷನ್, ಇಂಡಿಯಾ ನಾನು ನನ್ನ ಗಮ್ಯ ಸ್ಥಾನ ತಲುಪಿದ್ದೇನೆ. ಅದರೊಂದಿಗೆ ನೀನೂ ಕೂಡ ಇಲ್ಲಿಗೆ ತಲುಪಿದ್ದೀಯ’ ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಗಿದೆ. ಅಭಿನಂದನೆಗಳು ಭಾರತ!’ ಎಂದು ಟ್ವೀಟ್ ಮಾಡಿತ್ತು. ಇದು ಅತಿ ಹೆಚ್ಚು ಲೈಕ್ಸ್ ಪಡೆದ(most-liked tweet) ಭಾರತದ ಟ್ವೀಟ್ ಎಂಬ ದಾಖಲೆ ಬರೆದಿದೆ. ಈ ಮೂಲಕ ಕೊಹ್ಲಿಯ ದಾಖಲೆ ಮುರಿದುಹೋಯಿತು. ಸದ್ಯ ಇಸ್ರೋದ ಈ ಟ್ವಿಟ್ 857.5K ಗಿಂತಲೂ ಅಧಿಕ ಲೈಕ್ಸ್ ಪಡೆದಿದೆ.
ಇದನ್ನೂ ಓದಿ Chandrayaan-3 : ಮೋದಿಯ ಶಿವಶಕ್ತಿ ಪಾಯಿಂಟ್ ನಾಮಕರಣಕ್ಕೆ ಕಾಂಗ್ರೆಸ್ ಮುಸ್ಲಿಂ ನಾಯಕನ ವಿರೋಧ
ಇಸ್ರೋದ ಟ್ವೀಟ್
ಕೊಹ್ಲಿಯ ಟ್ವೀಟ್ ದಾಖಲೆ ಎಷ್ಟಿತ್ತು?
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಪಂದ್ಯ ಗೆಲುವಿನ ಬಳಿಕ ಕೊಹ್ಲಿ ‘ಸ್ಪೆಷಲ್ ಗೆಲುವು. ದಾಖಲೆಯ ಪ್ರಮಾಣದಲ್ಲಿ ನಮ್ಮ ತಂಡವನ್ನು ಬೆಂಬಲಿಸಿ ಎಲ್ಲ ಅಭಿಮಾನಿಗಳಿಗೆ ಥ್ಯಾಂಕ್ ಯು’ ಎಂದು ಕೆಲ ಫೋಟೊಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದರು. ಇದು 796.9K ಲೈಕ್ಸ್ ಪಡೆದು ಈವರೆಗಿನ ಅತ್ಯಧಿಕ ಲೈಕ್ಸ್ ಪಡೆದ ದಾಖಲೆಯಾಗಿತ್ತು. ಆದರೆ ಕೊಹ್ಲಿಯ ಈ ದಾಖಲೆಯನ್ನು ಇಸ್ರೋ ಚಂದ್ರಯಾನದ ಮೂಲಕ ಹಿಂದಿಕ್ಕಿದೆ. ಶೀಘ್ರದಲ್ಲಿಯೇ 1 ಮಿಲಿಯನ್ ಗಡಿ ಮುಟ್ಟುವ ಸಾಧ್ಯತೆ ಇದೆ.
ಕೊಹ್ಲಿ ಟ್ವೀಟ್
ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಬಾರಿಸಿದ್ದರು. ಸದ್ಯ ಕೊಹ್ಲಿ ನಾಳೆಯಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ನಲ್ಲಿ ಆಡಲು ಸಿದ್ಧತೆ ನಡೆಸುತ್ತಿದ್ದಾರೆ. ಏಷ್ಯಾಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯ ಪಾಕ್ ವಿರುದ್ಧ ಸೆಪ್ಟೆಂಬರ್ 2ಕ್ಕೆ ಆಡಲಿದೆ.