Site icon Vistara News

Babar Azam : ಮಾಜಿಗಳಿಗೆಲ್ಲ ಒಂದೇ ಮಾತಿನಿಂದ ತಿರುಗೇಟು ಕೊಟ್ಟ ಬಾಬರ್​

Babar Azam

ನವದೆಹಲಿ: ಟಿವಿಯಲ್ಲಿ ಕುಳಿತು ನಾಯಕತ್ವದ ಒತ್ತಡವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸಲಹೆ ನೀಡುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಗೆ ನಾಯಕ ಬಾಬರ್ ಅಜಂ (Babar Azam) ತಿರುಗೇಟು ಕೊಟ್ಟಿದ್ದಾರೆ. ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ ಐಸಿಸಿ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡುವ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದ್ದಾರೆ. ಪುಕ್ಕಟೆ ಸಲಹೆ ಕೊಡುವವರ ಸಂಖ್ಯೆ ಹೆಚ್ಚಾಗಿದೆ ಎಂಬುದಾಗಿ ಅವರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಮೆನ್ ಇನ್ ಗ್ರೀನ್ ತಂಡವು ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದಿತ್ತು. ನಂತರ ಸತತ ನಾಲ್ಕು ಪಂದ್ಯಗಳನ್ನು ಸೋತಿದೆ. ತನ್ನ ಹಿಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿತ್ತು. ಹೀಗಾಗಿ ಸೆಮೀಸ್ ಅವಕಾಶಗಳು ಸೃಷ್ಟಿಯಾಗಿದ್ದವು. ಅದೇ ರೀತಿ ಲಂಕಾ ತಂಡವನ್ನು ನ್ಯೂಜಿಲ್ಯಾಂಡ್ ಭಾರೀ ಅಂತರದಿಂದ ಸೋಲಿಸುವ ಮೂಲಕ ಈ ಅವಕಾಶಗಳು ಇನ್ನಷ್ಟು ನಷ್ಟಗೊಂಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಅಜಮ್​ ಸಲಹೆ ಕೊಡುವುದು ಸುಲಭ ಎಂದು ಹೇಳಿದ್ದಾರೆ.

ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಭಾರಿ ಅಂತರದಿಂದ ಸೋಲಿಸಬೇಕಾಗಿದೆ. ಶನಿವಾರ ಕೋಲ್ಕತಾದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದರೆ, ಇಂಗ್ಲೆಂಡ್ ಅನ್ನು 287 ರನ್ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಸೋಲಿಸಬೇಕಾಗುತ್ತದೆ. ಮೊದಲು ಬೌಲಿಂಗ್ ಮಾಡಿದರೆ ಪಾಕಿಸ್ತಾನ 3.4 ಓವರ್​ಗಳಲ್ಲಿ 150 ಅಥವಾ ಅದಕ್ಕಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ, 5.4 ಓವರ್​ಗಳಲ್ಲಿ 250 ರನ್​ ಮಾಡಬೇಕಾಗುತ್ತದೆ.

ಬಾಬರ್ ಟೀಕಿಸಿದ್ದ ಮಾಜಿಗಳು

ಪಾಕಿಸ್ತಾನದ ಮಾಜಿ ನಾಯಕರಾದ ವಾಸಿಮ್ ಅಕ್ರಮ್, ಮೊಯಿನ್ ಖಾನ್, ಶೋಯೆಬ್ ಮಲಿಕ್ ಮತ್ತು ಮಿಸ್ಬಾ-ಉಲ್-ಹಕ್ ಅವರು ಬಾಬರ್ ನಾಯಕತ್ವವನ್ನು ಟೀಕಿಸಿದ್ದಾರೆ. ಬಾಬರ್ ಅಡಿಯಲ್ಲಿ, ಪಾಕಿಸ್ತಾನವು ಕೆಟ್ಟ ಸಂಸ್ಕತಿಯನ್ನು ಹೊಂದಿದೆ ಎಂದು ಮಲಿಕ್ ಹೇಳಿದ್ದರು. ಬಾಬರ್ ಒಬ್ಬ ಬ್ಯಾಟ್ಸ್ಮನ್ ಆಗಿ ರಾಜ, ಆದರೆ ನಾಯಕನಾಗಿ ಅಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಟೀಕೆಗೆ ಪ್ರತಿಕ್ರಿಯಿಸಿದ ಬಾಬರ್, ಕಳೆದ ಕೆಲವು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿರುವುದರಿಂದ ನಾಯಕನಾಗಿ ಒತ್ತಡವನ್ನು ಎಂದಿಗೂ ಅನುಭವಿಸಿಲ್ಲ ಎಂದು ಹೇಳಿದರು. ಜನರಿಂದ ಸಲಹೆ ಪಡೆಯಲು ತಾನು ಮುಕ್ತನಾಗಿದ್ದೇನೆ. ಎಲ್ಲರೂ ನನಗೆ ನೇರ ಸಂದೇಶ ಕಳುಹಿಸಬಹುದು ಎಂದು ಪಾಕಿಸ್ತಾನ ನಾಯಕ ಹೇಳಿದ್ದಾರೆ.

ಒತ್ತಡವಿಲ್ಲ

“ನಾನು ಕಳೆದ ಮೂರು ವರ್ಷಗಳಿಂದ ನನ್ನ ತಂಡವನ್ನು ಮುನ್ನಡೆಸುತ್ತಿದ್ದೇನೆ ಮತ್ತು ನಾನು ಎಂದಿಗೂ ಈ ರೀತಿ ಭಾವಿಸಿಲ್ಲ. ವಿಶ್ವಕಪ್​ನಲ್ಲಿ ನಾನು ನೀಡಬೇಕಾದ ರೀತಿಯಲ್ಲಿ ನಾನು ಪ್ರದರ್ಶನ ನೀಡದ ಕಾರಣ, ನಾನು ಒತ್ತಡದಲ್ಲಿದ್ದೇನೆ ಎಂದು ಜನರು ಹೇಳುತ್ತಿದ್ದಾರೆ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ನಾನು ಕಳೆದ 2.5 ಅಥವಾ 3 ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ”ಎಂದು ಬಾಬರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನನ್ನ ಮೊಬೈಲ್​ಗೆ ಸಲಹೆ ಕಳುಹಿಸಿ

“ನೀವು ಯಾವ ವಿಷಯವನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನ ಹೊಂದಿರುತ್ತಾರೆ. ತಮ್ಮದೇ ಆದ ಆಲೋಚನಾ ವಿಧಾನವನ್ನು ಹೊಂದಿರುತ್ತಾರೆ.. ಪ್ರತಿಯೊಬ್ಬರೂ ವಿಭಿನ್ನವಾಗಿ ಏನನ್ನಾದರೂ ಹೇಳುತ್ತಾರೆ. ಅವನು ಈ ರೀತಿ ಇರಬೇಕು, ಅಥವಾ ಹಾಗೆ ಇರಬೇಕು ಎಂದು ಹೇಳಲು ಬಯಸುತ್ತಾರೆ. ಯಾರಾದರೂ ನನಗೆ ಸಲಹೆ ನೀಡಬೇಕಾದರೆ, ಪ್ರತಿಯೊಬ್ಬರ ಬಳಿಯೂ ನನ್ನ ಮೊಬೈಲ್​ ಸಂಖ್ಯೆ ಇದೆ. ಟಿವಿಯಲ್ಲಿ ಸಲಹೆ ನೀಡುವುದು ಸುಲಭ. ನೀವು ನನಗೆ ಕೆಲವು ಸಲಹೆ ನೀಡಲು ಬಯಸಿದರೆ, ನೀವು ನನಗೆ ಸಂದೇಶ ಕಳುಹಿಸಬಹುದು. ಎಂದು ಬಾಬರ್ ಹೇಳಿದ್ದಾರೆ.

ನಾನು ಯಾವುದೇ ಒತ್ತಡದಲ್ಲಿದ್ದೆ ಅಥವಾ ಯಾವುದೇ ವ್ಯತ್ಯಾಸವನ್ನು ಅನುಭವಿಸಲಿಲ್ಲ ಎಂದು ನಾನು ಭಾವಿಸುವುದಿಲ್ಲ. ಫೀಲ್ಡಿಂಗ್ ಸಮಯದಲ್ಲಿ ನಾನು ಮೈದಾನದಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಬ್ಯಾಟಿಂಗ್ ಮಾಡುವಾಗ, ನಾನು ಹೇಗೆ ರನ್ ಗಳಿಸಬೇಕು ಮತ್ತು ತಂಡವನ್ನು ಗೆಲ್ಲಿಸಬೇಕು ಎಂಬುದರ ಬಗ್ಗೆ ಯೋಚಿಸುತ್ತೇನೆ ಎಂದು ಅವರು ಹೇಳಿದರು.

Exit mobile version