ಬೆಂಗಳೂರು: ಇಲ್ಲಿ ನಡೆದ ಮಹಿಳಾ ಐಟಿಎಫ್ ಟೆನಿಸ್(ITF Women’s Open) ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ(Ankita Raina) ಚೆಕ್ ಗಣರಾಜ್ಯದ ಫ್ರುಹ್ವಿರ್ಟೊವಾ(Brenda Fruhvirtova) ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದಾರೆ.
ಭಾನುವಾರ(ಮಾರ್ಚ್ 12) ಬೆಂಗಳೂರಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಕೇವಲ 15 ವರ್ಷದ ಚೆಕ್ ಗಣರಾಜ್ಯದ ಫ್ರುಹ್ವಿರ್ಟೊವಾ ವಿರುದ್ಧ ನಾಲ್ಕನೇ ಶ್ರೇಯಾಂಕದ ಅಂಕಿತಾ ರೈನಾ 0-6, 6-4, 6-0 ಸೆಟ್‌ಗಳಿಂದ ಪರಾಭವಗೊಂಡರು.
ಇದನ್ನೂ ಓದಿ Sania Mirza: ಸಾನಿಯಾ ಮಿರ್ಜಾ ಭಾರತದ ಚಾಂಪಿಯನ್; ಪ್ರಧಾನಿ ಮೋದಿ ಪ್ರಶಂಸೆ
ಅಂಕಿತಾ ರೈನಾ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇನ್ನೊಬ್ಬ ಭಾರತೀಯ ಆಟಗಾರ್ತಿ ಋತುಜಾ ಭೋಸಲೆಯನ್ನು 6-1, 6-1ರಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ 163ನೇ ಶ್ರೇಯಾಂಕಿತ ಫ್ರುಹ್ವಿರ್ಟೊವಾ ಅವರ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು.