Site icon Vistara News

Shreyas Iyer : ವಿಶ್ವ ಕಪ್​ ತಂಡ ಆಯ್ಕೆಯ ಬಗ್ಗೆ ಗೌತಮ್​ ಗಂಭೀರ್​ ಗುಡುಗು; ಅವರ ಆಕ್ಷೇಪವೇನು?

Shreyas Iyer

ಕೊಲಂಬೊ: ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಏಷ್ಯಾಕಪ್ ಪ್ರಶಸ್ತಿ (Asia Cup) ಗೆಲ್ಲುವ ಹಾದಿಯಲ್ಲಿ ಭಾರತ ತಂಡದ ಯೋಜನೆಗಳು ಸಮಪರ್ಕವಾಗಿ ಕೆಲಸ ಮಾಡಿವೆ. ಏತನ್ಮಧ್ಯೆ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಅಭಿಯಾನದ ಪ್ರಾರಂಭಕ್ಕೆ ಮೂರು ವಾರಗಳಿಗಿಂತ ಕಡಿಮೆ ಇರುವಾಗ ತಂಡವನ್ನು ಕಾಡುತ್ತಿರುವ ಗಾಯದ ಆತಂಕಗಳ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್​ಗೆ ಚಿಂತೆ ಕಡಿಮೆಯಾಗಿಲ್ಲ. ಹೆಡ್​ ಕೋಚ್​ ರಾಹುಲ್ ದ್ರಾವಿಡ್ (Rahul Dravid) ಗಾಯದ ಸಮಸ್ಯೆ ಕುರಿತು ಆತಂಕ ವ್ಯಕ್ತಪಡಿಸಿರುವ ಜತೆಗೆ ನಾಯಕ ರೋಹಿತ್ ಶರ್ಮಾ (Rohit Sharma) ಅವರು ತಮ್ಮ ತಂಡದ ಸದಸ್ಯರಾದ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಅಕ್ಷರ್​ ಪಟೇಲ್ ಅವರ ಗಾಯದ ಕುರಿತು ಕೆಲವು ಅಪ್​ಡೇಟ್​​ಗಳನ್ನು ನೀಡಿದ್ದರು. ಈ ವಿಚಾರವಾಗಿ ಮಾತನಾಡಿರುವ ಭಾರತದ ಬ್ಯಾಟಿಂಗ್ ದಂತಕತೆ ಗೌತಮ್ ಗಂಭೀರ್, ಶ್ರೇಯಸ್​ ಅಯ್ಯರ್ ವಿಶ್ವ ಕಪ್​ ತಂಡದಲ್ಲಿ ಸ್ಥಾಣ ಪಡೆದುಕೊಂಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಇದು ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂಗತಿ ಎಂಬುದಾಗಿಯೂ ನುಡಿದಿದ್ದಾರೆ.

ಬೆನ್ನುನೋವಿನಿಂದ ಬಳಲುತ್ತಿದ್ದ ಭಾರತದ 4ನೇ ಕ್ರಮಾಂಕದ ಆಟಗಾರ ಶ್ರೇಯಸ್​ ಅಯ್ಯರ್​ ಕಳೆದ ಮಾರ್ಚ್​ ಬಳಿಕ ತಂಡದಿಂದ ಹೊರಗುಳಿದಿದ್ದಾರೆ. ನಂತರ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಇಡೀ ಐಪಿಎಲ್ ಋತುವನ್ನು ತಪ್ಪಿಸಿಕೊಂಡರು. ಡಬ್ಲ್ಯುಟಿಸಿ ಫೈನಲ್ ಮತ್ತು ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಸ್ಥಾನ ಪಡೆದಿರಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಅಯ್ಯರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಂಡುಕೊಂಡರು. ನಂತರ ಏಷ್ಯಾ ಕಪ್ ನಲ್ಲಿ ಸ್ಥಾನ ಪಡೆದುಕೊಂಡರು. ವಿಶ್ವ ಕಪ್ ಮೊದಲು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಏಷ್ಯಾ ಕಪ್​ ಅವರಿಗೆ ಉತ್ತಮ ಅವಕಾಶವಾಗಿತ್ತು. ಈ ನಡುವೆ ಅವರು ಗಾಯಗೊಂಡಿದ್ದರು. ಅಲ್ಲಿಂದ ಅವರು ಬೆಂಚು ಕಾಯ್ದಿದ್ದರು.

ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯಕ್ಕೆ ಅಯ್ಯರ್ ಅವರನ್ನು ಬೆಂಚ್ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್, ಭಾನುವಾರ ಪಂದ್ಯದ ಆರಂಭದಲ್ಲಿ ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂಭಾಷಣೆಯಲ್ಲಿ, ಏಷ್ಯಾ ಕಪ್​ನಲ್ಲಿ ಪ್ರದರ್ಶನ ನೀಡದಿರುವುದರಿಂದ ಹಾಗೂ ಭಾರತವು ಅವರ ಫಾರ್ಮ್ ಬಗ್ಗೆ ಖಚಿತವಿಲ್ಲದ ಕಾರಣ ಭಾರತದ ಅವರನ್ನು ವಿಶ್ವಕಪ್ ತಂಡದಲ್ಲಿ ಬದಲಾಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : Rohit Sharma : ಏರ್​ಪೋರ್ಟ್​ಗೆ ಹೊರಡುವಾಗ ಪಾಸ್​​​ಪೋರ್ಟ್​​ ಮರೆತು ಬಂದ ರೋಹಿತ್​! ಎಲ್ಲರಿಗೂ ಪೀಕಲಾಟ

ಇದು ಕಳವಳಕಾರಿ ಸಂಗತಿ. ಅಯ್ಯರ್​ ದೀರ್ಘಕಾಲ ತಂಡದಿಂದ ಹೊರಗುಳಿದಿದ್ದಾರೆ. ನಂತರ ಏಷ್ಯಾ ಕಪ್​ಗೆ ಮರಳಿದ್ದಾರೆ. ಅಲ್ಲಿ ಒಂದು ಪಂದ್ಯವನ್ನು ಆಡಿದ್ದಾರೆ. ಇಷ್ಟೆಲ್ಲ ಆದ ಬಳಿಕವೂ ಮ್ಯಾನೇಜ್ಮೆಂಟ್ ಅವರನ್ನು ಇಷ್ಟು ವಿಶ್ವ ಕಪ್​ಗೆ ಕರೆದೊಯ್ಯುತ್ತದೆ ಎಂದು ನಾನು ಭಾವಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಅಯ್ಯರ್ ವಿಶ್ವಕಪ್ ತಂಡದ ಭಾಗವಾಗಿರುವುದಿಲ್ಲ ಮತ್ತು ಅವರ ಬದಲಿಗೆ ಯಾರಾದರೂ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ಫಿಟ್ ಆಟಗಾರರೊಂದಿಗೆ ವಿಶ್ವಕಪ್ ಗೆ ಹೋಗಬೇಕು. ಕಾರ್ಯಕ್ಷಮತೆ ಪ್ರತ್ಯೇಕ ವಿಷಯ. ಆಟಗಾರ ಸ್ನಾಯು ಸೆಳೆತ ಅಥವಾ ಇನ್ನಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಬದಲಿ ಆಟಗಾರನನ್ನು ಹುಡುಕುವುದ ಎಲ್ಲಿಂದ. ಆದ್ದರಿಂದ ಅಯ್ಯರ್ ಫಿಟ್ ಆಗದಿದ್ದರೆ ವಿಶ್ವಕಪ್​ನ ಭಾಗವಾಗುವುದು ತುಂಬಾ ಕಷ್ಟ. ಜತೆಗೆ ಪ್ರಸ್ತುತ ಅವರ ಫಾರ್ಮ್ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ವಿಶ್ವ ಕಪ್​ ತಂಡದಲ್ಲಿರುವುದು ದುರದೃಷ್ಟಕರ ಎಂದು ಹೇಳಿದರು.

ಎನ್​​ಸಿಎಯನ್ನು ಪ್ರಶ್ನಿಸಿ

ಶ್ರೇಯಸ್​ ಅಯ್ಯರ್ ಪದೇ ಪದೇ ಬೆನ್ನುನೋವಿನಿಂದ ಬಳಲುತ್ತಿರುವ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿರುವ ರಾಷ್ಟ್ರೀಐ ಕ್ರಿಕೆಟ್ ಅಕಾಡೆಮಿಯನ್ನು ಪ್ರಶ್ನಿಸಬೇಕು ಎಂದು ಗಂಭೀರ್ ಹೇಳಿದರು. ಪ್ರಶ್ನೆಗಳನ್ನು ಎತ್ತಬೇಕಾದರೆ ಎನ್​ಸಿಎ ವಿರುದ್ಧ ಎತ್ತಿ. ಏಕೆಂದರೆ ಅವರು ಇಷ್ಟು ತಿಂಗಳು ಅಲ್ಲಿಯೇ ಇದ್ದರು ಮತ್ತು ಅಲ್ಲಿಂದ ಫಿಟ್​ ಎಂದು ಅನುಮತಿ ಪಡೆದರು. ಅವರನ್ನು ಫಿಟ್​ ಆಗುವ ಮೊದಲೇ ಕಳುಹಿಸಿರಬಹುದು. ಈ ವಿಷಯ ಯಾರಿಗೆ ಗೊತ್ತಿದೆ ಎಂದು ಹೇಳಿದರು.

ಇವೆಲ್ಲದರ ನಡುವೆ ಶ್ರೇಯಸ್​ ಅಯ್ಯರ್ ಫಿಟ್ ಅಗುತ್ತಿದ್ದಾರೆ ಎಂಬುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಲಂಕಾ ವಿರುದ್ದದ ಗೆಲುವಿನ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. “ಶ್ರೇಯಸ್ ಈ ಪಂದ್ಯಕ್ಕೆ ಲಭ್ಯವಿರಲಿಲ್ಲ ಏಕೆಂದರೆ ಅವರಿಗೆ ಕೆಲವು ಮಾನದಂಡಗಳನ್ನು ನೀಡಲಾಗಿತ್ತು.. ಇಂದು, ಅವರು ಅದರಲ್ಲಿ ಹೆಚ್ಚಿನದನ್ನು ಪೂರ್ಣಗೊಳಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಈಗ ಶೇಕಡಾ 99 ರಷ್ಟು ಚೆನ್ನಾಗಿದ್ದಾರೆ. ಅವರು ದೀರ್ಘಕಾಲ ಬ್ಯಾಟಿಂಗ್ ಮಾಡಿದ್ದಾರೆ. ಫೀಲ್ಡಿಂಗ್ ಮಾಡಿದರು ಮತ್ತು ನಾವು ಮೈದಾನಕ್ಕೆ ಬರುವ ಮೊದಲೇ ಅವರು ಅಭ್ಯಾಸ ಮಾಡುತ್ತಿದ್ದರು. ಹೀಗಾಗಿ ಅಯ್ಯರ್​ ಸಮಸ್ಯೆ ಚಿಂತೆಗೆ ಮೂಲವಲ್ಲ ಎಂದು ಹೇಳಿದ್ದರು.

Exit mobile version