ಕ್ರಿಕೆಟ್
Rohit Sharma : ಏರ್ಪೋರ್ಟ್ಗೆ ಹೊರಡುವಾಗ ಪಾಸ್ಪೋರ್ಟ್ ಮರೆತು ಬಂದ ರೋಹಿತ್! ಎಲ್ಲರಿಗೂ ಪೀಕಲಾಟ
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ರೋಹಿತ್ ಶರ್ಮಾ (Rohit Sharma) ಅವರು ಬಸ್ ಒಳಗೆ ಇರುವಾಗ ಹೋಟೆಲ್ ಸಿಬ್ಬಂದಿ ರೂಮ್ನಿಂದ ಪಾಸ್ಪೋರ್ಟ್ ತಂದುಕೊಡುತ್ತಿರುವ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ.
ಕೊಲೊಂಬೊ: ಕೆಲವು ವರ್ಷಗಳ ಹಿಂದೆ ಯೂಟ್ಯೂಬ್ ಶೋ ಬ್ರೇಕ್ಪಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಇರುವ ಮರೆವಿನ ಸಮಸ್ಯೆ ಬಗ್ಗೆ ಹೇಳಿದ್ದರು. ಏರ್ಪೋರ್ಟ್ ಸೇರಿದಂತೆ ನಾನಾ ಕಡೆ ಅವರು ವಸ್ತುಗಳನ್ನು ಮರೆತು ಹೋಗುತ್ತಿದ್ದರು. ಅದರಲ್ಲಿ ಬೆಲೆ ಬಾಳುವ ವಸ್ತುಗಳೂ ಸೇರಿಕೊಂಡಿವೆ ಎಂಬುದಾಗಿ ಹೇಳಿದ್ದರು. ಅದಕ್ಕೆ ಈ ಹಿಂದೆ ಹಲವಾರು ಉದಾಹರಣೆಗಳು ಸಿಕ್ಕಿದೆ. ಇದೀಗ ಸಿಕ್ಕಿರುವ ತಾಜಾ ಪ್ರಸಂಗವೊಂದರಲ್ಲಿ ಏರ್ಪೋರ್ಟ್ಗೆ ಹೋಗಲು ಹೊರಟಿದ್ದ ರೋಹಿತ್ ಶರ್ಮಾ ಪಾಸ್ಪೋರ್ಟ್ ಮರೆತು ಬಂದಿದ್ದು ಸುದ್ದಿಯಾಗಿದೆ.
Virat Kohli in 2017 – I haven't seen anyone forget things like Rohit Sharma does. He even forgets his iPad, passport.
— Mufaddal Vohra (@mufaddal_vohra) September 17, 2023
Tonight – Rohit forgot his passport, and a support staff member gave it back to him. (Ankan Kar). pic.twitter.com/3nFsiJwCP4
“ರೋಹಿತ್ ಶರ್ಮಾ ಅವರಂತೆ ಮರೆಯುವುದನ್ನು ನಾನು ಇದುವರೆಗೆ ಯಾರನ್ನೂ ನೋಡಿಲ್ಲ. ಅವರು ತಮ್ಮ ಐಪ್ಯಾಡ್, ಪಾಸ್ಪೋರ್ಟ್ ಅನ್ನು ಸಹ ಮರೆತುಬಿಡುತ್ತಾರೆ ಎಂದು ಕೊಹ್ಲಿ ಎಪಿಸೋಡ್ನಲ್ಲಿ ಹೇಳಿದ್ದರು. ಅದಕ್ಕೆ ಈಗ ಸಾಕ್ಷಿ ಸಿಕ್ಕಿದ್ದು ಏಷ್ಯಾ ಕಪ್ ಗೆಲುವಿನ ಬಳಿಕ ಮುಂಬಯಿಗೆ ಹೊರಟಿದ್ದ ರೋಹಿತ್ ಪಾಸ್ಪೋರ್ಟ್ ಹೋಟೆಲ್ನಲ್ಲಿಯೇ ಬಿಟ್ಟು ಬಸ್ ಹತ್ತಿ ಕುಳಿತಿದ್ದರು. ಬಳಿಕ ಹೋಟೆಲ್ ಸಿಬ್ಬಂದಿ ಬಸ್ ತನಕ ಬಂದು ಪಾಸ್ಪೋರ್ಟ್ ಕೊಟ್ಟು ಹೋಗಿದ್ದರು.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಶರ್ಮಾ ಬಸ್ ಒಳಗೆ ಇರುವುದನ್ನು ಕಾಣಬಹುದು, ಜಸ್ಪ್ರೀತ್ ಬುಮ್ರಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಹಿಂದೆ ಕುಳಿತಿರುವುದು ಕಂಡುಬಂದಿದೆ. ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರ ಹಿಂದೆ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಸದಸ್ಯರೊಬ್ಬರು ಶರ್ಮಾ ಅವರಿಗೆ ಪಾಸ್ಪೋರ್ಟ್ ಕೊಟ್ಟಿದ್ದು ವಿಡಿಯೊದಲ್ಲಿ ದಾಖಲಾಗಿದೆ.
ಅನೇಕ ಕಾಮೆಂಟ್ಗಳು
ಈ ವೀಡಿಯೊಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಅನೇಕ ಕಾಮೆಂಟ್ಗಳು ಬಂದಿವೆ. ಅವರಲ್ಲಿ ಕೆಲವರು ಶರ್ಮಾ ಪಾಸ್ಪೋರ್ಟ್ ಏಕೆ ಮರೆತಿರಬಹುದು ಎಂಬುದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ.
ಅವರು ಈಗ ವಿಶ್ವಕಪ್ ಗೆಲ್ಲುವ ಬಗ್ಗೆ ಯೋಚಿಸುತ್ತಿದ್ದಾರೆ. ಚಿಂತಿಸಬೇಡಿ ಕ್ಯಾಪ್ಟನ್. ಅದು ನಡೆಯುವುದು ಭಾರತದಲ್ಲೇ ಎಂದು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
“ಇದನ್ನು ಈ ರೀತಿ ಗ್ರಹಿಸೋಣ. ರೋಹಿತ್ ಅವರ ಮರೆಗುಳಿತನದಿಂದಾಗಿ ಅವರು ಮೈದಾನದಲ್ಲಿ ಶಾಂತವಾಗಿರುತ್ತಾರೆ. ಮೈದಾನದಲ್ಲಿ ಗಮನ ಕೇಂದ್ರೀಕರಿಸಲು ಅವರಿಗೆ ನೆರವಾಗಿದೆ.ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಭಾನುವಾರ ನಡೆದ ಏಷ್ಯಾಕಪ್ ವಿಜೇತ ತಂಡದ ಭಾಗವಾಗಿದ್ದ ತಂಡದ ಹೆಚ್ಚಿನ ಸದಸ್ಯರು ಸೋಮವಾರ ಮುಂಜಾನೆ ಮುಂಬಯಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ : Mohammed Siraj : ಪಂದ್ಯ ಶ್ರೇಷ್ಠ ಪ್ರಶಸ್ತಿಯ ಚೆಕ್ ದಾನ ಮಾಡಿದ ಸಿರಾಜ್ಗೆ ನೆಟ್ಟಿಗರ ಮೆಚ್ಚುಗೆ
ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 17) ನಡೆದ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡವು ಮೊಹಮ್ಮದ್ ಸಿರಾಜ್ ಅವರ ಅಸಾಧಾರಣ ಪ್ರದರ್ಶನದಿಂದ ಫೈನಲ್ನಲ್ಲಿ ಗೆಲುವು ಕಂಡಿತು ಸಿರಾಜ್ ಏಳು ಓವರ್ಗಳಲ್ಲಿ 21 ರನ್ಗಳಿಗೆ 6 ವಿಕೆಟ್ಗಳನ್ನು ಪಡೆದಿದ್ದರು.
ಸಿರಾಜ್ ಅವರ ಅಸಾಧಾರಣ ಪ್ರಯತ್ನದಿಂದಾಗಿ ಶ್ರೀಲಂಕಾ 15.2 ಓವರ್ಗಳಲ್ಲಿ ಕೇವಲ 50 ರನ್ಗಳಲ್ಲಿ ಆಲೌಟ್ ಆಯಿತು. ಭಾರತ 6.1 ಓವರ್ಗಳಲ್ಲಿ 51 ರನ್ಗಳಲ್ಲಿ ಆಲೌಟ್ ಆಯಿತು. ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕಾಗಿ ಹಾಲಿ ಚಾಂಪಿಯನ್ಸ್ ತಂಡವನ್ನು ಔಟ್ ಮಾಡುವ ಮೂಲಕ, ಇನ್ನಿಂಗ್ಸ್ ನಲ್ಲಿ 263 ಎಸೆತಗಳು ಬಾಕಿ ಇರುವಾಗ ಭಾರತವು ಜಯ ಸಾಧಿಸಿತು. ಎಸೆತಗಳ ಸಂಖ್ಯೆಯ ದೃಷ್ಟಿಯಿಂದ ತನ್ನ ಅತಿದೊಡ್ಡ ಏಕದಿನ ವಿಜಯವನ್ನು ಸಾಧಿಸಿತು.
ಕರ್ನಾಟಕ
VISTARA TOP 10 NEWS: ಬಿಜೆಪಿ-ಜೆಡಿಎಸ್ ಮೈತ್ರಿ ಸೆಟ್ಟಾಯ್ತು, ಸೆ. 26ರವರೆಗೆ ನೀರು ಬಿಡೋದೂ ಫಿಕ್ಸಾಯ್ತು!
VISTARA TOP 10 NEWS: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಹೊಸ ರಾಜಕೀಯ ಶಕೆ ಆರಂಭವಾಗಿದೆ. ಕಾವೇರಿ ನೀರು ಬಿಡುಗಡೆ ಮುಂದುವರಿಸಲು ತೀರ್ಮಾನವಾಗಿದೆ. ಹೀಗೆ ದಿನದ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್ 10 ನ್ಯೂಸ್
1.ಬಿಜೆಪಿ-ಜೆಡಿಎಸ್ ಮೈತ್ರಿ ಘೋಷಣೆ; ಕಾಂಗ್ರೆಸ್ ಮಣಿಸಲು ಅಮಿತ್ ಶಾ-ಕುಮಾರಸ್ವಾಮಿ ಪಣ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೊನೆಗೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ (BJP-JDS Alliance) ಅಧಿಕೃತ ಮುದ್ರೆ ಬಿದ್ದಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎರಡೂ ಪಕ್ಷಗಳ ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!
2. ಸೆ.26ರವರೆಗೆ ಕಾವೇರಿ ನೀರು ಬಿಡುಗಡೆ ಫಿಕ್ಸ್; ಬಳಿಕ ಬಿಡುವುದಿಲ್ಲ ಎಂದು ಅಧಿವೇಶನ ಕರೆದು ನಿರ್ಣಯ?
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಕಾವೇರಿ ಬಿಕ್ಕಟ್ಟು ಚರ್ಚೆಯಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸೆ. 26ರವರೆಗೆ ನೀರು ಬಿಡುಗಡೆ ಮಾಡುವುದು, ಮುಂದೆ ಮತ್ತೊಮ್ಮೆ ಆದೇಶ ನೀಡದಂತೆ ಅಧಿವೇಶನ ಕರೆದು ನೀರು ಬಿಡುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳುವುದೆಂದು ಚರ್ಚೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಕಾವೇರಿ ಹೋರಾಟಕ್ಕೆ ಧುಮುಕಿದ ಚುಂಚಶ್ರೀ, ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ
3. ಏಷ್ಯನ್ ಗೇಮ್ಸ್‌ಗೆ ಅರುಣಾಚಲದ ಅಥ್ಲಿಟ್‌ಗೆ ಚೀನಾ ಪ್ರವೇಶ ನಿರಾಕರಣೆ: ಏನಿದು ಹೊಸ ವಿವಾದ?
ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಗಡಿ ರಾಜಕೀಯ ಮುನ್ನೆಲೆಗೆ ಬಂದಿದೆ. ಅರುಣಾಚಲ ಪ್ರದೇಶದ ಮೂವರು ವುಶ್ ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಏನಿದು ವಿವಾದ? ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಶಕ್ತಿ, ಇದು ಐತಿಹಾಸಿಕ; ಮೋದಿ ಸಂತಸ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕಕ್ಕೆ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಆಗ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಂತಸ ಹಂಚಿಕೊಂಡರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
“ಸನಾತನ ಧರ್ಮವು ಕೊರೊನಾ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ತಮಿಳುನಾಡು ಸರ್ಕಾರ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಉಗ್ರ ಎಂದು ಜರಿದ ಬಿಜೆಪಿ ಎಂಪಿ, ಕ್ರಮಕ್ಕೆ ಪ್ರತಿಪಕ್ಷಗಳ ಆಗ್ರಹ
ಬಿಎಸ್‌ಪಿಯ ಸಂಸದ ಡ್ಯಾನಿಶ್ ಅಲಿ (BSP MP Danish Ali) ಅವರಿಗೆ ಭಾರತೀಯ ಜನತಾ ಪಾರ್ಟಿಯ ಸಂಸದ ರಮೇಶ್ ಬಿಧುರಿ (BJP MP Ramesh Bidhuri) ಅವರು ಸಂಸತ್ತಿನಲ್ಲಿ ‘ಉಗ್ರ’ (Terrorist) ಎಂದು ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಮೊದಲ ಏಕದಿನ ಶುಭಾರಂಭ: ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ನಂ. 1 ಪಟ್ಟಕ್ಕೇರಿದ ಭಾರತ
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಬ್ಯಾಟಿಂಗ್‌ನಲ್ಲಿ ಶುಭಮನ್ ಗಿಲ್, ಕೆ.ಎಲ್ ರಾಹುಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಸಖತ್ತಾಗಿ ಮಿಂಚಿದರು. ಈ ಗೆಲುವಿನಿಂದ ಭಾರತ ಏಕದಿನ ಕ್ರಿಕೆಟ್‌ನಲ್ಲೂ ನಂಬರ್ ಒನ್ ಸ್ಥಾನಕ್ಕೆ ಬಂತು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಏಕದಿನ ವಿಶ್ವಕಪ್ ಬಹುಮಾನ ಎಷ್ಟು ಗೊತ್ತೆ? ಇಲ್ಲಿದೆ ಎಲ್ಲ ವಿವರ
8 ಯೋಗಿ ರಾಜ್ಯದಲ್ಲಿ ಎನ್‌ಕೌಂಟರ್‌ಗೆ ಮತ್ತೊಬ್ಬ ಪಾತಕಿ ಬಲಿ, ದುಷ್ಕರ್ಮಿಗಳಿಗೆ ನಡುಕ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರಿಮಿನಲ್‌ಗಳ ಎನ್‌ಕೌಂಟರ್ ಜಾಸ್ತಿಯಾಗಿವೆ. ಇದೀಗ ಮಹಿಳಾ ಪೊಲೀಸ್ ಪೇದೆಯೊಬ್ಬರ ಹತ್ಯೆಯ ಪ್ರಮುಖ ಆರೋಪಿಯಾದ ಅನೀಶ್ ಖಾನ್ ಎಂಬುವನನ್ನು ಎನ್‌ಕೌಂಟರ್ ಮಾಡಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮುಂದಿನ ಆಸ್ಕರ್ ರೇಸ್‌ನಲ್ಲಿ ಯಾವೆಲ್ಲ ಚಿತ್ರಗಳು ಇರಲಿವೆ?
2024ರ ಆಸ್ಕರ್ (Oscars 2024) ರೇಸ್‌ನಲ್ಲಿ ಯಾವೆಲ್ಲ ಭಾರತೀಯ ಸಿನಿಮಾಗಳು ಬರಬಹುದು ಎಂಬ ಚರ್ಚೆ ಶುರುವಾಗಿವೆ. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Kii Prem Kahaani), ʻಜ್ವಿಗಾಟೊʼ (Zwigato), ʻದಿ ಕೇರಳ ಸ್ಟೋರಿʼ ಹೆಸರು ಜೋರಾಗಿ ಕೇಳಿಬರುತ್ತಿದೆ ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ವ್ಯಾನ್‌ನಿಂದ ಜಿಗಿದು ಇಬ್ಬರು ಕೈದಿಗಳ ಪರಾರಿ, ಕತ್ತೆ ಕಾಯುತ್ತಿದ್ದ ಪೊಲೀಸರು!
ಉತ್ತರ ಪ್ರದೇಶದಲ್ಲಿ ಮೂವರು ಆರೋಪಿಗಳು ಪೊಲೀಸ್ ವ್ಯಾನ್‌ನಿಂದ ತಪ್ಪಿಸಿಕೊಂಡು ಓಡಿಹೋದ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಹಾಗೆಯೇ, ಉತ್ತರ ಪ್ರದೇಶ ಪೊಲೀಸರ ಕಾರ್ಯವೈಖರಿ ಕುರಿತು ಜನರಿಂದ ಅಸಮಾಧಾನ ವ್ಯಕ್ತವಾಗಿದೆ. ಅವರೇನು ಕತ್ತೆ ಕಾಯ್ತಿದ್ರಾ ಎಂದು ಜನ ಕೇಳ್ತಿದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಕ್ರಿಕೆಟ್
Team India : ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ 3 ಮಾದರಿಯ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಮಾಡಿದ ಟೀಮ್ ಇಂಡಿಯಾ
ಆಸ್ಟ್ರೆಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ ತಂಡ (Team India) ವಿಶೇಷ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ.
ಮೊಹಾಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ನಂ.1 ಸ್ಥಾನಕ್ಕೇರಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನವನ್ನು ಅಗ್ರಸ್ಥಾನದಿಂದ ಕೆಳಗಿಳಿಸಲು ಟೀಮ್ ಇಂಡಿಯಾಗೆ ಜಯದ ಅಗತ್ಯವಿತ್ತು. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದ ಬಳಿಕ ಅಪರೂಪದ ದಾಖಲೆ ಮಾಡಿದೆ.
ಟೆಸ್ಟ್ ಹಾಗೂ ಟಿ20 ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾ ನಂ.1 ಸ್ಥಾನದಲ್ಲಿತ್ತು. ಈಗ ಅವರು ಏಕದಿನ ಪಂದ್ಯಗಳಲ್ಲಿಯೂ ನಂಬರ್ ಒನ್ ಆಗಿದ್ದಾರೆ. ವಿಶೇಷವೆಂದರೆ, ಮೆನ್ ಇನ್ ಬ್ಲೂ ಇತಿಹಾಸದಲ್ಲಿ ಎಲ್ಲಾ ಸ್ವರೂಪಗಳಲ್ಲಿ ನಂ.1 ಶ್ರೇಯಾಂಕವನ್ನು ಪಡೆದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ 2012ರ ಆಗಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಈ ಸಾಧನೆ ಮಾಡಿತ್ತು. ಅದೇ ರೀತಿ ಈ ಸಾಧನೆ ಮಾಡಿರುವ ಏಷ್ಯಾದ ಮೊದಲ ತಂಡ ಎನಿಸಿಕೊಂಡಿದೆ.
ಐಸಿಸಿ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾ ಅಂಕ
- ಟೆಸ್ಟ್ – 264 ಅಂಕಗಳು
- ಟಿ20ಐ – 118 ಅಂಕ
- ಏಕದಿನ – 116 ಅಂಕ
ಪಾಕಿಸ್ತಾನ ಇನ್ನೂ ಪೈಪೋಟಿಯಲ್ಲಿದೆ
ವಿಶ್ವಕಪ್ ಪ್ರಾರಂಭವಾಗುವ ಮೊದಲು ಪಾಕಿಸ್ತಾನವು ಅಗ್ರಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಾಗಿರುವುದರಿಂದ ಎಲ್ಲಗೂ ಇಲ್ಲಿಗೆ ಮುಗಿದಿಲ್ಲ. . ಆಸ್ಟ್ರೇಲಿಯಾ ಇನ್ನು ಮುಂದೆ ವಿಶ್ವಕಪ್‌ಗೆ ಹೋಗುವ ನಂ.1 ತಂಡವಾಗಲು ರೇಸ್‌ನಲ್ಲಿ ಇಲ್ಲವಾಧರೂ ಆಸ್ಟ್ರೇಲಿಯಾ ಭಾರತದ ವಿರುದ್ಧದ ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಪಾಕಿಸ್ತಾನ ಇನ್ನೂ ನಂ.1 ಆಗಬಹುದು.
ಇದನ್ನೂ ಓದಿ : ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ
ಎಲ್ಲ ಮೂರು ಮಾದರಿಗಳಲ್ಲಿ ನಂಬರ್ 1 ಸ್ಥಾನ ಪಡೆದ ಭಾರತ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಭಾಶಯ ಸಲ್ಲಿಸಿದ್ದಾರೆ.
🇮🇳 Numero Uno in Test, ODI, and T20I cricket.
— Jay Shah (@JayShah) September 22, 2023
Heartiest congratulations to #TeamIndia for achieving this historic milestone. The rankings reflect the hard work put in by this team as they chase excellence on the field. This is fantastic achievement just ahead of the World Cup.… pic.twitter.com/wR4JDlqBJy
ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಟೀಮ್ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು. ಮೈದಾನದಲ್ಲಿ ಶ್ರೇಷ್ಠತೆಯನ್ನು ಬೆನ್ನಟ್ಟುವಾಗ ಈ ತಂಡವು ಮಾಡಿದ ಕಠಿಣ ಪರಿಶ್ರಮವನ್ನು ರ್ಯಾಂಕ್ಗಳನ್ನು ಪ್ರತಿಬಿಂಬಿಸುತ್ತವೆ. ವಿಶ್ವಕಪ್‌ಗೆ ಸ್ವಲ್ಪ ಮುಂಚಿತವಾಗಿ ಇದು ಅದ್ಭುತ ಸಾಧನೆಯಾಗಿದೆ. ಮೊಹಾಲಿಯಲ್ಲಿ ನಡೆದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧ 1-0 ಮುನ್ನಡೆ ಸಾಧಿಸಿದೆ. ಆವೇಗವನ್ನು ಮುಂದುವರಿಸೋಣ. ಎಂದು ಬರೆದಿದ್ದಾರೆ.
ಭಾರತ ತಂಡದ ಸಾಧನೆ ರೀ ರೀತಿ ಇದೆ
- ನಂ.1 ಟೆಸ್ಟ್ ತಂಡ – ಭಾರತ
- ನಂ.1 ಟಿ20 ತಂಡ- ಭಾರತ
- ನಂ.1 ಏಕದಿನ ತಂಡ – ಭಾರತ
- ನಂ.1 ಟಿ20 ಬ್ಯಾಟ್ಸ್ಮನ್ – ಸೂರ್ಯ
- ನಂ.1 ಏಕದಿನ ಬೌಲರ್ – ಸಿರಾಜ್
- ನಂ.1 ಟೆಸ್ಟ್ ಬೌಲರ್ – ಅಶ್ವಿನ್
- ನಂ.1 ಟೆಸ್ಟ್ ಆಲ್ರೌಂಡರ್ – ಜಡೇಜಾ
- ನಂ.2 ಟೆಸ್ಟ್ ಆಲ್ರೌಂಡರ್ – ಅಶ್ವಿನ್
- ನಂ.2 ಏಕದಿನ ಬ್ಯಾಟ್ಸ್ಮನ್ – ಗಿಲ್
- ನಂ.2 ಟಿ20 ಆಲ್ರೌಂಡರ್- ಹಾರ್ದಿಕ್
- ನಂ.3 ಟೆಸ್ಟ್ ಬೌಲರ್ – ಜಡೇಜಾ
ಕ್ರಿಕೆಟ್
ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ
ಭಾರತ ತಂಡ ಗೆಲುವಿನ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ (ind vs aus) 1-0 ಮುನ್ನಡೆ ಪಡೆಯಿತು.
ಮೊಹಾಲಿ: ಪ್ರವಾಸಿ ಆಸ್ಟ್ರೇಲಿಯಾ (ind vs aus ) ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ. ಭಾರತ ತಂಡದ ಪರ ಬೌಲಿಂಗ್‌ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಈ ವಿಜಯದ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು.
ಗುರಿ ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಋತುರಾಜ್ ಗಾಯಕ್ವಾಡ್ ಹಾಗೂ ಶುಭ್ ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಈ ಜೋಡಿ ಮೊದಲ ವಿಕೆಟ್ಗೆ 142 ರನ್ ಬಾರಿಸಿ ವಿಶ್ವಾಸ ಮೂಡಿಸಿತು. ಇವರಿಬ್ಬರೂ ಆಸ್ಟ್ರೇಲಿಯಾದ ಬೌಲರ್ಗಳನ್ನು ಹಿಮ್ಮಟ್ಟಿಸಿದರು.
ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಶ್ರೇಯಸ್ ಅಯ್ಯರ್ ಮತ್ತೆ ವೈಫಲ್ಯ ಕಂಡರು. 3 ರನ್ಗೆ ಅವರು ರನ್ಔಟ್ ಆದರು. ಅನಗತ್ಯ ರನ್ ಕದಿಯಲು ಮುಂದಾದ ಅವರು ತಾವಿನ್ನೂ ಲಯ ಕಂಡುಕೊಂಡಿಲ್ಲ ಎಂಬುದನ್ನು ಸೂಚಿಸಿದಂತಿತ್ತು. ಅವರು ಔಟಾದ ಬಳಿಕ ಭಾರತಕ್ಕೆ ಸ್ವಲ್ಪ ಹಿನ್ನಡೆ ಉಂಟಾಯಿತು. ಆದರೆ ಈ ಇಬ್ಬರೂ ಬ್ಯಾಟರ್ಗಳು ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ಅವರ ಎಸೆತಗಳಿವೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಇಶಾನ್ ಕಿಶನ್ ಭರವಸೆ ಮೂಡಿಸಿದರೂ 18 ರನ್ಗಳಿಗೆ ಔಟಾದರು. ಈ ವೇಳೆ ಭಾರತ ತಂಡ 185 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು.
ಈ ವೇಳೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಕೆ. ಎಲ್ ರಾಹುಲ್ ಅರ್ಧ ಶತಕಗಳನ್ನು ಬಾರಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರೂ 80 ರನ್ಗಳ ಜತೆಯಾಟ ಆಡಿದರು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಗರಿಷ್ಠ 52 ರನ್ ಗಳಿಸಿದರು. ಜೋಶ್ ಇಂಗ್ಲಿಷ್ 45, ಸ್ಟೀವ್ ಸ್ಮಿತ್ 41, ಮಾರ್ನಸ್ ಲಾಬುಷೇನ್ 39, ಕ್ಯಾಮರೂನ್ ಗ್ರೀನ್ 31, ಮಾರ್ಕಸ್ ಸ್ಪೋಯಿನಿಸ್ 29 ಮತ್ತು ನಾಯಕ ಪ್ಯಾಟ್ ಕಮಿನ್ಸ್ 21 ರನ್ ಗಳಿಸಿ ಔಟಾಗದೆ ಉಳಿದರು. ಸ್ಮಿತ್ ಹಾಗೂ ವಾರ್ನರ್ ಭಾರತ ತಂಡದ ಬೌಲರ್ಗಳನ್ನು ಕಾಡಿದರಲ್ಲದೆ, ದೊಡ್ಡ ಮೊತ್ತ ಪೇರಿಸುವ ಆತಂಕ ಮೂಡಿಸಿದರು. ಆದರೆ, ಮೊಹಮ್ಮದ್ ಶಮಿ ಭಾರತದ ಭಯವನ್ನು ದೂರ ಮಾಡಿದರು. ಬುಮ್ರಾ.ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಶಮಿಗೆ ಉತ್ತಮ ಬೆಂಬಲ ನೀಡಿದರು.
ಇದನ್ನೂ ಓದಿ: Mohammed Shami : ಬೌಲಿಂಗ್‌ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ
ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಪೂರ್ವ ಸಿದ್ಧತೆ ನಡೆಸಲು ಈ ಸರಣಿ ಭಾರತದ ಪಾಲಿಗೆ ಮಹತ್ವದನಿಸಿದೆ. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ಕಲ್ಪಿಸಲಾಗಿದೆ.
ಕ್ರಿಕೆಟ್
Mohammed Shami : ಬೌಲಿಂಗ್‌ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ (Mohammed Shami) ಐದು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾವನ್ನು 50 ಓವರ್ಗಳಿಎಗ ಕೇವಲ 276 ರನ್ಗಳಿಗೆ ನಿಯಂತ್ರಿಸಲು ಸಹಾಯ ಮಾಡಿದರು.
ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ವೇಗದ ಬೌಲರ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶಗಳನ್ನು ದಾಖಲಿಸಿದ್ದಾರೆ. ಅವರು 51 ರನ್ಗಳಿಗೆ 5 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಪ್ರವಾಸಿ ತಂಡವನ್ನು 50 ಓವರ್ಗಳಿಗೆ 276 ರನ್ಗಳಿಗೆ ಸೀಮಿತಗೊಳಿಸಲು ಸಹಾಯ ಮಾಡಿದರು. ಡೇವಿಡ್ ವಾರ್ನರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಶಮಿ ಆರಂಭಿಕ ಆಘಾತ ನೀಡಿದ್ದರು.
ಅದ್ಭುತ ಎಸೆತದಿಂದ ಮಾರ್ಷ್ ಔಟ್ ಆದರು. ಅವರು ವಿಕೆಟ್ನಿಂದ ಹೊರಕ್ಕೆ ಹೋಗುತ್ತಿದ್ದ ಚೆಂಡನ್ನು ಮುಟ್ಟಲು ಯತ್ನಿಸಿ ಶುಬ್ಮನ್ ಗಿಲ್ ಕ್ಯಾಚ್ ಹಿಡಿಯುವ ಮೂಲಕ ನಿರ್ಗಮಿಸಿದರು.
Mohammed Shami has made a strong case for his inclusion in India's starting XI for #CWC23 💥#INDvAUS pic.twitter.com/u1kAPL54kN
— ICC (@ICC) September 22, 2023
ಶಮಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರಿಗೂ ಆಘಾತ ನೀಡಿದರು. ಸ್ಮಿತ್ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಬಲಗೈ ವೇಗಿ ಶಮಿ ಅವರನ್ನು ಬೌಲ್ಡ್ ಮಾಡಿದರು. 33 ವರ್ಷದ ವೇಗಿ ಆ ಬಳಿಕ ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ಶಾರ್ಟ್ ಮತ್ತು ಸೀನ್ ಅಬಾಟ್ ಅವರನ್ನು ಔಟ್ ಮಾಡಿ ಅಂತಿಮ ಮೂರು ವಿಕೆಟ್ಗಳನ್ನು ಪಡೆದರು. ಈ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು.
ಉತ್ತಮ ಸಾಧನೆ
2019ರ ವಿಶ್ವಕಪ್ನಲ್ಲಿ ಬರ್ಮಿಂಗ್ಹಮ್ನ ಎಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್ಗೆ 5 ವಿಕೆಟ್ ಪಡೆದಿದ್ದು ಅವರ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಇದು ಏಕದಿನ ಕ್ರಿಕೆಟ್ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಅಮ್ರೋಹಾ ಮೂಲದ (ಉತ್ತರ ಪ್ರದೇಶ) ಬೌಲರ್ 50 ಓವರ್ಗಳ ಸ್ವರೂಪದಲ್ಲಿ ಒಂಬತ್ತು ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಪಂದ್ಯದಲ್ಲಿ ಶಮಿ ಗಳಿಸಿದ ಏಕೈಕ ದಾಖಲೆ ಮಾತ್ರವಲ್ಲ, ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಪಂದ್ಯವೊಂದರಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಮಿ ಭಾರತದ ಮಾಜಿ ವೇಗಿ ಮತ್ತು ಅಖಿಲ ಭಾರತ ಹಿರಿಯ ಪುರುಷರ ಆಯ್ಕೆ ಸಮಿತಿಯ ಪ್ರಸ್ತುತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್ಕೋಟ್ನಲ್ಲಿ ನಡೆಯಲಿದೆ.
-
ಪ್ರಮುಖ ಸುದ್ದಿ18 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ10 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ15 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಗ್ಯಾಜೆಟ್ಸ್12 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ11 hours ago
Prisoners Escape: ವ್ಯಾನ್‌ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ11 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉತ್ತರ ಕನ್ನಡ12 hours ago
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ
-
ಆರೋಗ್ಯ21 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!