ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ನ ಐದನೇ ಪ್ರಶಸ್ತಿ ಗೆದ್ದಿದೆ. ತಂಡವಿಡೀ ಇದೇ ಖುಷಿಯಲ್ಲಿದೆ. ಅಭಿಮಾನಿಗಳೂ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಸಿಎಸ್ಕೆ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸಂಗತಿ ಲಭಿಸಿದೆ. ಅದುವೇ ಧೋನಿ ಮತ್ತು ರವೀಂದ್ರ ಜಡೇಜಾ ನಡುವೆ ಯಾವುದೇ ಜಗಳವಿಲ್ಲ ಎಂಬುದು. ಅದು ಖಾತ್ರಿಯಾಗಿದ್ದು ಜಡೇಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಡಿಪಿಯಲ್ಲಿ ಧೋನಿಯ ಚಿತ್ರವನ್ನು ಹಾಕುವ ಮೂಲಕ. ಇದೀಗ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ.
ಕ್ವಾಲಿಫೈಯರ್ 1 ಪಂದ್ಯದ ವೇಳೆ ಧೋನಿ ಮತ್ತು ಜಡೇಜಾ ಜಗಳವಾಡಿಕೊಂಡಿದ್ದರು ಎಂಬುದಾಗಿ ಸುದ್ದಿಯಾಗಿತ್ತು. ಸಿಎಸ್ಕೆ ಸಿಇಒ ಕಾಶಿ ವಿಶ್ನನಾಥನ್ ಅವರು ಜಡೇಜಾ ಅವರನ್ನು ಸಮಾಧಾನ ಮಾಡಲು ಯತ್ನಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇವೆಲ್ಲದರ ನಡುವೆ ಜಡೇಜಾ ಟ್ವಿಟ್ಟರ್ನಲ್ಲಿ ಕರ್ಮ ಮರುಕಳಿಸಲಿದೆ ಎಂಬುದಾಗಿ ರಹಸ್ಯ ಟ್ವೀಟ್ ಮಾಡಿದದರು. ಇದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಜಡೇಜಾ ಧೋನಿಯ ಜತೆಗಿರುವ ಚಿತ್ರವನ್ನು ಹಾಕಿ ನಮ್ಮಿಬ್ಬರ ನಡುವೆ ಜಗಳ ಏನೂ ಇಲ್ಲ ಎಂಬ ಸಂದೇಶ ಸಾರಿದ್ದಾರೆ.
ಸಿಎಸ್ಕೆಯ ಕೊನೆಯ ಲೀಗ್ ಪಂದ್ಯದ ನಂತರ ಜಡೇಜಾ ಮತ್ತು ಧೋನಿ ನಡುವಿನ ಜಗಳದ ವೀಡಿಯೊ ಇಂಟರ್ನೆಟ್ನಲ್ಲಿ ಹರಿದಾಡಿದ್ದವು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್ಕೆ 77 ರನ್ಗಳ ಭರ್ಜರಿ ಜಯ ಸಾಧಿಸಿದ ನಂತರವೂ ಧೋನಿ ಜಡೇಜಾ ವಿರುದ್ಧ ಕೋಪಗೊಂಡಿದ್ದರು ನಂತರ, ಜಡೇಜಾ “ಕರ್ಮ” ಟ್ವೀಟ್ ಮಾಡಿದ್ದರೆ ಅವರ ಪತ್ನಿ ರಿಟ್ವೀಟ್ ಮಾಡಿದ್ದರು. ಇದು ತಂಡದಲ್ಲಿ ಜಡೇಜಾ ಅವರ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿ ಮಾಡಿತ್ತು.
ಫೈನಲ್ನಲ್ಲಿ ಚೆನ್ನೈ ತಂಡದ ಆಲ್ರೌಂಡರ್ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಗುಜರಾತ್ ವಿರುದ್ಧ ಐದು ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ನಂತರ ಮಾತನಾಡಿದ ಅವರು ತಮ್ಮ ಪ್ರದರ್ಶನವನ್ನು ಧೋನಿಗೆ ಅರ್ಪಿಸಿದ್ದರು. ಇದೀಗ ಇನ್ಸ್ಟಾಗ್ರಾಮ್ನ್ಲಲಿ ಧೋನಿ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಗೆಲುವಿನ ರನ್ ಬಾರಿಸಿ ಬಂದಿದ್ದ ಜಡೇಜಾ ಅವರನ್ನು ಧೋನಿ ಮೇಲಕ್ಕೆತ್ತಿ ಹಿಡಿದಿದ್ದಾರೆ.
ಇದನ್ನೂ ಓದಿ : IPL 2023 : ರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ, ಅದಕ್ಕೆ ಚೆನ್ನೈಗೆ ಗೆಲವು ತಂದುಕೊಟ್ಟರು ಎಂದ ಅಣ್ಣಾಮಲೈ!
ಫೈನಲ್ ಪಂದ್ಯದಲ್ಲಿ 15 ಓವರ್ಗಳಲ್ಲಿ 171 ರನ್ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡವು ಒಂದು ಹಂತದಲ್ಲಿ ಸೋಲಿನ ಕಡೆಗೆ ಮುಖ ಮಾಡಿತ್ತು. ಆದರೆ ಕೊನೇ ಓವರ್ನ ಕೊನೇ ಎಸೆತಕ್ಕೆ ಫೋರ್ ಬಾರಿಸುವ ಮೂಲಕ ಚೆನ್ನೈ ತಂಡ ಚಾಂಪಿಯನ್ಪಟ್ಟ ಅಲಂಕರಿಸಿತ್ತು.
“ಏನೇ ಆಗಲಿ ನಾನು ಜೋರಾಗಿ ಹೊಡೆಯಬೇಕು ಯೋಚಿಸುತ್ತಿದ್ದೆ. ಮೋಹಿತ್ ನಿಧಾನಗತಿಯ ಬೌಲಿಂಗ್ ಮಾಡಬಲ್ಲ ಕಾರಣ ನಾನು ನೇರವಾಗಿ ಹೊಡೆಯಲು ಎದುರು ನೋಡುತ್ತಿದ್ದೆ ಎಂದು ಜಡೇಜಾ ಗೆಲುವಿನ ನಂತರ ಹೇಳಿದ್ದಾರೆ.