Site icon Vistara News

Yashasvi Jaiswal : 2023ರಲ್ಲಿ ಮತ್ತೊಂದು ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್​

Yashswi Jaiswal

ನವದೆಹಲಿ: ಭಾರತದ ಬ್ಯಾಟಿಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ (Yashasvi Jaiswal) 2023 ರ ಐಸಿಸಿ ಪುರುಷರ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರಲ್ಲದೆ, ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಟ್ಜೆ, ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಮತ್ತು ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕಾ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇತರ ಆಟಗಾರರಾಗಿದ್ದಾರೆ.

ಯಶಸ್ವಿ ಜೈಸ್ವಾಲ್​

ಯಶಸ್ವಿ‘ ಜೈಸ್ವಾಲ್ ಅವರ 2023 ರ ಪ್ರಯಾಣವು ಅದ್ಭುತವಾಗಿದೆ. ಏಕೆಂದರೆ ಅವರು ಐಪಿಎಲ್ ಋತುವಿನ ನಂತರ ಭಾರತೀಯ ಟೆಸ್ಟ್ ಮತ್ತು ಟಿ20 ಐ ತಂಡಗಳಲ್ಲಿ ಸ್ಥಾನ ಪಡೆದರು. ಅದಕ್ಕಿಂತ ಮೊದಲು ಐಪಿಎಲ್​ 14 ಪಂದ್ಯಗಳಲ್ಲಿ 625 ರನ್ ಗಳಿಸಿರುವ ಅವರು 48.07 ಸರಾಸರಿ ಮತ್ತು 163.61 ಸ್ಟ್ರೈಕ್ ರೇಟ್ ಕಾಯ್ದುಕೊಂಡು ಐಪಿಎಲ್ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅವರು ವೆಸ್ಟ್ ಇಂಡೀಸ್ ವಿರುದ್ಧ 171 ರನ್ ಗಳಿಸುವ ಮೂಲಕ ಗಮನಾರ್ಹ ಚೊಚ್ಚಲ ಶತಕವನ್ನು ಗಳಿಸಿದರು. ಮೂರು ಪಂದ್ಯಗಳಲ್ಲಿ, ಅವರು 57.60 ಸರಾಸರಿಯಲ್ಲಿ 288 ರನ್ ಗಳಿಸಿದ್ದಾರೆ ಮತ್ತು ಭಾರತದ ಟೆಸ್ಟ್ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಜೈಸ್ವಾಲ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದರೆ, ಟಿ 20 ಪಂದ್ಯಗಳಲ್ಲಿ ಮೂರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಗಳಿಸಿದ್ದಾರೆ. 2023ರ ಏಶ್ಯನ್ ಗೇಮ್ಸ್ ವಿಜೇತ ಭಾರತ ತಂಡದ ಭಾಗವಾಗಿದ್ದರು.

ರಚಿನ್ ರವೀಂದ್ರ

ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ 2023 ರ ಏಕದಿನ ವಿಶ್ವಕಪ್​ನಲ್ಲಿ ಉದಯೋನ್ಮುಖ ತಾರೆಯಾಗಿದ್ದರು. 10 ಪಂದ್ಯಗಳಲ್ಲಿ 64.22 ಸರಾಸರಿಯಲ್ಲಿ 578 ರನ್ ಗಳಿಸಿದ್ದಾರೆ. ಅವರು 2023 ರಲ್ಲಿ ಏಕದಿನ ಪಂದ್ಯಗಳಲ್ಲಿ 41 ಸರಾಸರಿಯಲ್ಲಿ 820 ರನ್ ಗಳಿಸಿದ್ದಾರೆ ಮತ್ತು 6.02 ಎಕಾನಮಿ ರೇಟ್​ನಲ್ಲಿ 18 ವಿಕೆಟ್​​ ಪಡೆದಿದ್ದಾರೆ. ಟಿ20ಐನಲ್ಲಿ ಕಿವೀಸ್ ಆಲ್ರೌಂಡರ್ 18.20 ಸರಾಸರಿಯಲ್ಲಿ 91 ರನ್ ಗಳಿಸಿದ್ದು, ಐದು ವಿಕೆಟ್​​ಗಳನ್ನು ಪಡೆದಿದ್ದಾರೆ.

ಜೆರಾಲ್ಡ್​ ಕೊಟ್ಜೆ

2023 ರ ಏಕದಿನ ವಿಶ್ವಕಪ್​ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಕಾರಣ ದಕ್ಷಿಣ ಆಫ್ರಿಕಾದ ವೇಗಿಯನ್ನು ನಾಮನಿರ್ದೇಶನ ಮಾಡಲಾಗಿದೆ. ಬಲಗೈ ವೇಗಿ ಎಂಟು ಪಂದ್ಯಗಳಲ್ಲಿ 6.24 ಎಕಾನಮಿ ರೇಟ್​ನಲ್ಲಿ 20 ವಿಕೆಟ್​ಗಳನ್ನು ಪಡೆದರು. ದಕ್ಷಿಣ ಆಫ್ರಿಕಾದ ವೇಗಿ 50 ಓವರ್​ಗಳ ಆವೃತ್ತಿಯಲ್ಲಿ 6.47 ಎಕಾನಮಿ ರೇಟ್​ನಲ್ಲಿ ಒಟ್ಟು 31 ವಿಕೆಟ್​ಗಳನ್ನು ಪಡೆದರೆ, ಟೆಸ್ಟ್​ನಲ್ಲಿ 3.87 ಎಕಾನಮಿ ರೇಟ್​ನಲ್ಲಿ ಹತ್ತು ವಿಕೆಟ್​​ ಪಡೆದರು. ಟಿ20ಐನಲ್ಲಿ 10.50ರ ಸರಾಸರಿಯಲ್ಲಿ 6 ವಿಕೆಟ್ ಕಬಳಿಸಿದ್ದಾರೆ.

ದಿಲ್ಶಾನ್ ಮಧುಶಂಕಾ

ಶ್ರೀಲಂಕಾದ ವೇಗದ ಬೌಲರ್ 2023 ರ ಏಕದಿನ ವಿಶ್ವಕಪ್​ನಲ್ಲಿ ಒಂಬತ್ತು ಪಂದ್ಯಗಳಲ್ಲಿ 21 ವಿಕೆಟ್​ಗಳನ್ನು ಪಡೆಯುವ ಮೂಲಕ ಅಸಾಧಾರಣವಾಗಿ ಹೊರಹೊಮ್ಮಿದ್ದಾರೆ. ಎಡಗೈ ವೇಗಿ 24.06 ಎಕಾನಮಿಯಲ್ಲಿ 15 ಏಕದಿನ ವಿಕೆಟ್​ಗಳನ್ನು ಪಡೆದರೆ, 2023 ರಲ್ಲಿ 9.80 ಎಕಾನಮಿಯಲ್ಲಿ 12 ಟಿ 20 ಐ ವಿಕೆಟ್ ಉರುಳಿಸಿದ್ದಾರೆ.

Exit mobile version