Site icon Vistara News

Team India : ಉಪಾಹಾರಕ್ಕೆ ಜಿಲೇಬಿ, ರಾತ್ರಿ ಊಟಕ್ಕೆ ಕಿಚಡಿ; ಟೀಮ್ ಇಂಡಿಯಾ ಆಟಗಾರರಿಗೆ ಭರ್ಜರಿ ಆತಿಥ್ಯ

Gujarat Food

ನವ ದೆಹಲಿ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲ ಸಾಧಿಸಿದೆ. ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿದೆ. ಮೂರನೇ ಪಂದ್ಯ ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕಾಗಿ ಟೀಮ್ ಇಂಡಿಯಾ (Team India) ಸೋಮವಾರ ರಾಜ್​ಕೋಟ್​ಗೆ ಬಂದಿಳಿದಿದೆ. ಅಲ್ಲಿ ಆಟಗಾರರು ಭರ್ಜರಿ ಆತಿಥ್ಯ ಪಡೆಯುತ್ತಿದ್ದಾರೆ.

ಸೌರಾಷ್ಟ್ರದ ರಾಯಲ್ ಸಂಸ್ಕೃತಿಯನ್ನು ಬಿಂಬಿಸುವ ರಾಯಲ್ ಹೆರಿಟೇಜ್ ಥೀಮ್​​ ಸೂಟ್ ರೂಮ್ ಅನ್ನು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಹಂಚಿಕೆ ಮಾಡಲಾಗಿದೆ. ಹೆಚ್ಚುವರಿಯಾಗಿ, ರಾಯಲ್ ಹೋಟೆಲ್ ಆಟಗಾರರಿಗೆ ಅವರ ವಾಸ್ತವ್ಯದ ಸಮಯದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಇದರಲ್ಲಿ ಗುಜರಾತಿ ಭಕ್ಷ್ಯಗಳ ಶ್ರೇಣಿಯೂ ಸೇರಿದೆ.

ಆಟಗಾರರಿಗೆ ವಿಶೇಷ ಗುಜರಾತಿ ಭಕ್ಷ್ಯಗಳಾದ ಪಾಪ್ಡಾ , ಜಿಲೇಬಿ, ಖಖ್ರಾ, ಗಾಥಿಯಾ, ಥೆಪ್ಲಾ ಮತ್ತು ಖ್ಮಾನ್ ಅನ್ನು ಉಪಾಹಾರಕ್ಕಾಗಿ ನೀಡಲಾಗುತ್ತದೆಇ. ವಿಶೇಷ ಕಾಟಿಯಾವಾಡಿ ಆಹಾರಗಳಾದ ದಹಿ ಟಿಕಾರಿ, ವಘೆರೆಲಾ ರೊಟ್ಲೊ (ಮೊಸರು ಮತ್ತು ಬೆಳ್ಳುಳ್ಳಿಯೊಂದಿಗೆ ಹುರಿದ ಬಾಜ್ರಾ ರೊಟ್ಟಿ), ಖಿಚ್ಡಿಯನ್ನು ರಾತ್ರಿ ಊಟಕ್ಕೆ ನೀಡಲಾಗುವುದು ಎಂದು ಹೋಟೆಲ್ ಡೈರೆಕ್ಟರ್​ ಒಬ್ಬರು ತಿಳಿಸಿದ್ದಾರೆ.

ಭಾರತೀಯ ತಂಡದ ಆಟಗಾರರು ಖಿಚಡಿ-ಖಾದಿಯನ್ನು ತಿನ್ನಲು ಇಷ್ಟಪಡುತ್ತಾರೆ. ವಿಶೇಷವಾಗಿ ಭಾರತದ ಲೆಜೆಂಡರಿ ನಾಯಕ ಎಂಎಸ್ ಧೋನಿ ಕೂಡ ಖಿಚಡಿ-ಖಾದಿ ತಿನ್ನಲು ಇಷ್ಟಪಡುತ್ತಿದ್ದರು.

ರಾಜ್​ಕೋಟ್​ ಟೆಸ್ಟ್​ನಿಂದ ಕೆಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್​ಗೆ ಚಾನ್ಸ್

ಗುಜರಾತ್​ನ ರಾಜ್​ಕೊಟ್​​ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​​ ಕೆಎಲ್ ರಾಹುಲ್ (KL Rahul) ಹೊರಗುಳಿದಿದ್ದಾರೆ. ಅವರ ಬದಲಿ ಕರ್ನಾಟಕ ತಂಡದ ಎಡಗೈ ಬ್ಯಾಟರ್​ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Sanjana Ganesan : ಬಾಡಿ ಶೇಮಿಂಗ್​ ಮಾಡಿದ ಕಿಲಾಡಿಗೆ ಬೆಂಡೆತ್ತಿದ ಬುಮ್ರಾ ಪತ್ನಿ ಸಂಜನಾ

ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಸೋಮವಾರ ರಾಜ್​ಕೋಟ್​​ನಲ್ಲಿ ಭಾರತ ತಂಡವನ್ನು ಸೇರಬೇಕಿತ್ತು. ಆದರೆ ರಾಹುಲ್ ಇನ್ನೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ. ಗಾಯದಿಂದಾಗಿ ರಾಹುಲ್ ವಿಶಾಖಪಟ್ಟಣಂ ಟೆಸ್ಟ್​​ನಿಂದ ಹೊರಗುಳಿದಿದ್ದರು. ಫಿಟ್ನೆಸ್​ಗೆ ಒಳಪಟ್ಟು ಕೊನೆಯ ಮೂರು ಟೆಸ್ಟ್​ಗಳಿಗೆ ತಂಡದ ಭಾಗವಾಗಿ ಹೆಸರಿಸಲ್ಪಟ್ಟಿದ್ದರು. ಆದರೆ ಇದೀಗ ಅವರು ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಅತ್ಯುತ್ತಮ ಪ್ರಥಮ ದರ್ಜೆ ಋತುವಿನ ಮಧ್ಯದಲ್ಲಿದ್ದ ದೇವದತ್​​ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಮೊದಲ ಕರೆಯನ್ನು ಪಡೆದಿದ್ದಾರೆ. 23 ವರ್ಷದ ಕರ್ನಾಟಕದ ಬ್ಯಾಟರ್​​ ಕೆಲವು ದಿನಗಳ ಹಿಂದೆ ತಮಿಳುನಾಡು ವಿರುದ್ಧ 151 ರನ್ ಗಳಿಸಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್​​ನಲ್ಲಿ 105 ರನ್ ಗಳಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್​ನ ಹಾಲಿ ಋತುವಿನಲ್ಲಿ ಇದು ಅವರ ಮೂರನೇ ಶತಕವಾಗಿದೆ.

Exit mobile version