ಧರ್ಮಶಾಲಾ: ಇಂಗ್ಲೆಂಡ್ ತಂಡದ ಪ್ರಧಾನ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ಅವರ ಬಹು ದಿನಗಳ ಕನಸು ಧರ್ಮಶಾಲಾ ಟೆಸ್ಟ್ನಲ್ಲಿ(India vs England 5th Test) ಸಾಕಾರಗೊಂಡಿದೆ. ಅವರು 2 ವಿಕೆಟ್ ಕೀಳುವಲ್ಲಿ ಯಶಸ್ವಿಯಾಗುವ ಮೂಲಕ ಟೆಸ್ಟ್ನಲ್ಲಿ 700 ವಿಕೆಟ್ ಪೂರ್ತಿಗೊಳಿಸಿದ್ದಾರೆ. ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್ ಹಾಗೂ ಮೊದಲ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.
ಭಾರತ ಎದುರಿನ ಟೆಸ್ಟ್ ಸರಣಿ ಆರಂಭಗೊಂಡ ದಿನದಿಂದಲೂ ಆ್ಯಂಡರ್ಸನ್ ಈ ಮೇಲುಗಲ್ಲು ಯಾವಾಗ ಪೂರ್ತಿಗೊಳಿಸುತ್ತಾರೆ ಎಂದು ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದರು. ಇದು ಸರಣಿಯ ಅಂತಿಮ ಟೆಸ್ಟ್ನಲ್ಲಿ ನೆರವೇರಿದೆ. ಈ ಹಿಂದಿನ 2 ಟೆಸ್ಟ್ಗಳಲ್ಲಿಯೇ ಈ ದಾಖಲೆ ನಿರ್ಮಾಣವಾಗಬೇಕಿತ್ತು. ಆದರೆ ಅವರಿಗೆ ಹೆಚ್ಚಿನ ವಿಕೆಟ್ ಬಿದ್ದಿರಲಿಲ್ಲ. ಅಂತಿಮವಾಗಿ 41 ವರ್ಷದ ಆ್ಯಂಡರ್ಸನ್ ಶುಭಮನ್ ಗಿಲ್ ಮತ್ತು ಕುಲ್ದೀಪ್ ಯಾದವ್ ಅವರ ವಿಕೆಟ್ ಪಡೆಯುವ ಮೂಲಕ 700 ವಿಕೆಟ್ಗಳ ಕ್ಲಬ್ಗೆ ಸೇರ್ಪಡೆಗೊಂಡರು.
James Anderson strikes on the start of Day 3 and dismisses Kuldeep Yadav to secure his 700th Test wicket 👏🏻
— InsideSport (@InsideSportIND) March 9, 2024
📸:- Jio Cinema#INDvsENGTest #JamesAnderson #Insidesport #CricketTwitter pic.twitter.com/7Sl4gsDBbo
ವಯಸ್ಸು 41 ದಾಡಿದರೂ ಕೂಡ ದೀರ್ಘ ಸ್ವರೂಪದ ಟೆಸ್ಟ್ ಕ್ರಿಕೆಟ್ ಆಡುತ್ತಿರುವುದು ಸಾಮಾನ್ಯ ಮಾತಲ್ಲ. ಇಂದಿನ ಯುವ ಕ್ರಿಕೆಟಿಗರು ಒಂದೆರಡು ಸರಣಿ ಆಡಿ ಬಳಿಕ ಮಾನಸಿಕವಾಗಿ ಬಳಲಿದ್ದೇನೆ ಎಂದು ಕ್ರಿಕೆಟ್ನಿಂದ ಹಿಂದೆ ಸರಿಯುತ್ತಾರೆ. ಅಂತಹದರಲ್ಲಿ ಆ್ಯಂಡರ್ಸನ್ ಅವರ ದೃಢತೆಗೆ ದೊಡ್ಡ ಸಲಾಂ ಹೇಳಲೇ ಬೇಕು.
ಇದನ್ನೂ ಓದಿ Rohit Sharma: ಶತಕದ ಮೂಲಕ ಬರೋಬ್ಬರಿ 4 ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಅವರು ಭರ್ತಿ 800 ವಿಕೆಟ್ ಪಡೆದಿದ್ದಾರೆ. ಈ ಸಾರ್ವಕಾಲಿಕ ದಾಖಲೆ ಮುರಿಯಲು ಸದ್ಯಕ್ಕೆ ಯಾರಿಂದಲೂ ಸಾಧ್ಯವಾಗದು ಎಂದರೂ ತಪ್ಪಾಗಲಾರದು. ಆಸ್ಟ್ರೇಲಿಯಾದ ದಿವಂಗತ ಕ್ರಿಕೆಟಿಗ ಶೇನ್ ವಾರ್ನ್ ಅವರು 708 ಟೆಸ್ಟ್ ವಿಕೆಟ್ ಕಿತ್ತು ದ್ವಿತೀಯ ಸ್ಥಾನಿಯಾಗಿದ್ದಾರೆ. ಆ್ಯಂಡರ್ಸನ್ಗೆ ವಾರ್ನ್ ಅವರ ಟೆಸ್ಟ್ ವಿಕೆಟ್ ದಾಖಲೆ ಮುರಿಯುವು ಕಷ್ಟವಾಗದು. ಏಕೆಂದರೆ ಅವರು ಇನ್ನೊಂದು ವರ್ಷ ಕ್ರಿಕೆಟ್ ಆಡಿದರೂ ಈ ದಾಖಲೆ ಮುರಿಯಬಹುದು. ಈ ದಾಖಲೆಯನ್ನು ಮುರಿಯಲು ಅವರಿಗೆ ಬೇಕಿರುವುದು ಕೂಡ 8 ವಿಕೆಟ್ ಇದನ್ನು ಒಂದೆಡರು ಸರಣಿಯಲ್ಲಿ ಅವರು ಮಾಡುವ ವಿಶ್ವಾಶವಿದೆ.
2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜೇಮ್ಸ್ ಆ್ಯಂಡರ್ಸನ್ ಅವರು ಇಂಗ್ಲೆಂಡ್ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್ ಪರ ಅವರು 186 ಟೆಸ್ಟ್ ಪಂದ್ಯ ಆಡಿ 700* ವಿಕೆಟ್ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್ ಪಡೆದಿದ್ದಾರೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ
ಆಟಗಾರ | ದೇಶ | ವಿಕೆಟ್ |
ಮುತ್ತಯ್ಯ ಮುರಳೀಧರನ್ | ಶ್ರೀಲಂಕಾ | 800 |
ಶೇನ್ ವಾರ್ನ್ | ಆಸ್ಟ್ರೇಲಿಯಾ | 708 |
ಜೇಮ್ಸ್ ಆಂಡರ್ಸನ್ | ಇಂಗ್ಲೆಂಡ್ | 700* |
ಅನಿಲ್ ಕುಂಬ್ಳೆ | ಭಾರತ | 619 |
ಸ್ಟುವರ್ಟ್ ಬ್ರಾಡ್ | ಇಂಗ್ಲೆಂಡ್ | 604 |
ಗ್ಲೆನ್ ಮೆಕ್ಗ್ರಾತ್ | ಆಸ್ಟ್ರೇಲಿಯಾ | 563 |
ನಥಾನ್ ಲಿಯೊನ್ | ಆಸ್ಟ್ರೇಲಿಯಾ | 527* |
ಕರ್ಟ್ನಿ ವಾಲ್ಷ್ | ವೆಸ್ಟ್ ಇಂಡೀಸ್ | 519 |
ರವಿಚಂದ್ರನ್ ಅಶ್ವಿನ್ | ಭಾರತ | 511* |
ಡೇಲ್ ಸ್ಟೈನ್ | ದಕ್ಷಿಣ ಆಫ್ರಿಕಾ | 439 |