ಚೆನ್ನೈ: ಐಪಿಎಲ್ 2024 ಆವೃತ್ತಿಯ (IPL 2024 ) ಫೈನಲ್ನಲ್ಲಿ ಎಸ್ಆರ್ಎಚ್ ವಿರುದ್ಧ 8 ವಿಕೆಟ್ಗಳ ಸುಲಭ ವಿಜಯ ದಾಖಲಿಸಿದ ಕೆಕೆಆರ್ ಮೂರನೇ ಬಾರಿ ಟ್ರೋಫಿ ಗೆದ್ದುಕೊಂಡಿತ್ತು. ಈ ಹಿಂದೆ 2012 ಹಾಗೂ 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಟ್ರೋಫಿ ಗೆದ್ದಿತ್ತು. ಇದೀಗ ಮೂರನೇ ಬಾರಿ ಅವರ ತರಬೇತಿಯಲ್ಲಿ ತಂಡ ಕಪ್ ಗೆದ್ದಿತು. ಇದು ಐಪಿಎಲ್ ಇತಿಹಾಸದಲ್ಲಿ ಹೊಸ ಸಾಧನೆ. ಇದಕ್ಕೆಲ್ಲ ಕಾರಣ ಆ ತಂಡ ಶಿಸ್ತಿನ ಆಟ. ಟೂರ್ನಿಯುದ್ದಕ್ಕೂ ಅತ್ಯಂತ ಬದ್ಧತೆಯಿಂದ ಆಡಿತ್ತು. ಕೆಕೆಅರ್. ಅಂತೆಯೇ ಫೈನ್ಲ್ ಗೆಲುವು ಸುಲಭವಾಗಿಸಿದ್ದು ಕೆಕೆಆರ್ ಬೌಲರ್ಗಳು. ಅವರು ಎಸ್ಆರ್ಎಚ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಕಾರಣ ಬ್ಯಾಟರ್ಗಳಿಗೆ ಯಾವುದೆ ಹೊರೆ ಎನಿಸಲಿಲ್ಲ.
Janhvi Kapoor couldn't believe what she just witnessed 😱#KKRvSRH #TATAIPL #IPLonJioCinema #IPLFinalonJioCinema #IPLFinal pic.twitter.com/2QJvjxApRg
— JioCinema (@JioCinema) May 26, 2024
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರು ಬಳಸಿದ ಎಲ್ಲಾ ಆರು ಬೌಲರ್ಗಳು ವಿಕೆಟ್ಗಳನ್ನು ಪಡೆದಿದ್ದರಿಂದ ಅವರ ನಾಯಕತ್ವವು ಗಮನಾರ್ ಎನಿಸಿತುಮಿಚೆಲ್ ಸ್ಟಾರ್ಕ್ ಮೊದಲ ಓವರ್ನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಕೆಕೆಆರ್ಗೆ ದೊಡ್ಡ ಮುನ್ನಡೆ ನೀಡಿದರು. ವೈಭವ್ ಅರೋರಾ ತಮ್ಮ ಮೊದಲ ಓವರ್ನಲ್ಲೇ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಸನ್ರೈಸರ್ಸ್ ಹೈದರಾಬಾದ್ 113 ರನ್ಗಳಿಗೆ ಆಲೌಟ್ ಆಯಿತು.
ಕೆಕೆಆರ್ ಪರ ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದರು. ಅಂತೆಯೇ 16 ನೇ ಓವರ್ ಎಸೆಯಲು ಬಂದ ನರೈನ್ ಅವರು ಪ್ಯಾಟ್ ಕಮಿನ್ಸ್ ಅವರಿಗೆ ತಪ್ಪು ಶಾಟ್ ಅನ್ನು ಪ್ರಚೋದಿಸಿದರು. ಈ ವೇಳೆ ಆಸ್ಟ್ರೇಲಿಯಾದ ಸಹ ಆಟಗಾರ ಮಿಚೆಲ್ ಸ್ಟಾರ್ಕ್ ಅವರನ್ನು ಲಾಂಗ್ ಆನ್ ಬೌಂಡರಿಯಲ್ಲಿ ಕೈಬಿಟ್ಟರು. ಆದರೆ ಸ್ಟಾರ್ಕ್ ಸುಲಭ ಕ್ಯಾಚ್ ಬಿಟ್ಟುಕೊಟ್ಟರು. ಈ ವೇಳೆ ಗ್ಯಾಲರಿಯಲ್ಲಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ಪ್ರತಿಕ್ರಿಯೆ ಕ್ಯಾಮೆರಾ ಕಣ್ಣಿಗೆ ಸೆಳೆಯಿತು.
ಇದನ್ನೂ ಓದಿ: Pat Cummins : ಆಸೀಸ್ ನಾಯಕನ ಫೈನಲ್ ಗೆಲುವಿನ ಓಟ ಬಂದ್!
ಅಂತಿಮವಾಗಿ 18ನೇ ಓವರ್ನಲ್ಲಿ ಉನಾದ್ಕಟ್ ಅವರನ್ನು ಔಟ್ ಮಾಡುವಲ್ಲಿ ನರೈನ್ ಯಶಸ್ವಿಯಾದರು. ಕುತೂಹಲಕಾರಿ ಸಂಗತಿಯೆಂದರೆ ಎಸ್ಆರ್ಎಚ್ ನಾಯಕ ಪ್ಯಾಟ್ ಕಮಿನ್ಸ್ 24 ರನ್ ಗಳಿಸಿ ಆ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಂತಿಮವಾಗಿ ಅವರನ್ನು ಲಾಂಗ್ ಆನ್ ಬೌಂಡರಿಯಲ್ಲಿ ಮಿಚೆಲ್ ಸ್ಟಾರ್ಕ್ ಹಿಡಿದರು, ಅವರು ಅವರನ್ನು ಈ ಹಿಂದೆ ಕೈಬಿಟ್ಟರು.
ಫೈನಲ್ನಲ್ಲಿ ಕೆಕೆಆರ್ ಬೌಲರ್ಗಳ ಬೌಲಿಂಗ್ ಪ್ರದರ್ಶನ ಗಮನಾರ್ಹವಾಗಿತ್ತು. ಬ್ಯಾಟರ್ಗಳಿಗೆ ಸುಲಭವಾಗಿ ಗುರಿ ಬೆನ್ನಟ್ಟಲು ನೆರವಾದರು.
ಕಳಪೆ ಮೊತ್ತದ ದಾಖಲೆ
ಚೆನ್ನೈ: ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ (IPL 2024 Final) ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 113 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಕಳಪೆ ದಾಖಲೆಯನ್ನು ಬರೆಯಿತು. ಅಲ್ಲದೆ 11 ವರ್ಷಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ನಲ್ಲಿ 125ರನ್ಗಳಿಗೆ 9 ಕಳೆದುಕೊಂಡ ಕಳಪೆ ದಾಖಲೆಯನ್ನು ಮುರಿಯಿತು.
ಬೆಂಗಳೂರು ವಿರುದ್ಧದ ಲೀಗ್ ಪಂದ್ಯದಲ್ಲಿ 3 ವಿಕೆಟ್ಗೆ 287 ಸ್ಕೋರ್ ಮಾಡುವ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಿದ ಎಸ್ಆರ್ಎಚ್ ಬ್ಯಾಟರ್ಗಳು ಈ ಋತುವಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕಡಿಮೆ ಮೊತ್ತಕ್ಕೆ ಔಟಾದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಹಾಗೂ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ 2024 ಫೈನಲ್ನಲ್ಲಿ ಕೆಕೆಆರ್ ತಂಡ ಎಲ್ಲ ಬೌಲರ್ಗಳು ವಿಕೆಟ್ ಪಡೆದರು.
ಐಪಿಎಲ್ ಫೈನಲ್ನಲ್ಲಿ ಕನಿಷ್ಠ ಮೊತ್ತ
113/10 – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ – 2024
125/9 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2013
128/6 – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2016
129/8 – ಮುಂಬೈ ಇಂಡಿಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 2017
130/9 – ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ – 2022