Site icon Vistara News

CWG- 2022 | ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಜಾಸ್ಮಿನ್‌ ಲಂಬೊರಿಯಾ

CWg-2022

ಬರ್ಮಿಂಗ್ಹಮ್‌ : ಭಾರತದ ಮಹಿಳಾ ಬಾಕ್ಸರ್‌ ಜಾಸ್ಮಿನ್‌ ಲಂಬೊರಿಯಾ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಗೇಮ್ಸ್‌-೨೦೨೨ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತದ ಕಂಚಿನ ಪದಕಗಳ ಸಂಖ್ಯೆ ೧೦ಕ್ಕೇರಿದ್ದು, ಒಟ್ಟು ಪದಕಗಳು ೩೦ರ ಗಡಿ ತಲುಪಿದೆ.

ಶನಿವಾರ ನಡೆದ ೫೭ರಿಂದ ೬೦ ಕೆ.ಜಿ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಅವರು ಇಂಗ್ಲೆಂಡ್‌ನ ಗೆಮ್ಮಾ ಪೈಗೆ ವಿರುದ್ಧ ಜಯ ಸಾಧಿಸಿ ಪದಕ ತಮ್ಮದಾಗಿಕೊಂಡರು. ಜಾಸ್ಮಿನ್ ಅವರು ಬಾಕ್ಸಮ್‌ ಇಂಟರ್‌ನ್ಯಾಷನಲ್‌ನಲ್ಲಿ ಬೆಳ್ಳಿ ಪದಕ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಆರಂಭದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಜಾಸ್ಮಿನ್‌ ಪದಕ ಗೆಲ್ಲುವ ಜತೆಗೆ ಬಾಕ್ಸಿಂಗ್‌ನಲ್ಲಿ ಅಧಿಕೃತವಾಗಿ ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿ ಎನಿಸಿಕೊಂಡರು.

Exit mobile version