ಮುಂಬಯಿ: ರಿಲಯನ್ಸ್ ರಿಟೇಲ್ನ ಕ್ರೀಡಾ ಉಡುಪು ಪರ್ಫಾರ್ಮ್ಯಾಕ್ಸ್ (Performax), ಸ್ಟಾರ್ ಕ್ರಿಕೆಟರ್ ಹಾಗೂ ಭಾರತ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.
ಪರ್ಫಾರ್ಮ್ಯಾಕ್ಸ್ ಭಾರತೀಯ ಬ್ರಾಂಡ್ ಆಗಿದ್ದು, ದೇಶದ ನಂ.1 ಕ್ರೀಡಾ ಉಡುಪು ಬ್ರ್ಯಾಂಡ್ ಆಗಿ ಹೊರಹೊಮ್ಮುವ ಗುರಿ ಹೊಂದಿದೆ. ಬುಮ್ರಾ ಮತ್ತು ಪರ್ಫಾರ್ಮ್ಯಾಕ್ಸ್ ಬದ್ಥತೆ ಮತ್ತು ಪರಿಣಿತಿಗೆ ಹೆಸರಾಗಿದ್ದಾರೆ. ಹೀಗಾಗಿ, ಬ್ರಾಂಡ್ಗೆ ಬುಮ್ರಾ ಹೊಂದುತ್ತಾರೆ ಎಂದು ಕಂಪನಿ ಹೇಳಿದೆ.
ರಿಲಯನ್ಸ್ ರಿಟೇಲ್ನ ಫ್ಯಾಷನ್ ಮತ್ತು ಲೈಫ್ಸ್ಟೈಲ್ನ ಸಿಇಒ ಅಖಿಲೇಶ್ ಪ್ರಸಾದ್ ಮಾತನಾಡಿ “ಜಸ್ಪ್ರೀತ್ ಬುಮ್ರಾ ಜೊತೆಗೆ ನಮ್ಮ ಸಹಭಾಗಿತ್ವ ಪ್ರಕಟಿಸುವುದಕ್ಕೆ ಹೆಮ್ಮೆಯಾಗುತ್ತಿದೆ. ಜಸ್ಪ್ರಿತ್ ಹಲವು ವರ್ಷಗಳಿಂದಲೂ ಭಾರತ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ, ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಭಾರತದ ನಂ.1 ಕ್ರೀಡಾ ಬ್ರಾಂಡ್ ಆಗಿ ಪರ್ಫಾರ್ಮ್ಯಾಕ್ಸ್ ಅನ್ನು ರೂಪಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಪರ್ಫಾರ್ಮ್ಯಾಕ್ಸ್ ಅನ್ನು ನಮ್ಮ ಗ್ರಾಹಕರಿಗೆ ಉತ್ತಮ ಮತ್ತು ಆದ್ಯತೆಯ ಬ್ರ್ಯಾಂಡ್ ಆಗಿಸುವ ನಿಟ್ಟಿನಲ್ಲಿ ನಾವು ಇಡುತ್ತಿರುವ ಹೆಜ್ಜೆಗಳಲ್ಲಿ ಇದು ಮೊದಲನೆಯದು.” ಎಂದು ಹೇಳಿದರು.
ಜಸ್ಪ್ರಿತ್ ಬುಮ್ರಾ ಮಾತನಾಡಿ “ಕ್ರೀಡಾಳುವಾಗಿ ನಾನು ಧರಿಸುವ ಉಡುಪಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ. ಸರಿಯಾಗಿ ಫಿಟ್ ಆಗಿರುವ ಉಡುಪು ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ. ಪರ್ಫಾರ್ಮ್ಯಾಕ್ಸ್ನಲ್ಲಿ ತಾಂತ್ರಿಕವಾಗಿ ಸುಧಾರಿತ ಆಕ್ಟಿವ್ ವೇರ್ನ ಹಲವು ವಿಧಗಳಿವೆ. ಇವು ಭಾರತದ ಮುಂದಿನ ತಲೆಮಾರಿನ ಅಥ್ಲೀಟ್ಗಳಿಗೆ ಉತ್ತಮ ಸಂಗಾತಿಯಾಗಬಲ್ಲವು. ಉತ್ತಮ ಸಾಧನೆ ಮಾಡಬೇಕು ಎಂಬ ನನ್ನ ಧ್ಯೇಯಕ್ಕೂ ಈ ಬ್ರಾಂಡ್ನ ಧ್ಯೇಯಕ್ಕೂ ಹೊಂದಿಕೆ ಆಗುವುದರಿಂದ ಇದರ ಜೊತೆಗೆ ನಾನು ಗುರುತಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ,” ಎಂದು ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಮೂಲಕ ಗ್ರಾಹಕರನ್ನು ತಲುಪುವುದರ ಜತೆಗೆ, ರಿಲಯನ್ಸ್ ರಿಟೇಲ್ನ ಫ್ಯಾಷನ್ ಮತ್ತು ಲೈಫ್ಸ್ಟೈಲ್ ಸ್ಟೋರ್ಗಳಲ್ಲಿ ಎಕ್ಸ್ಕ್ಲೂಸಿವ್ ಬ್ರಾಂಡ್ ಔಟ್ಲೆಟ್ಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಮಲ್ಟಿ ಬ್ರಾಂಡ್ ಔಟ್ಲೆಟ್ಗಳಲ್ಲೂ ಕಾಣಿಸಿಕೊಳ್ಳಲಿದೆ. ಅಷ್ಟೇ ಅಲ್ಲ, ಡಿಜಿಟಲ್ ಪ್ಲಾಟ್ಫಾರಂಗಳಲ್ಲೂ ಇದು ಲಭ್ಯವಿರುತ್ತದೆ.
ಪರ್ಫಾರ್ಮ್ಯಾಕ್ಸ್ ರಿಲಯನ್ಸ್ ರಿಟೇಲ್ನ ಸ್ವಂತ ಬ್ರ್ಯಾಂಡ್ ಆಗಿದ್ದು, ಆಕ್ಟಿವ್ ವೇರ್ ಸಾಮಗ್ರಿಗಳಲ್ಲಿ ವಿಶೇಷ ಪರಿಣಿತಿ ಹೊಂದಿದೆ ಮತ್ತು ಪಾದರಕ್ಷೆ, ಉಡುಪು ಮತ್ತು ಅಕ್ಸೆಸರಿಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒದಗಿಸುತ್ತದೆ. ಪ್ರಸ್ತುತ 330 ಕ್ಕೂ ಹೆಚ್ಚು ನಗರಗಳಲ್ಲಿ 1000 ಕ್ಕೂ ಹೆಚ್ಚು ಸ್ಟೋರ್ಗಳಲ್ಲಿ ಬ್ರಾಂಡ್ ಅಸ್ತಿತ್ವ ಹೊಂದಿದೆ.
ಇದನ್ನೂ ಓದಿ | ASIA Cup | ಹರ್ಷಲ್, ಬುಮ್ರಾ ಅಲಭ್ಯತೆಯಿಂದ ಪಾಕಿಸ್ತಾನ ತಂಡ ನಿರಾಳವಾಗಿದೆ ಎಂದ ಇರ್ಫಾನ್ ಪಠಾಣ್