ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹಾಗೂ ಟೆಸ್ಟ್ ತಂಡದ ಹಂಗಾಮಿ ನಾಯಕ ಜಸ್‌ಪ್ರಿತ್ ಬುಮ್ರಾ ಟೆಸ್ಟ್ ಮಾದರಿಯಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಆದರೆ, ಅದು ಬೌಲಿಂಗ್‌ನಲ್ಲಿ ಅಲ್ಲ, ಬ್ಯಾಟಿಂಗ್‌ನಲ್ಲಿ. ಓವರ್ ಒಂದರಲ್ಲಿ ಗರಿಷ್ಠ (೩೫ ರನ್) ಬಾರಿಸುವ ಮೂಲಕ ಅವರು world record ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಎರಡನೇ ದಿನದಾಟದ ಮೊದಲ ಅವಧಿಯ ೧೮ನೇ ಓವರ್ ಎಸೆದ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಬುಮ್ರಾ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಬುಮ್ರಾ ೪ ಫೋರ್‌ಗಳು, ೨ ಸಿಕ್ಸರ್‌ಗಳು ಹಾಗೂ ಒಂದು ಸಿಂಗಲ್ ರನ್ ಪಡೆದುಕೊಂಡಿದ್ದಾರೆ. ಇದರ ಜತೆಗೆ ಬ್ರಾಡ್ ಆರು ೬ ಇತರ ರನ್‌ಗಳನ್ನೂ ನೀಡಿದ್ದಾರೆ.
೨೦೦೭ರಲ್ಲಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಭಾರತ ತಂಡದ ಆಲ್‌ರೌಂಡರ್ ಯುವರಾಜ್ ಸಿಂಗ್ ಸತತ ಆರು ಸಿಕ್ಸರ್‌ಗಳ ಸಮೇತ ೩೬ ರನ್ ಬಾರಿಸಿದ್ದರು. ಇದೀಗ ಅವರದ್ದೇ ಓವರ್‌ನಲ್ಲಿ ಟೆಸ್ಟ್ ಮಾದರಿಯಲ್ಲಿ ಬುಮ್ರಾ ೩೫ ರನ್ ಬಾರಿಸಿದ್ದಾರೆ.
ಅಪಖ್ಯಾತಿಗೆ ಒಳಗಾದ ಬ್ರಾಡ್
ಇದೇ ವೇಳೆ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಟೆಸ್ಟ್ ಪಂದ್ಯದ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಅಪಖ್ಯಾತಿಗೆ ಒಳಗಾದರು. ಅವರ ಓವರ್‌ನಲ್ಲಿ ಬುಮ್ರಾ ೨೯ ರನ್ ಬಾರಿಸಿದ ಹೊರತಾಗಿಯೂ ಬ್ರಾಡ್ ೬ ಇತರ ರನ್‌ಗಳನ್ನು ನೀಡುವ ಮೂಲಕ ನಿರಾಸೆಗೆ ಒಳಗಾದರು. ಈ ಹಿಂದೆ ೨೦೦೩ರಲ್ಲಿ ಪೀಟರ್ಸನ್ ಎಸೆತಕ್ಕೆ ಬ್ರಿಯಾನ್ ಲಾರಾ ೨೮ ರನ್ ಬಾರಿಸಿದ್ದು ಇದುವರೆಗಿನ ಗರಿಷ್ಠ ರನ್ ಆಗಿತ್ತು.
ಟೆಸ್ಟ್‌ನಲ್ಲಿ ಓವರ್ ಒಂದರಲ್ಲಿ ದಾಖಲಾದ ಗರಿಷ್ಠ ರನ್‌ಗಳು
- ಸ್ಟುವರ್ಟ್ ಬ್ರಾಡ್ ಎಸೆತಕ್ಕೆ ಜಸ್‌ಪ್ರಿತ್ ಬುಮ್ರಾ ೩೫ ರನ್ ಬಾರಿಸಿದ್ದಾರೆ.
- ೨೦೦೩ರಲ್ಲಿ ಪೀಟರ್ಸನ್ ಎಸೆತಕ್ಕೆ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ ೨೮ ರನ್ ಬಾರಿಸಿದ್ದರು.
- ೨೦೧೩ರಲ್ಲಿ ಆಂಡರ್ಸನ್ ಎಸೆತಕ್ಕೆ ಬೈಲಿ ೨೮ ರನ್ ಬಾರಿಸಿದ್ದರು.
- ೨೦೨೦ರಲಿ ಜೋ ರೂಟ್ ಎಸೆತಕ್ಕೆ ಕೇಶವ್ ಮಹಾರಾಜಾ ೨೮ ರನ್ ಬಾರಿಸಿದ್ದರು.
ಇದನ್ನೂ ಓದಿ: England Tour: ಬುಮ್ರಾ ನಾಯಕನಾದರೆ ಭಾರತ ತಂಡಕ್ಕೆ ಅನುಕೂಲವೇನು?