Site icon Vistara News

Jasprit Bumrah : ಜಸ್​ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್​​ನ ಅತ್ಯುತ್ತಮ ಬೌಲರ್​ ಎಂದು ಹೊಗಳಿದ ಮೈಕಲ್ ವಾನ್

Jasprit Bumrah

ಬೆಂಗಳೂರು: ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29 ರಂದು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತವು ಎರಡನೇ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದಿತು. ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸ್​ಪ್ರಿತ್ ಬುಮ್ರಾ (Jasprit Bumrah ) ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ಗೆಲುವಿನಲ್ಲಿ ಬುಮ್ರಾ ಮುಂಚೂಣಿ ಸ್ಥಾನ ಪಡೆದಿದ್ದರು. ಆಗಾಗ ನಿರ್ಣಾಯಕ ಪ್ರಗತಿಯನ್ನು ಒದಗಿಸಿದ್ದರು. ಭಾರತದ ಸ್ಟಾರ್ ವೇಗಿ ಟಿ 20 ವಿಶ್ವಕಪ್ ಆವೃತ್ತಿಯಲ್ಲಿ ಯಾವುದೇ ಬೌಲರ್​​ಗೆ ಕಡಿಮೆ ಇಲ್ಲದ ಎಕಾನಮಿ ರೇಟ್ ಪ್ರದರ್ಶಿಸಿದರು. ಅವರು 8.26 ಸರಾಸರಿ ಮತ್ತು 4.17 ಎಕಾನಮಿ ರೇಟ್​​​ನಲ್ಲಿ 15 ವಿಕೆಟ್​ ಉರುಳಿಸಿ ಭಾರತದ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಫೈನಲ್​​ನಲ್ಲಿ ಹೆನ್ರಿಕ್ ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸಿದ್ದರಿಂದ ದಕ್ಷಿಣ ಆಫ್ರಿಕಾ ಗೆಲುವಿನತ್ತ ಸಾಗಿತ್ತು. ಬುಮ್ರಾ ತಮ್ಮ ಅತ್ಯುತ್ತಮ ಸ್ಪೆಲ್ ಅನ್ನು ಕಾರ್ಯಗತಗೊಳಿಸಿದರು. ಅವರು ತಮ್ಮ ನಾಲ್ಕು ಓವರ್ ಗಳಲ್ಲಿ ಕೇವಲ 18 ರನ್ ನೀಡಿ ಎರಡು ವಿಕೆಟ್ ಪಡೆದರು. ಕೊನೆಯ ಐದು ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಹುತೇಕ ಒಂದು ಎಸೆತಕ್ಕೆ ಒಂದು ರನ್​ ಅಗತ್ಯವಿತ್ತು. ವೇಗಿ ಎರಡು ಓವರ್​ಗಳನ್ನು ಎಸೆದು ಕ್ರಮವಾಗಿ ಒಂದು ಮತ್ತು ಆರು ರನ್​​ ನೀಡಿದರು. ಈ ಸಾಧನೆಗಾಗಿ ಇಂಗ್ಲೆಂಡ್​​ನ ಮಾಜಿ ನಾಯಕ ಮೈಕಲ್ ವಾನ್ ಬುಮ್ರಾ ಅವರನ್ನು ಪಾಕಿಸ್ತಾನದ ಮಾಜಿ ಬೌಲರ್​ ವಾಸಿಂ ಅಕ್ರಮ್​ಗೆ ಸರಿಸಮಾನರು ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

“ಅವರು ಉತ್ತಮ ಬೌಲರ್, ಅವರು ಎಲ್ಲಾ ವಿಭಿನ್ನ ಬ್ಯಾಟರ್​ಗಳ ವಿರುದ್ಧ ಬೌಲಿಂಗ್ ಮಾಡಲು ಯೋಜನೆ ಹೊಂದಿದ್ದಾರೆ. ಅದಕ್ಕಾಗಿ ಅವರು ಕೌಶಲ ಹೊಂದಿದ್ದಾರೆ. ಯಾವ ಎಸೆತವನ್ನು ಯಾವಾಗ ಎಸೆಯಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ನನ್ನ ಪ್ರಕಾರ ಉತ್ತಮ ಸೀಮ್ ಬೌಲರ್ ಎಂದು ಹೇಳುವುದಾದರೆ ಮಾಜಿ ಆಟಗಾರ ವಾಸಿಮ್ ಅಕ್ರಮ್ ವಿಶೇಷ. ಆದರೆ, ಅದಕ್ಕೆ ಸಮಾನಾಗಿದ್ದಾರೆ ಬುಮ್ರಾ. ಬುಮ್ರಾ ಅದ್ಭುತ ಆ್ಯಕ್ಷನ್ ಸಾಮರ್ಥ್ಯವನ್ನು ಹೊಂದಿದ್ದಾರೆ ಹಾಗೂ ವೇಗವನ್ನೂ ಹೊಂದಿದ್ದಾರೆ/ ಅವರು ಎಲ್ಲಾ ವಿಭಿನ್ನ ತಾಂತ್ರಿಕತೆಯನ್ನೂ ಹೊಂದಿದ್ದು ಎದುರಾಳಿಯನ್ನು ಒತ್ತಡದಲ್ಲಿ ಇಡುತ್ತಾರೆ. ಇದು ವಿಶ್ವಕಪ್​ನಲ್ಲಿ ಕೇವಲ ಎರಡು ಅಥವಾ ಮೂರು ಬಾರಿ ಅಲ್ಲ. ಇದು ಪ್ರತಿಯೊಂದು ಪಂದ್ಯದಲ್ಲೂ ಆಗಿದೆ “ಎಂದು ವಾನ್ ತಿಳಿಸಿದ್ದಾರೆ.

ನನ್ನದು ಪ್ರಾಮಾಣಿಕ ಅಭಿಪ್ರಾಯ : ವಾನ್

ಫೈನಲ್ ಪಂದ್ಯದಲ್ಲಿ ರೀಜಾ ಹೆಂಡ್ರಿಕ್ಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತ ಪರ ಬೌಲಿಂಗ್ ದಾಳಿ ಪ್ರಾರಂಭಿಸಿದ ಬುಮ್ರಾ, ಪವರ್ ಪ್ಲೇನಲ್ಲಿ ವಿಶೇಷವಾಗಿ ಅತ್ಯುತ್ತಮವಾಗಿ ಅಡಿದ್ದರು. ಈ ಎಸೆತವನ್ನು ಪ್ರಸಾರಕರು ಪ್ರಸಾರ ಮಾಡದೇ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಾರ್ಕೊ ಜಾನ್ಸೆನ್ ಅವರನ್ನು ಔಟ್​ ಮಾಡಿದ್ದಂತೂ ಅದ್ಭುತ. ಹೀಗಾಗಿ ನನ್ನ ಪ್ರಾಮಾಣಿಕ ಅಭಿಪ್ರಾಯದ ಪ್ರಕಾರ ಬುಮ್ರಾ ಆಧುನಿಕ ಯುಗ ಬೆಸ್ಟ್​ ಬೌಲರ್​.

Exit mobile version