Site icon Vistara News

Ind vs Eng : ನಾಲ್ಕನೇ ಟೆಸ್ಟ್​ಗೆ ಜಸ್​ಪ್ರಿತ್ ಬುಮ್ರಾ ಬಿಡುಗಡೆ ​, ರಾಹುಲ್ ಔಟ್​

Jasprit Bumrah

ರಾಂಚಿ: ಇಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ (Ind vs Eng) ಮುಂಚಿತವಾಗಿ ಭಾರತ ತಂಡವು ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಕಾರ್ಯದೊತ್ತಡ ನಿರ್ವಹಣೆಗೆ ಎಂದು ಉಲ್ಲೇಖಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬೆಳವಣಿಗೆಯನ್ನು ದೃಢಪಡಿಸಿದೆ. ಈವರೆಗೆ ನಡೆದಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ 17 ವಿಕೆಟ್​ಗಳನ್ನು ಪಡೆದಿರುವ ಬುಮ್ರಾ 100 ಕ್ಕೂ ಹೆಚ್ಚು ಓವರ್​ಗಳನ್ನು ಎಸೆದಿದ್ದಾರೆ. ಹೀಗಾಗಿ ಮ್ಯಾನೇಜ್ಮೆಂಟ್ ಜೂನ್​ನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ಪರಿಗಣಿಸಿ ಬೌಲರ್​ಗೆ ವಿಶ್ರಾಂತಿ ನೀಡಲು ಬಯಸಿದೆ.

ಬೆನ್ನುನೋವು ಮತ್ತು ಶಸ್ತ್ರಚಿಕಿತ್ಸೆಯಿಂದಾಗಿ ಬುಮ್ರಾ ಒಂದು ವರ್ಷಕ್ಕೂ ಹೆಚ್ಚು ಕಾಲ ತಂಡದಿಂದ ಹೊರಗುಳಿದಿದ್ದರು. ಬಳಿಕ ಎಚ್ಚರಿಕೆಯಿಂದ ತಂಡಕ್ಕೆ ಮರಳಿದ್ದರು. ಅವರು ಐರ್ಲೆಂಡ್​ನಲ್ಲಿ ಮೂರು ಟಿ 20ಐ ಪಂದ್ಯಗಳನ್ನು ಆಡಿದ್ದರು. ಬಳಿಕ ಐಸಿಸಿ ವಿಶ್ವಕಪ್ 2023 ಗೆ ಆಯ್ಕೆಯಾದರು. ಅವರು ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್ ಬಾಲ್ ಪಂದ್ಯಗಳಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ದೀರ್ಘಕಾಲದ ನಂತರ ಅವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಎರಡು ಪಂದ್ಯಗಳಲ್ಲಿ 12 ವಿಕೆಟ್​ಗಳನ್ನು ಪಡೆದಿದ್ದರು.

ಇದನ್ನೂ ಓದಿ : Virat Kohli : ವಿರಾಟ್​ ಕೊಹ್ಲಿ, ಅನುಷ್ಕಾ ದಂಪತಿಗೆ ಗಂಡು ಮಗು; ಹೆಸರು ಅಕಾಯ್​​

ಬುಮ್ರಾ ಹೈದರಾಬಾದ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್​ ಪಂದ್ಯದಲ್ಲಿ ಅವರು ಪ್ರಭಾವ ಬೀರಿದ್ದಾರೆ. ಆದಾಗ್ಯೂ ರೋಹಿತ್ ಶರ್ಮಾ ನೇತೃತ್ವದ ತಂಡವು 28 ರನ್​ಗಳಿಂದ ಸೋಲನುಭವಿಸಿತು. ವೈಜಾಗ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ವೇಗದ ಬೌಲರ್ 9 ವಿಕೆಟ್​​ ಪಡೆದರು. ಆತಿಥೇಯ ರಾಷ್ಟ್ರವು ಪಂದ್ಯವನ್ನು 106 ರನ್​ಳಿಂದ ಗೆದ್ದಿತು. ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೂರನೇ ಪಂದ್ಯದಲ್ಲಿ ಅವರು ನಿರ್ಣಾಯಕ ವಿಕೆಟ್​ಗಳನ್ನು ಪಡೆದಿದದರು. ಭಾರತವು 434 ರನ್​ಗಳ ಗೆಲುವು ದಾಖಲಿಸಿತ್ತು.

ರಾಹುಲ್​ ಔಟ್​

4ನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರ ಭಾಗವಹಿಸುವಿಕೆ ಫಿಟ್ನೆಸ್​ಗೆ ಒಳಪಟ್ಟಿರುತ್ತದೆ. ಅವರು ಈಗಾಗಲೇ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಬಲಗೈ ಬ್ಯಾಟರ್​​ ಹೈದರಾಬಾದ್ ಟೆಸ್ಟ್​​​ನ ಪ್ಲೇಯಿಂಗ್ ಇಲೆವೆನ್​​ನ ಭಾಗವಾಗಿದ್ದರು. ಈ ವೇಳೆ ಗಾಯಗೊಂಡಿದ್ದರು. ರಣಜಿ ಟ್ರೋಫಿ 2024 ರಲ್ಲಿ ಬಂಗಾಳ ಪರ ಆಡಲು ಅನುವು ಮಾಡಿಕೊಡಲು ರಾಜ್ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್​ ತಂಡದಿಂದ ಬಿಡುಗಡೆಯಾದ ಮುಖೇಶ್ ಕುಮಾರ್ ರಾಂಚಿಯಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

ಭಾರತ ತಂಡ ಈ ರೀತಿ ಇದೆ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Exit mobile version