Site icon Vistara News

Jasprit Bumrah: ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಬುಮ್ರಾ!

Jasprit Bumrah

ಮುಂಬಯಿ: ಐಸಿಸಿ ಟೆಸ್ಟ್​ ಬೌಲಿಂಗ್​ ಶ್ರೇಯಾಂಕದಲ್ಲಿ(ICC Test Rankings) ನಂ.1 ಸ್ಥಾನಕ್ಕೇರಿದ ಕೆಲವೇ ಕ್ಷಣದಲ್ಲಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ತಮ್ಮ ಇನ್​ಸ್ಟಾಗ್ರಾಮ್(jasprit bumrah instagram)​ ಖಾತೆಯಲ್ಲಿ ಸ್ಟೋರಿಯೊಂದನ್ನು ಹಾಕಿದ್ದರು. ಈ ಸ್ಟೋರಿಯ ಫೋಟೊ ಇದೀಗ ವೈರಲ್​ ಆಗಿದೆ.

ಬುಮ್ರಾ ಸ್ಟೋರಿಯಲ್ಲಿ ಏನಿದೆ?


ಬುಮ್ರಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪ್ರೇಕ್ಷಕರಿಂದ ಭರ್ತಿಯಾದ ಗ್ಯಾಲರಿಯ ಮತ್ತು ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಕುಳಿತಿರುವ ಫೋಟೋವನ್ನು ಪ್ರಕಟಿಸಿ ‘ಸಪೋರ್ಟ್ ಮತ್ತು ಕಂಗ್ರಾಜ್ಯುಲೇಷನ್ಸ್'(ಬೆಂಬಲ ಮತ್ತು ಅಭಿನಂದನೆಗಳು) ಎಂದು ಬರೆದುಕೊಂಡಿದ್ದಾರೆ. ಇದರ ಒಳಾರ್ಥವೇನು ಎನ್ನುವುದು ತಿಳಿದಿಲ್ಲಿ. ಆದರೂ ಕೂಡ ನೆಟ್ಟಿಗರು ಈ ಪೋಸ್ಟ್​ಗೆ ಸೋತಾಗ ಯಾರೂ ಇರಲ್ಲ, ಗೆದ್ದಾಗ ಎಲ್ಲರೂ ಅಭಿನಂದಿಸುತ್ತಾರೆ ಎಂಬ ಅರ್ಥವನ್ನು ಕಲ್ಪಿಸಿದ್ದಾರೆ.

ಇನ್ನು ಕೆಲವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮೇಲಿನ ಅಸಮಾಧಾನವನ್ನು ಈ ರೀತಿ ಬುಮ್ರಾ ಹೊರಹಾಕಿರಬಹುದು ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್​ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ ಕಾರಣವನ್ನು ತಂಡದ ಕೋಚ್​ ಬೌಚರ್​ 2 ದಿನಗಳ ಹಿಂದೆ ಬಹಿರಂಗಪಡಿಸಿದ್ದರು. ಹೀಗಾಗಿ ಬುಮ್ರಾ ಈ ಪೋಸ್ಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮತ್ತು ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ. ಒಟ್ಟಿನಲ್ಲಿ ಬುಮ್ರಾ ಹಾಕಿದ ಈ ಸ್ಟೋರಿ ಜನರ ತಲೆಯಲ್ಲಿ ಹುಳಬಿಟ್ಟಂತೆ ಮಾಡಿದೆ.

ಇಂಗ್ಲೆಂಡ್​ ವಿರುದ್ಧದ 2 ಟೆಸ್ಟ್ ಪಂದ್ಯಗಳು ಸೇರಿ ಒಟ್ಟು 57 ಓವರ್​ ಬೌಲಿಂಗ್​ ನಡೆಸಿದ ಬುಮ್ರಾ ಅವರ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೂರನೇ ಟೆಸ್ಟ್​ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ Jasprit Bumrah: ನಂ.1 ಸ್ಥಾನ ಅಲಂಕರಿಸಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಬುಮ್ರಾ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಟೆಸ್ಟ್​ನಲ್ಲಿ ಅಗ್ರಸ್ಥಾನ ಪಡೆದ ಭಾರತದ ಮೊದಲ ವೇಗಿ ಎಂಬ ಹಿರಿಮೆಗೆ ಬುಮ್ರಾ ಪಾತ್ರರಾಗಿದ್ದಾರೆ. ಇದಲ್ಲದೆ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಂ.1ಸ್ಥಾನ ಪಡೆದ ವಿಶ್ವದ ಮೊದಲ ಬೌಲರ್​ ಎಂಬ ವಿಶ್ವ ದಾಖಲೆಯನ್ನು ಜಸ್​ಪ್ರೀತ್​ ಬುಮ್ರಾ ತಮ್ಮ ಹೆಸರಿಗೆ ಸೇರಿಸಿಕೊಂಡರು. ಒಟ್ಟಾರೆಯಾಗಿ ಮೂರು ಸ್ವರೂಪದಲ್ಲಿ ಅಗ್ರಸ್ಥಾನ ಸಂಪಾದಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ವಿರಾಟ್​ ಕೊಹ್ಲಿಗೆ ಮೊದಲ ಸ್ಥಾನ. ವಿರಾಟ್​ ಕೊಹ್ಲಿ ಅವರು ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅಗ್ರಸ್ಥಾನ ಪಪಡೆದಿದ್ದರು.

ಇದುವರೆಗಿನ ಟೆಸ್ಟ್​ ಬೌಲಿಂಗ್​ ಶ್ರೇಯಾಂಕದಲ್ಲಿ ಭಾರತದ ಸ್ಪಿನ್ ಬೌಲರ್​ಗಳು ಅಗ್ರಸ್ಥಾನ ಪಡೆದಿದ್ದರು. ಆದರೆ ವೇಗಿಗಳು ಈ ಸಾಧನೆ ಮಾಡಿರಲಿಲ್ಲ. ಇದೀಗ ಬುಮ್ರಾ ಈ ಸಾಧನೆ ಮಾಡಿದರೆ. ಟೆಸ್ಟ್​ನಲ್ಲಿ ಅಗ್ರಸ್ಥಾನ ಪಡೆದ ಭಾರತದ ಮೊದಲ ವೇಗಿ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ 150 ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಭಾರತದ ವೇಗದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬುಮ್ರಾ, ಇಂಗ್ಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ 32 ಓವರ್​ ಬೌಲಿಂಗ್​ ನಡೆಸಿ ಒಟ್ಟು 9 ವಿಕೆಟ್​ ಉರುಳಿಸಿದ್ದರು. ಈ ಪ್ರದರ್ಶನದಿಂದ ಅವರು ಅಗ್ರಸ್ಥಾನ ಪಡೆದರು. ಸದ್ಯ ಅವರು 881 ರೇಟಿಂಗ್​ ಅಂಕ ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು 4ನೇ ಸ್ಥಾನದಲ್ಲಿದ್ದರು.

Exit mobile version