ಲಂಡನ್ : ಭಾರತ ಮಹಿಳೆಯರ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ (jhulan goswami) ಅವರಿಗೆ ಶನಿವಾರ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯ ವೃತ್ತಿ ಕ್ರಿಕೆಟ್‌ನ ಕೊನೇ ಪಂದ್ಯ. ಹೀಗಾಗಿ ಈ ಪಂದ್ಯದ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಕುತೂಹಲ ನೆಟ್ಟಿತ್ತು. ಅಚ್ಚರಿಯೆಂದರೆ ಈ ಪಂದ್ಯದಲ್ಲೂ ಅವರು ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದರು. ಅದೇನೆಂದರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೧೦ ಸಾವಿರಕ್ಕಿಂತ ಹೆಚ್ಚು ಎಸೆತಗಳನ್ನು ಎಸೆದ ಏಕೈಕ ಮಹಿಳಾ ಬೌಲರ್ ಎಂಬ ಖ್ಯಾತಿ.
ಜೂಲನ್ ಅವರು ಶನಿವಾರದ ಪಂದ್ಯದಲ್ಲಿ ೧೦ ಓವರ್‌ಗಳನ್ನು ಎಸೆದು ೩೦ ರನ್ ನೀಡಿ ೨ ವಿಕೆಟ್ ಕಬಳಿಸಿದರು. ೧೦ನೇ ಓವರ್‌ನ ಕೊನೇ ಎಸೆತ ಅವರ ವೃತ್ತಿ ಜೀವನದ ೧೦೦೦೧ನೇ ಎಸೆತವಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೧೦ ಸಾವಿರ ಮತ್ತು ಅದಕ್ಕಿಂತ ಅಧಿಕ ಎಸೆತಗಳನ್ನು ಎಸೆದ ಏಕೈಕ ಮಹಿಳಾ ಬೌಲರ್ ಎನಿಸಿಕೊಂಡರು. ವಿಶ್ವದ ಇನ್ಯಾವುದೇ ಮಹಿಳಾ ಬೌಲರ್ ಏಳು ಸಾವಿರಕ್ಕಿಂತ ಹೆಚ್ಚು ಎಸೆತಗಳನ್ನು ಎಸೆದಿಲ್ಲ.
೨೦ ವರ್ಷ ಕ್ರಿಕೆಟ್ ಆಡಿರುವ ಜೂಲನ್ ಗೋಸ್ವಾಮಿ ಅವರು ಒಟ್ಟಾರೆ ೨೫೫ ಏಕದಿನ ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಇದನ್ನೂ ಓದಿ |Jhulan Goswami | ಕೋಲ್ಕೊತಾದ ಈಡನ್ ಗಾರ್ಡನ್ಸ್ ಸ್ಟೇಡಿಯಮ್‌ಗೆ ಜೂಲನ್ ಹೆಸರು ನಾಮಕರಣ