ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ನಲ್ಲಿ (ICC World Cup 2023) ಇಂಗ್ಲೆಂಡ್ ಪರ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಜೋ ರೂಟ್ (Joe Root) ಪಾತ್ರರಾಗಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ 2023 ರ ಪಂದ್ಯದ ವೇಳೆ ಅವರು ಇಂಗ್ಲೆಂಡ್ನ ಮಾಜಿ ನಾಯಕ ಗ್ರಹಾಂ ಗೂಚ್ ಅವರ ದಾಖಲೆಯನ್ನು ಮುರಿದರು. ನ್ಯೂಜಿಲೆಂಡ್ ವಿರುದ್ಧದ ಇಂಗ್ಲೆಂಡ್ ವಿಶ್ವಕಪ್ 2023 ರ ಆರಂಭಿಕ ಪಂದ್ಯದಲ್ಲಿ ರೂಟ್ 68 ಎಸೆತಗಳಲ್ಲಿ 82 ರನ್ ಗಳಿಸಿದರು. ಅವರು ಕಿವೀಸ್ ವಿರುದ್ಧದ ಮೊದಲು ಪಂದ್ಯದಲ್ಲಿಯೂ 77 ರನ್ ಗಳಿಸಿದ್ದರು. ಇದೀಗ ವಿಶ್ವಕಪ್ನಲ್ಲಿ ಕೇವಲ 19 ಪಂದ್ಯಗಳಲ್ಲಿ 917 ರನ್ ಗಳಿಸಿದ್ದಾರೆ. 1979ರಿಂದ 1992ರ ಅವಧಿಯಲ್ಲಿ ಆಡಿದ ಗೂಚ್ 21 ಪಂದ್ಯಗಳಲ್ಲಿ 897 ರನ್ ಗಳಿಸಿದ್ದರು. ರೂಟ್ ಅವರ 57 ಸರಾಸರಿ ರನ್ ಹೊಂದಿದ್ದರೆ ಗೂಚ್ 44.85 ಸರಾಸರಿಯನ್ನು ಹೊಂದಿದ್ದರು.
ಈ ಸುದ್ದಿಗಳನ್ನೂ ಓದಿ
kohli vs Naveen : ಕೊಹ್ಲಿ- ನವಿನ್ ಫೈಟ್ ಪಕ್ಕಾ; ಆದ್ರೆ ಆಪ್ಘನ್ ನಾಯಕ ಹೇಳಿದ್ದೇನು?
Virat kohli : ನಾಲ್ಕು ಪದಗಳಲ್ಲಿ ಅಣ್ಣನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿಯ ತಂಗಿ
IOC Session: ಮುಂಬೈನಲ್ಲಿ ನಡೆಯಲಿದೆ ಐತಿಹಾಸಿಕ ಒಲಿಂಪಿಕ್ಸ್ ಅಧಿವೇಶನ; ಏನಿದರ ವಿಶೇಷ?
ಇಂಗ್ಲೆಂಡ್ ಪರ ಇಯಾನ್ ಬೆಲ್ (718 ರನ್), ಅಲನ್ ಲ್ಯಾಂಬ್ (656 ರನ್) ಮತ್ತು ಗ್ರೇಮ್ ಹಿಕ್ (635 ರನ್) ನಂತರದ ಸ್ಥಾನಗಳಲ್ಲಿದ್ದಾರೆ. ಬಲಗೈ ಬ್ಯಾಟರ್ಗೆ ರೂಟ್ ಅವರಿಗೆ ಅವರ ಮೂರನೇ ಏಕದಿನ ವಿಶ್ವಕಪ್. ಅಲ್ಲದೆ, ಪ್ರತಿಯೊಂದು ಪಂದ್ಯಾವಳಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ 120 ಸ್ಟ್ರೈಕ್ ರೇಟ್ ಹೊಂದಿದ್ದ ಬಲಗೈ ಬ್ಯಾಟರ್, ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ರೂಟ್ ತಮ್ಮ ಬ್ಯಾಟಿಂಗ್ ಶೈಲಿಯನ್ನು ಮರುರೂಪಿಸಿದ್ದಾರೆ. ರಿವರ್ಸ್ ಸ್ವೀಪ್ ಮತ್ತು ರ್ಯಾಂಪ್ ಶಾಪ್ ಅಥವಾ ಫೈನ್-ಲೆಗ್ ಸ್ಕೂಪ್ ಈಗ ಅವರ ಬ್ಯಾಟಿಂಗ್ನಲ್ಲಿ ಸಾಮಾನ್ಯ ಲಕ್ಷಣವಾಗಿದೆ. ಅವರು ಪ್ರತಿ 10 ಎಸೆತಗಳಲ್ಲಿ ಕನಿಷ್ಠ ಒಂದು ವಿಶೇಷ ಶಾಟ್ ಅನ್ನು ಪ್ರಯತ್ನಿಸಿದ್ದಾರೆ.
ಅವರು ತಮ್ಮ ನಾಲ್ಕನೇ ವಿಶ್ವಕಪ್ ಶತಕಕ್ಕಾಗಿ ಪ್ರಯತ್ನಿಸುತ್ತಿದ್ದರು. ಈ ನಡುವೆಯೂ ಅವರು ತ್ವರಿತ ರನ್ಗಳನ್ನು ಗಳಿಸುವ ಪ್ರಯತ್ನದಲ್ಲಿ ಔಟಾದರು. ಆದಾಗ್ಯೂ, ಇಂಗ್ಲೆಂಡ್ ಇನ್ನಿಂಗ್ಸ್ ಡೇವಿಡ್ ಮಲಾನ್ ಅವರ ಪರವಾಯಿತು. ಮಲಾನ್ ಅವರ 107 ಎಸೆತಗಳಲ್ಲಿ 140 ರನ್ ಗಳಿಸಿದರು. ಇದು ಬಾಂಗ್ಲಾದೇಶ ವಿರುದ್ಧ ದೊಡ್ಡ ಮೊತ್ತ ಸೇರಿಸಲು ನೆರವಾಯಿತು.
ಇಂಗ್ಲೆಂಡ್ಗೆ 137 ರನ್ ಜಯ
ಡೇವಿಡ್ ಮಲಾನ್ ಅವರ ಅಮೋಘ 140 ರನ್ ಹಾಗೂ ರೀಸ್ ಟೋಪ್ಲೆಯ 4 ವಿಕೆಟ್ ಸಾಧನೆಯೊಂದಿಗೆ ಮಿಂಚಿದ ಇಂಗ್ಲೆಂಡ್ ತಂಡ ವಿಶ್ವ ಕಪ್ನ (ICC world Cup 2023) ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 137 ರನ್ಗಳಿಂದ ಸೋಲಿಸಿದೆ. ಇದರೊಂದಿಗೆ ಆಂಗ್ಲರ ಪಡೆ ಗೆಲುವಿನ ಹಳಿಗೆ ಮರಳಿದೆ. ಜೋಸ್ ಬಟ್ಲರ್ ನೇತೃತ್ವದ ಮಾಜಿ ಚಾಂಪಿಯನ್ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ 9 ವಿಕೆಟ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಇದೀಗ ದೊಡ್ಡ ಅಂತರದ ಗೆಲುವು ಸಾಧಿಸುವ ಮೂಲಕ ವಿಶ್ವಾಸ ಮೂಡಿಸಿಕೊಂಡಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 364 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾ ಬಳಗ 48. 2 ಓವರ್ಗಳಲ್ಲಿ 227 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಬಾಂಗ್ಲಾದೇಶ ವಿಶ್ವ ಕಪ್ನLFLI ತನ್ನ ಮೊದಲ ಸೋಲಿಗೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ ಅಫಘಾನಿಸ್ತಾನ ತಂಡವನ್ನು ಮಣಿಸಿತ್ತು.