Site icon Vistara News

Joe Root : ಟೆಸ್ಟ್​ ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಇಂಗ್ಲೆಂಡ್ ಆಟಗಾರ ಜೋ ರೂಟ್

Joe Root

ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಡಾ.ವೈ.ಎಸ್.ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಆತಿಥೇಯ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್​ ಪರ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ಆರಂಭಿಸಿದರು ಮತ್ತು ಆಶ್ಚರ್ಯಕರ ರೀತಿಯಲ್ಲಿ ಅರೆಕಾಲಿಕ ಸ್ಪಿನ್ನರ್​ ಜೋ ರೂಟ್ ಇನ್ನೊಂದು ತುದಿಯಿಂದ ಬೌಲಿಂಗ್ ಅನ್ನು ಪ್ರಾರಂಭಿಸಿದರು. ಈ ಮೂಲಕ ಕಳೆದ 102 ವರ್ಷಗಳಲ್ಲಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಪರ ಬೌಲಿಂಗ್ ಆರಂಭಿಸಿದ ಎರಡನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ. ಜ್ಯಾಕ್​ ಲೀಚ್​ ಮೊದಲ ಸ್ಪಿನ್ನರ್​ ಆಗಿದ್ದರು.

ವಿಶೇಷವೆಂದರೆ ಲೀಚ್ 2022 ರಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಓವರ್ ಎಸೆದಾಗ ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಆಗಿದ್ದರು. ಈ ಸರಣಿಯಲ್ಲಿ ರೂಟ್ ಚೆಂಡಿನೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ, ಆರಂಭಿಕ ಪಂದ್ಯದಲ್ಲಿ ಅವರು ಐದು ವಿಕೆಟ್​ಗಳನ್ನು ಪಡೆದಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ಭಾರತದ ವಿರುದ್ಧ 28 ರನ್​ಗಳ ಗೆಲುವು ದಾಖಲಿಸಲು ಸಹಾಯ ಮಾಡಿತ್ತು.

ವರ್ಷಗಳಲ್ಲಿ ರೂಟ್ ತಮ್ಮ ಬೌಲಿಂಗ್​ನಲ್ಲಿ ಸುಧಾರಣೆ ಕಾಣುತ್ತಿದ್ದಾರೆ. ಥ್ರೀ ಲಯನ್ಸ್ ಪರ ಉತ್ತಮ ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ನಲ್ಲಿ 11,447 ರನ್ ಗಳಿಸಿರುವ ರೂಟ್, 65 ಟೆಸ್ಟ್ ವಿಕೆಟ್​​ಗಳನ್ನೂ ಪಡೆದಿದ್ದಾರೆ.

ಜನವರಿ 31 ರಂದು ಐಸಿಸಿ ತನ್ನ ಸಾಪ್ತಾಹಿಕ ಶ್ರೇಯಾಂಕದ ಪಟ್ಟಿಯನ್ನು ಅಪ್​ಡೇಟ್ ಮಾಡಿತ್ತು. ಅದರಲ್ಲಿ ಜೋ ರೂಟ್ ಬೆನ್ ಸ್ಟೋಕ್ಸ್ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್​ನ ಅತ್ಯುನ್ನತ ಶ್ರೇಯಾಂಕದ ಟೆಸ್ಟ್ ಆಲ್ರೌಂಡರ್ ಆಗಿದ್ದಾರೆ. ಅಂಕಪಟ್ಟಿಯಲ್ಲಿ ರೂಟ್ ನಾಲ್ಕನೇ ಸ್ಥಾನದಲ್ಲಿದ್ದರೆ ಮೊಣಕಾಲು ಸಮಸ್ಯೆಯಿಂದಾಗಿ ಬೌಲಿಂಗ್​ನಲಿಂದ ದೂರ ಉಳಿದಿರುವ ಸ್ಟೋಕ್ಸ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಜೇಮ್ಸ್ ಆಂಡರ್ಸನ್ ಅವರೊಂದಿಗೆ ಜೋ ರೂಟ್ ಬೌಲಿಂಗ್ ಆರಂಭಿಸಿದ್ದಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ಚೆಂಡಿನೊಂದಿಗೆ ದಾಖಲೆಗಳನ್ನು ಬರೆಯುವುದರ ಜೊತೆಗೆ, ರೂಟ್ ತಮ್ಮ ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸಚಿನ್ ತೆಂಡೂಲ್ಕರ್ ಪಾತ್ರರಾಗಿದ್ದಾರೆ.

ಮೊಹಮ್ಮದ್ ಸಿರಾಜ್ 2ನೇ ಪಂದ್ಯದಲ್ಲಿ ಯಾಕೆ ಆಡುತ್ತಿಲ್ಲ

ವಿಶಾಖಪಟ್ಟಣಂ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಿಂದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಕೈಬಿಡಲಾಗಿದೆ. ಎಲ್ಲಾ ಸ್ವರೂಪಗಳಲ್ಲಿ ನಿರಂತರವಾಗಿ ಆಡುತ್ತಿರುವ ಸಿರಾಜ್ ಅವರ ಕಾರ್ಯದೊತ್ತಡ ನಿರ್ವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Mohammed Siraj : ಮೊಹಮ್ಮದ್ ಸಿರಾಜ್ 2ನೇ ಪಂದ್ಯದಲ್ಲಿ ಯಾಕೆ ಆಡುತ್ತಿಲ್ಲ? ಇಲ್ಲಿದೆ ವಿವರಣೆ

ಸಿರಾಜ್ ಅವರ ಅನುಪಸ್ಥಿತಿಯು ಮುನ್ನೆಚ್ಚರಿಕೆ ಕ್ರಮವಾಗಿದ್ದು, ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತದ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ವಿಶೇಷವಾಗಿ ಟೆಸ್ಟ್​ ಸರಣಿಯು ಸರಣಿಯು ಸುದೀರ್ಘ ಮತ್ತು ಕಠಿಣ ಸ್ಪರ್ಧೆಯಾಗಿದೆ. ಹೀಗಾಗಿ ತಂಡದ ನಿರ್ಧಾರವು ವೇಗಿಯ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಮತ್ತು ಭವಿಷ್ಯದ ಕಾರ್ಯತಂತ್ರಗಳಿಗೆ ಅವರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಯೋಜನೆಯಾಗಿದೆ.

ಸ್ಫೋಟಕ ಸ್ಪೆಲ್​ಗಳು ಮತ್ತು ನಿರ್ಣಾಯಕ ವಿಕೆಟ್​ಗಲಿಗೆ ಹೆಸರುವಾಸಿಯಾದ ಸಿರಾಜ್, ಭಾರತದ ವೇಗದ ದಾಳಿಯ ಪ್ರಮುಖ ಭಾಗವಾಗಿದ್ದಾರೆ. ತಂಡದ ಪಾಲಿಗೆ ಇದು ಗಮನಾರ್ಹ ಬೆಳವಣಿಗೆಯಾಗಿದೆ. ಕಳೆದ ವರ್ಷ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್​ ಅಂಕಿಅಂಶಗಳು ಎಲ್ಲಾ ಸ್ವರೂಪಗಳಲ್ಲಿ ಅದ್ಭುತವಾಗಿದ್ದವು. ಇದರ ಪರಿಣಾಮವಾಗಿ ಈ ವಿಶ್ರಾಂತಿಯ ಅವಧಿಯು ಅವರಿಗೆ ಹೆಚ್ಚು ಅಗತ್ಯವಾಗಿದೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸಿದೆ. ಹೀಗಾಗಿ ಸರಣಿಯನ್ನು ಸಮಬಲಗೊಳಿಸುವ ಗುರಿಯೊಂದಿಗೆ ಭಾರತ ತಂಡ ಸಿರಾಜ್ ಬದಲಿಗೆ ಮುಖೇಶ್ ಕುಮಾರ್ ಅವರನ್ನು ಎರಡನೇ ಟೆಸ್ಟ್​ ಪಂದ್ಯಕ್ಕೆ ಆಯ್ಕೆ ಮಾಡಿಕೊಂಡಿದೆ. ಗಾಯಗೊಂಡಿರುವ ಕೆಎಲ್ ರಾಹುಲ್ ಬದಲಿಗೆ ರಜತ್ ಪಾಟಿದಾರ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ರವೀಂದ್ರ ಜಡೇಜಾ ಬದಲಿಗೆ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.

Exit mobile version