ಹೈದರಾಬಾದ್: ಗುರುವಾರದಂದು(ಜನವರಿ 25) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್(IND vs ENG) ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್(Joe Root) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(Sachin Tendulkar) ಅವರ ಬೃಹತ್ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದಾರೆ.
33 ವರ್ಷದ ಜೋ ರೂಟ್ಗೆ ಸಚಿನ್ ದಾಖಲೆ ಮುರಿಯಲು ಕೇವಲ 10 ರನ್ ಅಗತ್ಯವಿದೆ. ಈ ರನ್ ಬಾರಿಸಿದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ರೂಟ್ ಪಾಲಾಗಲಿದೆ. ಸದ್ಯಕ್ಕೆ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.
ಸಚಿನ್ ತೆಂಡೂಲ್ಕರ್ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ಗಳಲ್ಲಿ 32 ಪಂದ್ಯಗಳಲ್ಲಿ 51.73 ಸರಾಸರಿಯಲ್ಲಿ 2,535 ರನ್ ಗಳಿಸುವ ಮೂಲಕ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಏಳು ಶತಕ ಮತ್ತು 13 ಅರ್ಧಶತಕಗಳನ್ನು ಗಳಿಸಿದ್ದಾರೆ. ರೂಟ್ ಅವರು ಭಾರತದ ವಿರುದ್ಧ 25 ಪಂದ್ಯಗಳಿಂದ 63.15 ಸರಾಸರಿಯಲ್ಲಿ ಒಂಬತ್ತು ಶತಕಗಳು ಮತ್ತು 10 ಅರ್ಧ ಶತಕಗಳೊಂದಿಗೆ 2,526 ರನ್ ಗಳಿಸಿದ್ದಾರೆ.
ಇದನ್ನೂ ಓದಿ IND vs ENG: ಹಲವು ದಾಖಲೆ ಬರೆಯಲು ಸಜ್ಜಾದ ಅಶ್ವಿನ್, ಜಡೇಜಾ
Test centuries by Joe Root against India, joint most centuries by a batter against India and the most career centuries by Root against any team.@root66 unleashes his best against India💯 pic.twitter.com/dh8KtL5bd6
— Ayesha⁶⁶ (@JoeRoot66Fan) January 18, 2024
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. 38 ಪಂದ್ಯಗಳಲ್ಲಿ, ಅವರು 38.20 ಸರಾಸರಿಯಲ್ಲಿ 2,483 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 16 ಅರ್ಧಶತಕಗಳು ಸೇರಿವೆ.
ಇದನ್ನೂ ಓದಿ IND vs ENG: ಭಾರತದಲ್ಲಿ ಇಂಗ್ಲೆಂಡ್ ತಂಡದ ಟೆಸ್ಟ್ ಇತಿಹಾಸವೇ ಬಲು ರೋಚಕ!
ಭಾರತದ ವಿರುದ್ಧ 30 ಟೆಸ್ಟ್ ಪಂದ್ಯಗಳಲ್ಲಿ 47.66 ಸರಾಸರಿಯಲ್ಲಿ 2,431 ರನ್ ಗಳಿಸಿದ ಮಾಜಿ ಇಂಗ್ಲೆಂಡ್ ನಾಯಕ ಅಲಿಸ್ಟೈರ್ ಕುಕ್ ಅವರು ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಕುಕ್ ಭಾರತದ ವಿರುದ್ಧ ಏಳು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ. 294 ರನ್ನುಗಳು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ.
Joe Root is just 9 runs away from rewriting history! 🌟#JoeRoot #Cricket #INDvENG #England #Sportskeeda pic.twitter.com/I5DlwN3gKO
— Sportskeeda (@Sportskeeda) January 24, 2024
ವಿರಾಟ್ ಕೊಹ್ಲಿ ಈ ಸಾಧಕರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. 35 ವರ್ಷದ ಕೊಹ್ಲಿ 28 ಪಂದ್ಯಗಳಿಂದ 1,991 ರನ್ ಗಳಿಸಿದ್ದಾರೆ. ಈ ಪೈಕಿ ಐದು ಶತಕ ಮತ್ತು ಒಂಬತ್ತು ಅರ್ಧಶತ ದಾಖಲಾಗಿದೆ. ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್‌ಗಳಿಂದ ಕೊಹ್ಲಿ ಹೊರಗುಳಿದಿದ್ದಾರೆ.
ಮೊದಲ ಟೆಸ್ಟ್ಗೆ ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.