Site icon Vistara News

Masale Dosa : ಬೆಂಗ್ಳೂರಲ್ಲಿ ಮಂಗ್ಳೂರ್ ಬನ್ಸ್​ ತಿಂದ ವಿಶ್ವ ಕ್ರಿಕೆಟ್​ನ ಬೆಸ್ಟ್​ ಫೀಲ್ಡರ್​

jonty Rhodes

ಬೆಂಗಳೂರು: ಪ್ರಸ್ತುತ ಗೋವಾದಲ್ಲಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ದಂತಕಥೆ ಜಾಂಟಿ ರೋಡ್ಸ್ ಭಾರತ ಮತ್ತು ಅದರ ಸಂಸ್ಕೃತಿಯ ಬಗ್ಗೆ ತಮ್ಮ ಪ್ರೀತಿಯನ್ನು ಹಲವಾರು ಬಾರಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪ್ರಯಾಣದ ವೇಳೆ ಅವರು ಮಂಗಳೂರು ಬನ್ಸ್​, ಮಸಾಲೆ ದೋಸೆ ತಿಂದಿರುವ ಕತೆಯನ್ನು ಅವರು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಅವರ ವೀಡಿಯೊದಲ್ಲಿ , ಭಾರತದ ಸಂಸ್ಕೃತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳನ್ನು ನೆಟ್ಟಿಗರು ಸಹ ಇಷ್ಟಪಟ್ಟಿದ್ದಾರೆ.

ಇತ್ತೀಚಿನ ಪೋಸ್ಟ್​​ನಲ್ಲಿ ಕ್ರಿಕೆಟ್ ವಿಶ್ವ ಕ್ರಿಕೆಟ್​ನ ಬೆಸ್ಟ್​ ಫೀಲ್ಡರ್​ ಬೆಂಗಳೂರಿನ ಟ್ಯಾಕ್ಸಿ ಚಾಲಕನ ಸ್ಥಳೀಯ ಬುದ್ಧಿವಂತಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಂಗಳೂರಿನ ಕುಖ್ಯಾತ ಟ್ರಾಫಿಕ್​ ಸಮಸ್ಯೆ ಎದುರಿಸುವ ಮೊದಲು ನೆಚ್ಚಿನ ರಸ್ತೆಬದಿಯ ತಿನಿಸುಗಳಲ್ಲಿ ಒಂದರಲ್ಲಿ ವಿರಾಮ ತೆಗೆದುಕೊಳ್ಳುವಂತೆ ಅವರ ಚಾಲಕ ಸಲಹೆ ನೀಡಿದರು. ರೋಡ್ಸ್ ಕೂಡ ಈ ಸಲಹೆಯನ್ನು ಅನುಸರಿಸಿದ್ದರು. ಈ ವೇಳೆ ಅವರು ಮಂಗಳೂರು ಬನ್ಸ್​, ಮಸಾಲೆ ದೋಸೆ ತಿಂದು ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ.

“ಬೆಂಗಳೂರು ವಿಮಾನ ನಿಲ್ದಾಣದಿಂದ ಹೋಗುತ್ತಿದ್ದಾರ ಟ್ಯಾಕ್ಸಿ ಚಾಲಕ ರಸ್ತೆಬದಿಯ ತಮ್ಮ ತನ್ನ ನೆಚ್ಚಿನ ರೆಸ್ಟೋರೆಂಟ್​ನಲ್ಲಿ ನಿಲ್ಲಿಸುವುದಾಗಿ ಹೇಳಿದೆ. ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಆದರೆ, ನಾನು ಹೋಟೆಲ್​ನಲ್ಲಿ ರುಚಿಕರ ಮಂಗ್ಳೂರ್ ಬನ್ಸ್​ , ಮಸಾಲೆ ದೋಸೆ ಸವಿದೆನು. ಜೊತೆಗೊಂದು ಮಸಾಲೆ ಚಾಯ್​ ಕೂಡ ಸೇರಿತ್ತು. ಪ್ರಯಾಣವು ಅತ್ಯುತ್ತಮವಾಗಿತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅವರು ಟ್ವೀಟ್ ಮಾಡಿದ ನಂತರ, ಇದು 373.6 ಕೆ ವೀಕ್ಷಣೆಗಳನ್ನು ಮತ್ತು ಸುಮಾರು 10,000 ಲೈಕ್​ಗಳನ್ನು ಗಳಿಸಿದೆ. ಇದಲ್ಲದೆ, ರೆಸ್ಟೋರೆಂಟ್ ಸಿಬ್ಬಂದಿಯೊಂದಿಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ICC Meeting : ತೃತಿಯ ಲಿಂಗಿಗಳಿಗೆ ಮಹಿಳಾ ಕ್ರಿಕೆಟ್​ ತಂಡದಲ್ಲಿ ಇಲ್ಲ ಚಾನ್ಸ್​

ಅಭಿಮಾನಿಗಳ ಪ್ರೀತಿ

ಸೋಷಿಯಲ್ ಮೀಡಿಯಾ ಬಳಕೆದಾರರು ಸಹ ಅವರ ಪೋಸ್ಟ್​​ಗೆ ಕಾಮೆಂಟ್ ಮಾಡಿದ್ದಾರೆ. “ಎಂದಿನಂತೆ ಅದ್ಭುತ ಕ್ಯಾಚ್, ಮಿಸ್ಟರ್ ರೋಡ್ಸ್!” ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು ರೋಡ್ಸ್ ಅವರನ್ನು ಭಾರತೀಯ ರೈಲ್ವೆಗೆ ಹೋಲಿಸಿದ್ದಾರೆ. “ಜಾಂಟಿ, ಇತ್ತೀಚಿನ ದಿನಗಳಲ್ಲಿ ನೀನು ಹೆಚ್ಚು ಭಾರತೀಯನಾಗುತ್ತಿರುವೆ.” ಇನ್ನೊಬ್ಬರು ಬರೆದಿದ್ದಾರೆ

ಐಸಿಸಿ ಪುರುಷರ ವಿಶ್ವಕಪ್ 2023 ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಈಡನ್ ಗಾರ್ಡನ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಭಾರತ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದ ನಂತರ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜಾಂಟಿ ರೋಡ್ಸ್ ಎಕ್ಸ್ ನಲ್ಲಿ ಕಾಮೆಂಟ್ ಒಂದನ್ನು ಮಾಡಿದ್ದರು. ಅವರು ತಮ್ಮ ರಾಯಲ್ ಎನ್ಫೀಲ್ಡ್ ಹಂಟರ್​ನ ಫೋಟೋವನ್ನು ಪೋಸ್ಟ್ ಮಾಡಿದ್ದರು. “ಚೆನ್ನಾಗಿ ಸ್ವಚ್ಛಗೊಳಿಸಲಾಗಿದೆ” ಎಂದು ಬರೆದುಕೊಂಡಿದ್ದರು.

Exit mobile version