Site icon Vistara News

Jonty Rhodes : ನಾಚಿಕೆಯಾಗಲ್ವಾ ನಿಂಗೆ? ನೆಟ್ಟಿಗನಿಗೆ ಬೆಂಡೆತ್ತಿದ ಜಾಂಟಿ ರೋಡ್ಸ್​

Jonty Rhodes

ಬೆಂಗಳೂರು : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಭಾರತ ಮತ್ತು ಭಾರತೀಯರ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ (ಅವರು ತಮ್ಮ ಮಗಳಿಗೆ ಇಂಡಿಯಾ ಎಂಬ ಹೆಸರನ್ನು ಇಟ್ಟಿದ್ದಾರೆ). ಅವರು ಈಗ ಭಾರತದಲ್ಲಿಯೇ ಇದ್ದು ನಾನಾ ಕಡೆ ಪ್ರವಾಸ ಮಾಡುತ್ತಿದ್ದಾರೆ. ಏತನ್ಮಧ್ಯೆ ಅವರು ಬೆಂಗಳೂರು ಪ್ರವಾಸದ ವೇಳೆ ಮಸಾಲೆ ದೋಸೆ ತಿಂದು ಸುದ್ದಿಯಲ್ಲಿದ್ದರು. ಅದೇ ವಿಷಯ ಈಗ ವಿವಾದಕ್ಕೆ ಕಾರಣವಾಗಿದ್ದು, ತಮ್ಮನ್ನು ಗುರಿಯಾಗಿಸಿದ ಬಳಕೆದಾರನಿಗೆ ಮಾಜಿ ಫೀಲ್ಡರ್ ಬೆಂಡೆತ್ತಿದ್ದಾರೆ.

ಜಾಂಟಿ ರೋಡ್ಸ್​ ಮಸಾಲೆ ದೋಸೆ ತಿನ್ನುವಾಗ ತಮ್ಮ “ಚಾಲಕನಿಗೆ” ಕೊಟ್ಟಿಲ್ಲ ಎಂಬುದೇ ನೆಟ್ಟಿಗನ ಆರೋಪವಾಗಿದೆ. ಅದಕ್ಕೆ ಸ್ಪಷ್ಟನೆ ನೀಡಿದ ಅವರು ಅನಗತ್ಯ ಟೀಕೆ ಮಾಡಿದ ವ್ಯಕ್ತಿಯನ್ನು ಬೆಂಡೆತ್ತಿದ್ದಾರೆ. ತಮ್ಮ ಜತೆಗೆ ಇರುವ ವ್ಯಕ್ತಿ ಚಾಲಕನಲ್ಲ. ನನ್ನ ಟೇಬಲ್​ನ ಮುಂದೆ ಇರುವ ವ್ಯಕ್ತಿ ಅನಾಮಿಕ ವ್ಯಕ್ತಿ. ನನ್ನ ಚಿತ್ರವನ್ನು ತೆಗೆದಿದ್ದು ಚಾಲಕ. ಆತ ತಿಂಡಿ ತಿನ್ನಲ್ಲ ಎಂದು ಹೇಳಿದ್ದ. ಕೇವಲ ಟಿ ಮಾತ್ರ ಕುಡಿದಿದ್ದಾನೆ. ಆತನ ದುಡ್ಡನ್ನೂ ನಾನೇ ಪಾವತಿ ಮಾಡಿದ್ದೇನೆ. ಅನಗತ್ಯ ಟೀಕೆ ಮಾಡಲು ನಾಚಿಕೆಯಾಗಲ್ವೇ ಎಂದು ಜಾಂಟಿ ರೋಡ್ಸ್​ ಆರೋಪ ಮಾಡಿದವನಿಗೆ ಬೆಂಡೆತ್ತಿದ್ದಾರೆ.

ನಾನಾ ಚಾಲಕನ ಚಹಾದ ದುಡ್ಡು ಪಾವತಿ ಮಾಡಿದ್ದೇನೆ . ಚಿತ್ರದ ಸತ್ಯವನ್ನು ತಿಳಿಯದೆ ಕಾಮೆಂಟ್ ಮಾಡಿದ ಬಳಕೆದಾರರಿಗೆ “#shameonyou” ಹ್ಯಾಶ್ ಟ್ಯಾಗ್ ಹಾಕಿ ಜಾಂಟಿ ರೋಡ್ಸ್​ ಪಾಠ ಹೇಳಿದ್ದಾರೆ.

“ನಾನು ಒಂದೆರಡು ದಿನಗಳಿಂದ ಅನಗತ್ಯ ಗೊಂದಲದಲ್ಲದ್ದೇನೆ. ನನ್ನ ಮುಂದಿವರು ವ್ಯಕ್ತಿ ನನಗೆ ಅಪರಿಚಿತ. ನನ್ನ ಚಾಲಕ ಫೋಟೊ ತೆಗೆದಿದ್ದಾರೆ. ಅವರು ತಿಂಡಿ ತಿನ್ನಲಿಲ್ಲ, ಅವರ ನೆಚ್ಚಿನ ಕೆಲವು ಆಹಾರವನ್ನು ನನಗಾಗಿ ಆರ್ಡರ್ ಮಾಡಿದರು. ಅವರು ಚಹಾವನ್ನು ಸೇವಿಸದ್ದಾರೆ. ಹೌದು, ನಾನು ಅವರ ಹಣವನ್ನೂ ಪಾವತಿಸಿದೆ” ಎಂದು ರೋಡ್ಸ್ ತಮ್ಮ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಜಾಂಟಿ ಮಾಹಿತಿ ಸ್ಪಷ್ಟಪಡಿಸಿದ ನಂತರ, ಎಕ್ಸ್ ಬಳಕೆದಾರೊಬ್ಬರು ತಮ್ಮದೇ ಆದ ಹಾಸ್ಯಮಯ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. “ಜಾಂಟಿ ಅಪರಿಚಿತರಿಗೆ ಆಹಾರವನ್ನು ಏಕೆ ನೀಡಲಿಲ್ಲ ಎಂದು ಯಾರಾದರೂ ಕೇಳಲು ಕಾಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಏನಿದು ಮಸಾಲೆ ದೋಸೆ ಕತೆ?

ಇತ್ತೀಚಿನ ಪೋಸ್ಟ್​​ನಲ್ಲಿ ಕ್ರಿಕೆಟ್ ವಿಶ್ವ ಕ್ರಿಕೆಟ್​ನ ಬೆಸ್ಟ್​ ಫೀಲ್ಡರ್​ ಬೆಂಗಳೂರಿನ ಟ್ಯಾಕ್ಸಿ ಚಾಲಕನ ಬುದ್ಧಿವಂತಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಂಗಳೂರಿನ ಕುಖ್ಯಾತ ಟ್ರಾಫಿಕ್​ ಸಮಸ್ಯೆ ಎದುರಿಸುವ ಮೊದಲು ನೆಚ್ಚಿನ ಹೋಟೆಲ್​ನ ತಿನಿಸುಗಳಲ್ಲಿ ಒಂದರಲ್ಲಿ ವಿರಾಮ ತೆಗೆದುಕೊಳ್ಳುವಂತೆ ಚಾಲಕ ಸಲಹೆ ನೀಡಿದ್ದನ್ನು ಸ್ಮರಿಸಿಕೊಂಡಿದ್ದರು.

ರೋಡ್ಸ್ ಚಾಲಕನ ಸಲಹೆಯನ್ನು ಅನುಸರಿಸಿದ್ದರು. ಈ ವೇಳೆ ಅವರು ಮಂಗಳೂರು ಬನ್ಸ್​, ಮಸಾಲೆ ದೋಸೆ ತಿಂದು ಅದರ ಚಿತ್ರವನ್ನು ಹಂಚಿಕೊಂಡಿದ್ದರಯ. “ಬೆಂಗಳೂರು ವಿಮಾನ ನಿಲ್ದಾಣದಿಂದ ಹೋಗುತ್ತಿದ್ದಾರ ಟ್ಯಾಕ್ಸಿ ಚಾಲಕ ರಸ್ತೆಬದಿಯ ತಮ್ಮ ತನ್ನ ನೆಚ್ಚಿನ ರೆಸ್ಟೋರೆಂಟ್​ನಲ್ಲಿ ನಿಲ್ಲಿಸುವುದಾಗಿ ಹೇಳಿದೆ. ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಆದರೆ, ನಾನು ಹೋಟೆಲ್​ನಲ್ಲಿ ರುಚಿಕರ ಮಂಗ್ಳೂರ್ ಬನ್ಸ್​ , ಮಸಾಲೆ ದೋಸೆ ಸವಿದೆನು. ಜೊತೆಗೊಂದು ಮಸಾಲೆ ಚಾಯ್​ ಕೂಡ ಸೇರಿತ್ತು. ಪ್ರಯಾಣವು ಅತ್ಯುತ್ತಮವಾಗಿತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : DeepFake: ಸೋಶಿಯಲ್‌ ಮೀಡಿಯಾಗಳಿಗೆ 7 ದಿನಗಳ ಡೆಡ್‌ಲೈನ್‌ ನೀಡಿದ ಕೇಂದ್ರ

ಅವರು ಟ್ವೀಟ್ ಮಾಡಿದ ನಂತರ, ಇದು 373.6 ಕೆ ವೀಕ್ಷಣೆಗಳನ್ನು ಮತ್ತು ಸುಮಾರು 10,000 ಲೈಕ್​ಗಳನ್ನು ಗಳಿಸಿದೆ. ಇದಲ್ಲದೆ, ರೆಸ್ಟೋರೆಂಟ್ ಸಿಬ್ಬಂದಿಯೊಂದಿಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಅಭಿಮಾನಿಗಳ ಪ್ರೀತಿ

ಸೋಷಿಯಲ್ ಮೀಡಿಯಾ ಬಳಕೆದಾರರು ಸಹ ಅವರ ಪೋಸ್ಟ್​​ಗೆ ಕಾಮೆಂಟ್ ಮಾಡಿದ್ದಾರೆ. “ಎಂದಿನಂತೆ ಅದ್ಭುತ ಕ್ಯಾಚ್, ಮಿಸ್ಟರ್ ರೋಡ್ಸ್!” ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು ರೋಡ್ಸ್ ಅವರನ್ನು ಭಾರತೀಯ ರೈಲ್ವೆಗೆ ಹೋಲಿಸಿದ್ದಾರೆ. “ಜಾಂಟಿ, ಇತ್ತೀಚಿನ ದಿನಗಳಲ್ಲಿ ನೀನು ಹೆಚ್ಚು ಭಾರತೀಯನಾಗುತ್ತಿರುವೆ.” ಇನ್ನೊಬ್ಬರು ಬರೆದಿದ್ದಾರೆ

ಐಸಿಸಿ ಪುರುಷರ ವಿಶ್ವಕಪ್ 2023 ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಈಡನ್ ಗಾರ್ಡನ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಭಾರತ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದ ನಂತರ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜಾಂಟಿ ರೋಡ್ಸ್ ಎಕ್ಸ್ ನಲ್ಲಿ ಕಾಮೆಂಟ್ ಒಂದನ್ನು ಮಾಡಿದ್ದರು. ಅವರು ತಮ್ಮ ರಾಯಲ್ ಎನ್ಫೀಲ್ಡ್ ಹಂಟರ್​ನ ಫೋಟೋವನ್ನು ಪೋಸ್ಟ್ ಮಾಡಿದ್ದರು. “ಚೆನ್ನಾಗಿ ಸ್ವಚ್ಛಗೊಳಿಸಲಾಗಿದೆ” ಎಂದು ಬರೆದುಕೊಂಡಿದ್ದರು.

Exit mobile version